ಗರ್ಭಕಂಠದ ಕ್ಯಾನ್ಸ್ರಗೆ ಪ್ರತಿವರ್ಷ ಸಾಕಷ್ಟು ಮಹಿಳೆಯರು ತುತ್ತಾಗುತ್ತಾರೆ. ಇದನ್ನು ತಡೆಗಟ್ಟಲು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII), ಕ್ವಾಡ್ರೈವೆಲೆಂಟ್ ಹ್ಯೂಮನ್ ಪ್ಯಾಪಿಲೋಮವೈರಸ್ ಎಂಬ ಲಸಿಕೆ ಯನ್ನು (QHPV) ಕಂಡು ಹಿಡದಿದೆ. ಈ ಲಸಿಕೆಯನ್ನು ವರ್ಷಾಂತ್ಯದ ವೇಳೆಗೆ ರಾಷ್ಟ್ರೀಯ ಪ್ರತಿರಕ್ಷಣೆ ಕಾರ್ಯಕ್ರಮದ ಭಾಗವಾಗಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಯೋಜಿಸಿದೆ. ಈ ಮೂಲಕ ಭಾರತದ ಮೊದಲ ಗರ್ಭಕಂಠ ಕ್ಯಾನ್ಸ್ರ ನಿವಾರಕ ಲಸಿಕೆ ಇದಾಗಿದೆ.
ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಹೋರಾಡಲು ಇದು ಉತ್ತಮ ಔಷಧಿಯಾಗಿದೆ ಮತ್ತು ವಿಜ್ಞಾನಿಗಳಿಗೆ ದೊರೆತ ಉತ್ತಮ ಅವಕಾಶ ಇದಾಗಿದೆ. ಈ ಲಸಿಕೆ ಮಾರುಕಟ್ಟೆಗಳಲ್ಲಿ ಜನರಿಗೆ ಕೈಗೆಟುಕುವ ದರದಲ್ಲಿರುತ್ತದೆ ಎಂದು ಹೇಳಿದ್ದಾರೆ
ಗರ್ಭಕಂಠದ ಕ್ಯಾನ್ಸರ್, ಕ್ಯಾನ್ಸರ್‌ನ ಎರಡನೇ ಅತ್ಯಂತ ಸಾಮಾನ್ಯವಾದ ವಿಧವಾಗಿದೆ. ಗರ್ಭಕಂಠದ ಕ್ಯಾನ್ಸರ್ 15 ರಿಂದ 44 ವರ್ಷದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC-WHO) ಪ್ರಕಾರ ಪ್ರತಿ ವರ್ಷ 1.23 ಲಕ್ಷ ಜನರು ಈ ರೋಗಕ್ಕೆ ತುತ್ತಾಗುತ್ತಾರೆ. ಮತ್ತು ಸುಮಾರು 67,000 ಜನರು ಸಾವನ್ನಪ್ಪುತ್ತಾರೆ. ಗರ್ಭಕಂಠದ ಕ್ಯಾನ್ಸರ್ ಜಗತ್ತಿನ ಐದನೇ ಒಂದು ಭಾಗವನ್ನು ಭಾರತ ಹೊಂದಿದೆ.
ಭಾರತದ ಡ್ರಗ್ ಕಂಟ್ರೋಲರ್ ಜನರಲ್ (DGCI) ಜುಲೈ 6 ರಂದು ಕಂಪನಿಯು ಲಸಿಕೆ ತಯಾರಿಕೆಯನ್ನು ಪ್ರಾರಂಭಿಸಲು ಅನುಮತಿ ನೀಡಿತು. ನಂತರ ಕಂಪನಿ ಜುಲೈ 12 ರಂದು ಮಾರುಕಟ್ಟೆ ಅಧಿಕಾರವನ್ನು ಶಿಫಾರಸು ಮಾಡಿತು. ವಿಷಯ ತಜ್ಞರ ಸಮಿತಿಯ (SEC) ಶಿಫಾರಸಿನ ನಂತರ ಔಷಧ ನಿಯಂತ್ರಕ ತನ್ನ ಅನುಮೋದನೆಯನ್ನು ನೀಡಿದೆ .
ವಿಶ್ವ ಆರೋಗ್ಯ ಸಂಸ್ಥೆಯ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC-WHO) ಪ್ರಕಾರ. ಲಸಿಕೆ, ಸೆರ್ವಾವಾಕ್, ಹೆಪಟೈಟಿಸ್ ಬಿ ಲಸಿಕೆಯನ್ನು ಹೋಲುವ VLP (ವೈರಸ್ ತರಹದ ಕಣಗಳು) ಆಧರಿಸಿದೆ ಮತ್ತು HPV ವೈರಸ್ L1 ವಿರುದ್ಧ ಹೋರಾಡಲು ರೋಗ ನೀರೋದಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಗರ್ಭಕಂಠಕ್ಕೆ ತಗಲುವ ಅತ್ಯಂತ ಸಾಮಾನ್ಯವಾದ ವೈರಲ್ ಸೋಂಕು ಇದಾಗಿದೆ. ಹೆಚ್ಚಿನ ಲೈಂಗಿಕವಾಗಿ ಸಕ್ರಿಯವಾಗಿರುವ ಮಹಿಳೆಯರು ಮತ್ತು ಪುರುಷರು ತಮ್ಮ ಜೀವನದಲ್ಲಿ ಕೆಲವು ಹಂತದಲ್ಲಿ ಸೋಂಕಿಗೆ ಒಳಗಾಗುತ್ತಾರೆ ಮತ್ತು ಕೆಲವರು ಪದೇ ಪದೇ ಸೋಂಕಿಗೆ ಒಳಗಾಗಬಹುದು.
ಗರ್ಭಕಂಠದ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾದ HPV-ಸಂಬಂಧಿತ ಕಾಯಿಲೆಯಾಗಿದೆ. ಈ ರೀತಿಯ ಕ್ಯಾನ್ಸರ್ ಬಹುಪಾಲು ಶೇ 95 ಕ್ಕಿಂತ ಹೆಚ್ಚು HPV ಯ ಕಾರಣದಿಂದಾಗಿ ಉಂಟಾಗುತ್ತದೆ. HPV ಲಸಿಕೆ ಗರ್ಭಕೋಶ ಕ್ಯಾನ್ಸರ್ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಹುಡುಗಿಯರು ಅಥವಾ ಮಹಿಳೆಯರು ವೈರಸ್‌ಗೆ ತುತ್ತಾಗುವ ಮೊದಲು ಇದನ್ನು ನೀಡಿದರೆ ಗರ್ಭಕಂಠದ ಕ್ಯಾನ್ಸರ್‌ನ ಹೆಚ್ಚಿನ ಪ್ರಕರಣಗಳನ್ನು ತಡೆಯಬಹುದು.
Published On - 6:51 pm, Tue, 19 July 22