‘ಉದಯ’ ಟಿವಿಯಲ್ಲಿ ‘ಸಲಗ’ ಸಿನಿಮಾ; ಜುಲೈ 24ಕ್ಕೆ ದುನಿಯಾ ವಿಜಯ್ ಅಭಿಮಾನಿಗಳಿಗೆ ಹಬ್ಬ
Salaga | Udaya TV: ‘ಸಲಗ’ ಕೇವಲ ಹೊಡಿಬಡಿ ಕಥೆ ಇರುವ ಸಿನಿಮಾ ಅಲ್ಲ. ಇದರಲ್ಲಿ ಒಂದು ಉತ್ತಮವಾದ ಮೆಸೇಜ್ ಇದೆ. ಫ್ಯಾಮಿಲಿ ಸೆಂಟಿಮೆಂಟ್ ಸಹ ಇದೆ.
ನಟ ದುನಿಯಾ ವಿಜಯ್ (Duniya Vijay) ಅವರು ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿರುವ ಅವರು ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ನಟನಾಗಿ ಫೇಮಸ್ ಆಗಿದ್ದ ಅವರು ‘ಸಲಗ’ ಸಿನಿಮಾ (Salaga) ಮೂಲಕ ನಿರ್ದೇಶಕನಾಗಿಯೂ ಯಶಸ್ಸು ಕಂಡರು. 2021ರ ಅಕ್ಟೋಬರ್ನಲ್ಲಿ ತೆರೆಕಂಡ ಈ ಸಿನಿಮಾಗೆ ಸಖತ್ ಜನಮಚ್ಚುಗೆ ವ್ಯಕ್ತವಾಗಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಮಾಯಿ ಮಾಡುವ ಮೂಲಕ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವರ ಮೊಗದಲ್ಲಿ ನಗು ಮೂಡಿಸಿತ್ತು. ಈಗ ‘ಸಲಗ’ ಸಿನಿಮಾ ಕಿರುತೆರೆಯಲ್ಲಿ ಮೊದಲ ಬಾರಿಗೆ ಪ್ರಸಾರ ಕಾಣಲು ಸಜ್ಜಾಗಿದೆ. ಉದಯ ವಾಹಿನಿಯಲ್ಲಿ (Udaya TV) ಜುಲೈ 24ರಂದು ಸಂಜೆ 6.30ಕ್ಕೆ ಈ ಚಿತ್ರ ಪ್ರಸಾರ ಆಗಲಿದೆ. ಆ ಮೂಲಕ ದುನಿಯಾ ವಿಜಯ್ ಅಭಿಮಾನಿಗಳಿಗೆ ಮಸ್ತ್ ಮನರಂಜನೆ ಸಿಗಲಿದೆ.
‘ಸಲಗ’ ಸಿನಿಮಾ ಪಕ್ಕಾ ಮಾಸ್ ಶೈಲಿಯಲ್ಲಿ ಮೂಡಿಬಂದಿದೆ. ಭೂಗತಲೋಕದ ಕಥೆಯನ್ನು ಇಟ್ಟುಕೊಂಡು ಸಿದ್ಧವಾದ ಈ ಸಿನಿಮಾದಲ್ಲಿ ದುನಿಯಾ ವಿಜಯ್ ಅವರಿಗೆ ಜೋಡಿಯಾಗಿ ಸಂಜನಾ ಆನಂದ್ ನಟಿಸಿದರು. ಕಾಕ್ರೋಜ್ ಸುಧಿ, ಡಾಲಿ ಧನಂಜಯ್ ಮುಂತಾದ ಕಲಾವಿದರ ಸಂಗಮ ಈ ಚಿತ್ರದಲ್ಲಾಗಿದೆ. ಚಿತ್ರಮಂದಿರದಲ್ಲಿ ‘ಸಲಗ’ ಮಿಸ್ ಮಾಡಿಕೊಂಡವರು ಈಗ ಟಿವಿಯಲ್ಲಿ ನೋಡಿ ಎಂಜಾಯ್ ಮಾಡಬಹುದು.
ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ಗೆಲುವು ಪಡೆದಿದ್ದು ದುನಿಯಾ ವಿಜಯ್ ಅವರ ಪಾಲಿನ ಹೆಮ್ಮೆಯ ವಿಷಯ. ಈ ಸಿನಿಮಾದ ಯಶಸ್ಸಿನಲ್ಲಿ ಸಂಗೀತ ನಿರ್ದೇಶಕ ಚರಣ್ ರಾಜ್ ಅವರ ಕೊಡುಗೆ ಕೂಡ ದೊಡ್ಡದು. ಅವರ ಬತ್ತಳಿಕೆಯಿಂದ ಬಂದ ಹಾಡುಗಳು ಸೂಪರ್ ಹಿಟ್ ಆದವು. ‘ಸೂರಿಯಣ್ಣ..’, ‘ಟಿಣಿಂಗ ಮಿಣಿಂಗ ಟಿಶ್ಯ..’ ಗೀತೆಗಳು ಸೃಷ್ಟಿಸಿದ ಕ್ರೇಜ್ ಅಷ್ಟಿಷ್ಟಲ್ಲ. ಮಾಸ್ತಿ ಬರೆದ ಡೈಲಾಗ್ಗಳು ಕೂಡ ಚಿತ್ರದ ತೂಕ ಹೆಚ್ಚಿಸಿದವು.
#Salaga | July 24th | 6:30 PM ದುನಿಯಾ ವಿಜಯ್ ನಟಿಸಿರುವ ‘ಸಲಗ’ ಜುಲೈ 24 ರಂದು ಸಂಜೆ 6:30 ಕ್ಕೆ ನಿಮ್ಮ ನೆಚ್ಚಿನ ಉದಯ ಟಿ.ವಿಯಲ್ಲಿ. #UdayaTV #MoviesOnUdayaTV #SalagaOnUdayaTV pic.twitter.com/ZmIJ0fF51B
— udayaTV (@UdayaTV) July 19, 2022
ಅಂದಹಾಗೆ, ‘ಸಲಗ’ ಕೇವಲ ಹೊಡಿಬಡಿ ಕಥೆ ಇರುವ ಸಿನಿಮಾ ಅಲ್ಲ. ಇದರಲ್ಲಿ ಒಂದು ಮೆಸೇಜ್ ಕೂಡ ಇದೆ. ಫ್ಯಾಮಿಲಿ ಸೆಂಟಿಮೆಂಟ್ ಸಹ ಇದೆ. ಆ ಕಾರಣಕ್ಕಾಗಿ ಕೌಟುಂಬಿಕ ಪ್ರೇಕ್ಷಕರನ್ನು ಈ ಚಿತ್ರ ಸೆಳೆದುಕೊಂಡಿತು. ‘ಸಲಗ’ ಸಿನಿಮಾದ ಯಶಸ್ಸಿನ ಬಳಿಕ ದುನಿಯಾ ವಿಜಯ್ ಅವರ ಮೈಲೇಜ್ ಹೆಚ್ಚಿದೆ. ಪರಭಾಷೆಯಿಂದಲೂ ಅವರಿಗೆ ಡಿಮ್ಯಾಂಡ್ ಬಂದಿದೆ. ನಂದಮೂರಿ ಬಾಲಕೃಷ್ಣ ನಟನೆಯ ಹೊಸ ಚಿತ್ರದಲ್ಲಿ ಅವರು ವಿಲನ್ ಆಗಿ ನಟಿಸುತ್ತಿರುವುದು ವಿಶೇಷ.
Published On - 2:46 pm, Tue, 19 July 22