AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುನಿಯಾ ವಿಜಯ್​ ನಟನೆಯ ತೆಲುಗು ಚಿತ್ರದ ಶೂಟಿಂಗ್​ನಲ್ಲಿ ಪಾಲ್ಗೊಂಡ ‘ಸಲಾರ್’ ಬೆಡಗಿ ಶ್ರುತಿ ಹಾಸನ್​

Shruti Haasan: ನಟಿ ಶ್ರುತಿ ಹಾಸನ್​ ಅವರು ಶೂಟಿಂಗ್​ ಸೆಟ್​ಗೆ ಹಾಜರಿ ಹಾಕಿದ್ದಾರೆ. ಅವರಿಗೆ ಭರ್ಜರಿ ಸ್ವಾಗತ ಕೋರಲಾಗಿದೆ. ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ದುನಿಯಾ ವಿಜಯ್​ ನಟನೆಯ ತೆಲುಗು ಚಿತ್ರದ ಶೂಟಿಂಗ್​ನಲ್ಲಿ ಪಾಲ್ಗೊಂಡ ‘ಸಲಾರ್’ ಬೆಡಗಿ ಶ್ರುತಿ ಹಾಸನ್​
ಗೋಪಿಚಂದ್​ ಮಲಿನೇನಿ, ಶ್ರುತಿ ಹಾಸನ್​
TV9 Web
| Edited By: |

Updated on:Jun 19, 2022 | 4:29 PM

Share

ಕಮಲ್​ ಹಾಸನ್​ ಪುತ್ರಿ, ನಟಿ ಶ್ರುತಿ ಹಾಸನ್​ (Shruti Haasan) ಅವರಿಗೆ ಸಖತ್ ಬೇಡಿಕೆ ಇದೆ. ಹಲವು ಭಾಷೆಯ ಚಿತ್ರಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ದೊಡ್ಡ ದೊಡ್ಡ ಸ್ಟಾರ್​ ಕಲಾವಿದರ ಜೊತೆ ನಟಿಸುವ ಅವಕಾಶ ಅವರಿಗೆ ಸಿಗುತ್ತಿದೆ. ಚಿತ್ರರಂಗಕ್ಕೆ ಕಾಲಿಟ್ಟು ಹಲವು ವರ್ಷ ಕಳೆದರೂ ಅವರ ಚಾರ್ಮ್​ ಕಮ್ಮಿ ಆಗಿಲ್ಲ. ಪ್ರಭಾಸ್​ ನಟನೆಯ ‘ಸಲಾರ್​’ ಚಿತ್ರಕ್ಕೆ ಅವರು ನಾಯಕಿ. ಆ ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿವೆ. ಅತ್ತ, ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ (Nandamuri Balakrishna) ನಟನೆಯ 107ನೇ ಸಿನಿಮಾದಲ್ಲೂ ಅವರು ಅಭಿನಯಿಸುತ್ತಿದ್ದಾರೆ. ಆ ಚಿತ್ರದಲ್ಲಿ ದುನಿಯಾ ವಿಜಯ್ (Duniya Vijay)​ ಅವರು ವಿಲನ್​ ಪಾತ್ರ ಮಾಡುತ್ತಿರುವುದು ವಿಶೇಷ. ಈ ಸಿನಿಮಾದ ಶೂಟಿಂಗ್​ನಲ್ಲಿ ಶ್ರುತಿ ಹಾಸನ್​ ಅವರು ಈಗ ಪಾಲ್ಗೊಂಡಿದ್ದಾರೆ.

ಈ ಸಿನಿಮಾಗೆ ತಾತ್ಕಾಲಿಕವಾಗಿ ‘ಎನ್​ಬಿಕೆ 107’ ಎಂದು ಶೀರ್ಷಿಕೆ ಇಡಲಾಗಿದೆ. ಈಗಾಗಲೇ ಬಂದಿರುವ ಟೀಸರ್​ ನೋಡಿ ನಂದಮೂರಿ ಬಾಲಕೃಷ್ಣ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ. ಅವರ ಎದುರು ದುನಿಯಾ ವಿಜಯ್​ ಖಳನಾಯಕನಾಗಿ ಅಬ್ಬರಿಸಲಿರುವುದರಿಂದ ಸಿನಿಮಾ ಮೇಲಿನ ಕ್ರೇಜ್​ ಹೆಚ್ಚಿದೆ. ಬಹಳ ದಿನಗಳ ಹಿಂದೆಯೇ ಈ ಚಿತ್ರದ ಶೂಟಿಂಗ್​ ಆರಂಭ ಆಗಿತ್ತು. ಈಗ ಶ್ರುತಿ ಹಾಸನ್​ ಅವರು ಶೂಟಿಂಗ್​ ಸೆಟ್​ ಸೇರಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ನಿರ್ದೇಶಕ ಗೋಪಿಚಂದ್​ ಮಲಿನೇನಿ ಜೊತೆ ಕುಳಿತು ಅವರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಶೂಟಿಂಗ್​ ಸೆಟ್​ಗೆ ಹಾಜರಾದ ಅವರಿಗೆ ಭರ್ಜರಿ ಸ್ವಾಗತ ಕೋರಲಾಗಿದೆ. ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ: ಮ್ಯಾಗಜಿನ್​ ಕವರ್​ಗಾಗಿ ಶ್ರುತಿ ಹಾಸನ್​ ಫೋಟೋಶೂಟ್​

ಇದನ್ನೂ ಓದಿ
Image
‘ನಿಮ್ಮ ತುಟಿಗಳ ಸೈಜ್​ ಏನು’? ಶ್ರುತಿ ಹಾಸನ್​ಗೆ ಪ್ರಶ್ನೆ ಕೇಳಿದ ಭೂಪ; ನಟಿಯಿಂದ ಬಂತು ಪ್ರತಿಕ್ರಿಯೆ
Image
‘ಇದು ಲವ್ ಮ್ಯಾರೇಜ್​, ಲವ್ ಜಿಹಾದ್ ಅಲ್ಲ’; ನಟಿ ಶ್ರುತಿ ಹೀಗೆ ಹೇಳಿದ್ದೇಕೆ?
Image
ಶ್ರುತಿ ಹಾಸನ್​ ಹೊಸ ಫೋಟೋಶೂಟ್​; ಬಗೆ ಬಗೆಯಲ್ಲಿ ಪೋಸ್​ ನೀಡಿದ ಕಮಲ್ ಹಾಸನ್​​ ಪುತ್ರಿ
Image
ಸಾರ್ವಜನಿಕವಾಗಿಯೇ ಬಾಯ್​ಫ್ರೆಂಡ್​ಗೆ ಕಿಸ್​ ಮಾಡಿದ ಶ್ರುತಿ ಹಾಸನ್​; ವೈರಲ್​ ಆಯ್ತು ಫೋಟೋ

ಪ್ರತಿಷ್ಠಿತ ‘ಮೈತ್ರಿ ಮೂವೀ ಮೇಕರ್ಸ್​’ ಮೂಲಕ ನಿರ್ಮಾಣ ಆಗುತ್ತಿರುವ ಈ ಸಿನಿಮಾ ಸಖತ್​ ಮಾಸ್​ ಆಗಿ ಮೂಡಿಬರುತ್ತಿದೆ. ನಂದಮೂರಿ ಬಾಲಕೃಷ್ಣ ಅವರಿಗೆ ಈಗ 62 ವರ್ಷ ವಯಸ್ಸು. ಈ ವಯಸ್ಸಿನಲ್ಲೂ ಅವರು ಭರ್ಜರಿ ಆ್ಯಕ್ಷನ್​ ದೃಶ್ಯಗಳಲ್ಲಿ ನಟಿಸುತ್ತಿದ್ದಾರೆ. ‘ಎನ್​ಬಿಕೆ 107’ ಚಿತ್ರದಲ್ಲೂ ಸಖತ್​ ಸಾಹಸ ದೃಶ್ಯಗಳಿವೆ ಎಂಬುದಕ್ಕೆ ಟೀಸರ್​ನಲ್ಲಿ ಸುಳಿವು ಸಿಕ್ಕಿದೆ. ಪಂಚಿಂಗ್​ ಡೈಲಾಗ್​ಗಳು ಕೂಡ ಅವರ ಅಭಿಮಾನಿಗಳಿಗೆ ಇಷ್ಟ​ ಆಗಿದೆ. ಅಂತಿಮವಾಗಿ ಈ ಸಿನಿಮಾಗೆ ಏನು ಟೈಟಲ್​ ಇಡಬಹುದು ಎಂಬ ಕೌತುಕ ಮೂಡಿದೆ. ದುನಿಯಾ ವಿಜಯ್​ ಅವರಿಗೆ ಇದು ಮೊದಲ ತೆಲುಗು ಸಿನಿಮಾ ಆದ್ದರಿಂದ ಅವರ ಅಭಿಮಾನಿಗಳ ವಲಯದಲ್ಲೂ ನಿರೀಕ್ಷೆ ಹೆಚ್ಚಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:28 pm, Sun, 19 June 22

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು