AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹ ಸಚಿವ ಅಮಿತ್​ ಶಾ ವರ್ಚಸ್ಸಿಗೆ ಧಕ್ಕೆ; ‘ಶೀ’ ವೆಬ್​ ಸರಣಿ ಖ್ಯಾತಿಯ ನಿರ್ದೇಶಕ ಅವಿನಾಶ್ ದಾಸ್ ಅರೆಸ್ಟ್

ಅಕ್ರಮ ಹಣ ವರ್ಗಾವಣೆ ಪ್ರಕಟಣದ ಅಡಿಯಲ್ಲಿ ಪೂಜಾ ಸಿಂಘಲ್ ಅವರನ್ನು  ಜಾರಿ ನಿರ್ದೇಶನದ ಅಧಿಕಾರಿಗಳು ಅರೆಸ್ಟ್ ಮಾಡಿದ್ದರು. ಇದಾದ ಬಳಿಕ ಅಮಿತ್ ಶಾ ಕಿವಿಯಲ್ಲಿ ಪೂಜಾ ಏನನ್ನೋ ಹೇಳುತ್ತಿರುವ ಫೋಟೋವನ್ನು ಅವಿನಾಶ್ ಶೇರ್ ಮಾಡಿಕೊಂಡಿದ್ದರು.

ಗೃಹ ಸಚಿವ ಅಮಿತ್​ ಶಾ ವರ್ಚಸ್ಸಿಗೆ ಧಕ್ಕೆ; ‘ಶೀ’ ವೆಬ್​ ಸರಣಿ ಖ್ಯಾತಿಯ ನಿರ್ದೇಶಕ ಅವಿನಾಶ್ ದಾಸ್ ಅರೆಸ್ಟ್
ಅವಿನಾಶ್ ದಾಸ್-ಅಮಿತ್ ಶಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Jul 19, 2022 | 5:15 PM

Share

‘ಶೀ’ ವೆಬ್​ ಸರಣಿ (She Series)ನಿರ್ದೇಶನ ಮಾಡಿ ಜನಪ್ರಿಯತೆ ಪಡೆದ ಅವಿನಾಶ್ ದಾಸ್ (Avinash Das) ಅವರನ್ನು ಪೊಲೀಸರು ಮುಂಬೈನಲ್ಲಿ ಮಂಗಳವಾರ (ಜುಲೈ 19) ಬಂಧಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಂಧಿತ ಐಎಎಸ್​ ಅಧಿಕಾರಿ ಪೂಜಾ ಸಿಂಘಲ್​ ಇಬ್ಬರೂ ಒಟ್ಟಾಗಿ ಇರುವ ಫೋಟೋವನ್ನು ಅವಿನಾಶ್ ದಾಸ್ ಅವರು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡು ದಾರಿ ತಪ್ಪಿಸುವ ಕೆಲಸ ಮಾಡಿದ್ದರು. ಈ ಕಾರಣಕ್ಕೆ ಅವಿನಾಶ್ ಅವರನ್ನು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆಗೆ ಅಹಮದಾಬಾದ್​​ಗೆ ಅವರನ್ನು ಕರೆತರಲಾಗಿದೆ.

ಅಹಮದಾಬಾದ್ ಅಪರಾಧ ವಿಭಾಗದವರು ಅವಿನಾಶ್ ವಿರುದ್ಧ ಎಫ್​ಐಆರ್ ದಾಖಲು ಮಾಡಿದ್ದಾರೆ. ಐಪಿಸಿಯ ಹಲವು ಸೆಕ್ಷನ್​ಗಳ ಅಡಿಯಲ್ಲಿ ಅವರ ವಿರುದ್ಧ ಕೇಸ್ ದಾಖಲಾಗಿದೆ. ಈ ಬೆಳವಣಿಗೆಯಿಂದ ಅವಿನಾಶ್ ವೃತ್ತಿ ಜೀವನಕ್ಕೆ ಸಾಕಷ್ಟು ತೊಂದರೆ ಉಂಟಾಗುವ ಸಾಧ್ಯತೆ ಇದೆ.

ಅವಿನಾಶ್ ದಾಸ್ ಅವರ ವಿರುದ್ಧ ಜೂನ್​ ತಿಂಗಳಲ್ಲೇ ಕೇಸ್ ದಾಖಲಾಗಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕಟಣದ ಅಡಿಯಲ್ಲಿ ಪೂಜಾ ಸಿಂಘಲ್ ಅವರನ್ನು  ಜಾರಿ ನಿರ್ದೇಶನದ ಅಧಿಕಾರಿಗಳು ಅರೆಸ್ಟ್ ಮಾಡಿದ್ದರು. ಇದಾದ ಬಳಿಕ ಅಮಿತ್ ಶಾ ಕಿವಿಯಲ್ಲಿ ಪೂಜಾ ಏನನ್ನೋ ಹೇಳುತ್ತಿರುವ ಫೋಟೋವನ್ನು ಅವಿನಾಶ್ ಶೇರ್ ಮಾಡಿಕೊಂಡಿದ್ದರು. ‘ಪೂಜಾ ಅವರನ್ನು ಬಂಧಿಸುವುದಕ್ಕೂ ಕೆಲವೇ ದಿನಗಳ ಮೊದಲು ತೆಗೆದ ಫೋಟೋ ಇದು’ ಎಂದು ಅವಿನಾಶ್ ಕ್ಯಾಪ್ಶನ್ ನೀಡಿದ್ದರು. ಆದರೆ, ಈ ಫೋಟೋ ಕ್ಲಿಕ್ ಮಾಡಿದ್ದು 2017ರ ಸಮಯದಲ್ಲಿ. ಅಮಿತ್ ಶಾ ಅವರ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎನ್ನುವ ಆರೋಪವನ್ನು ಪೊಲೀಸರು ಮಾಡಿದ್ದಾರೆ.

ಇದನ್ನೂ ಓದಿ
Image
‘ಗುಡ್​ ಬೈ’ ಹೇಳಿದ ಖ್ಯಾತ ಗಾಯಕ ಅದ್ನಾನ್ ಸಮಿ: ಫ್ಯಾನ್ಸ್​ ವಲಯದಲ್ಲಿ ಆತಂಕ
Image
‘ಒಳ್ಳೆಯ ಅವಕಾಶ ಸಿಕ್ಕರೆ ಬಾಲಿವುಡ್​ಗೆ ಹೋಗ್ತೀನಿ’; ‘ಮಿಸ್ ಇಂಡಿಯಾ’ ಸಿನಿ ಶೆಟ್ಟಿ
Image
‘ಉದಯ’ ಟಿವಿಯಲ್ಲಿ ‘ಸಲಗ’ ಸಿನಿಮಾ; ಜುಲೈ 24ಕ್ಕೆ ದುನಿಯಾ ವಿಜಯ್​ ಅಭಿಮಾನಿಗಳಿಗೆ ಹಬ್ಬ
Image
 ಸಮಂತಾ ಈಗ ಟ್ರಾಫಿಕ್ ಪೊಲೀಸ್, ಸ್ಟಾರ್​ ನಟನ ವಾಹನ ಅಡ್ಡಗಟ್ಟಿದ ನಟಿ; ಇದು ಸಿನಿಮಾ ವಿಚಾರ ಅಲ್ಲ

ಮಹಿಳೆಯೊಬ್ಬಳು ರಾಷ್ಟ್ರಧ್ವಜವನ್ನು ಧರಿಸಿರುವ ಫೋಟೋವನ್ನು ಅವಿನಾಶ್ ಪೋಸ್ಟ್ ಮಾಡಿದ್ದರು. ಇದರಿಂದ ಅವರು ದೇಶದ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಕ್ರೈಮ್ ಬ್ರ್ಯಾಂಚ್​ನವರು ಆರೋಪಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆಯೂ ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಅವಿನಾಶ್ ಅವರು ನಿರೀಕ್ಷಣಾ ಜಾಮಿನು ನೀಡುವಂತೆ ಕೋರಿ ಜೂನ್​ ತಿಂಗಳಲ್ಲಿ ಅಹಮದಾಬಾದ್ ಸೆಷನ್ ಕೋರ್ಟ್​​ಗೆ ಮನವಿ ಮಾಡಿದ್ದರು. ಆದರೆ, ಈ ಮನವಿಯನ್ನು ಕೋರ್ಟ್​ ತಿರಸ್ಕರಿಸಿತ್ತು. ನಂತರ ಅವರು ಗುಜರಾತ್ ಹೈಕೋರ್ಟ್​ ಮೆಟ್ಟಿಲು ಏರಿದ್ದರು. ಅಲ್ಲಿಯೂ ನಿರೀಕ್ಷಣಾ ಜಾಮೀನು ಸಿಕ್ಕಿಲ್ಲ .

ಇದನ್ನೂ ಓದಿ: ‘ಉದಯ’ ಟಿವಿಯಲ್ಲಿ ‘ಸಲಗ’ ಸಿನಿಮಾ; ಜುಲೈ 24ಕ್ಕೆ ದುನಿಯಾ ವಿಜಯ್​ ಅಭಿಮಾನಿಗಳಿಗೆ ಹಬ್ಬ

ಅವಿನಾಶ್ ದಾಸ್ ಅವರು 2017ರಲ್ಲಿ ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ‘ಅನಾರ್ಕಲಿ ಆಫ್​ ಆರಾ’ ಅವರ ಮೊದಲ ಸಿನಿಮಾ. ಸ್ವರಾ ಭಾಸ್ಕರ್​, ಪಂಕಜ್ ತ್ರಿಪಾಟಿ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದರು. ಅವರ ನಿರ್ದೇನದ ‘ರಾತ್ ಬಾಕಿ ಹೈ’ ಚಿತ್ರ 2021 ತೆರೆಗೆ ಬಂತು. ‘ಶೀ’ ವೆಬ್​ ಸರಣಿಗೂ ಅವರು ನಿರ್ದೇಶನ ಮಾಡಿದ್ದಾರೆ.

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ