ಮತ್ತೆ ಬರಲಿದೆ ‘ಕಾಫಿ ವಿತ್​ ಕರಣ್​’; ಪ್ರಸಾರ ಎಲ್ಲಿ? ದಿನಾಂಕ ಏನು? ಇಲ್ಲಿದೆ ಪೂರ್ತಿ ಮಾಹಿತಿ..

ಮತ್ತೆ ಬರಲಿದೆ ‘ಕಾಫಿ ವಿತ್​ ಕರಣ್​’; ಪ್ರಸಾರ ಎಲ್ಲಿ? ದಿನಾಂಕ ಏನು? ಇಲ್ಲಿದೆ ಪೂರ್ತಿ ಮಾಹಿತಿ..
ಕರಣ್ ಜೋಹರ್

Koffee With Karan Season 7: ಈ ಹಿಂದಿನ ಸೀಸನ್​ಗಳು ಟಿವಿಯಲ್ಲಿ ಪ್ರಸಾರ ಆಗಿದ್ದವು. ಈಗ ನೇರವಾಗಿ ಒಟಿಟಿಯಲ್ಲಿ ‘ಕಾಫಿ ವಿತ್​ ಕರಣ್​ ಸೀಸನ್ 7’ ಪ್ರಸಾರ ಆಗಲಿದೆ.

TV9kannada Web Team

| Edited By: Madan Kumar

Jun 19, 2022 | 3:34 PM

ಬಾಲಿವುಡ್​ನಲ್ಲಿ ಕರಣ್​ ಜೋಹರ್​ (Karan Johar) ಅವರು ನಿರ್ಮಾಪಕನಾಗಿ ಮತ್ತು ನಿರ್ದೇಶಕನಾಗಿ ಮಾತ್ರವಲ್ಲದೇ ನಿರೂಪಕನಾಗಿಯೂ ಫೇಮಸ್​. ಅನೇಕ ಪ್ರಶಸ್ತಿ ಪ್ರದಾನ ಸಮಾರಂಭಗಳನ್ನು ಅವರು ನಿರೂಪಿಸಿದ್ದಾರೆ. ‘ಬಿಗ್​ ಬಾಸ್​ ಒಟಿಟಿ’ ಕಾರ್ಯಕ್ರಮ ಕೂಡ ಅವರ ನಿರೂಪಣೆಯಲ್ಲೇ ಮೂಡಿಬಂತು. ಅದಕ್ಕಿಂತಲೂ ಹೆಚ್ಚಾಗಿ ಅವರಿಗೆ ಜನಪ್ರಿಯತೆ ತಂದುಕೊಟ್ಟ ಕಾರ್ಯಕ್ರಮ ಎಂದರೆ ಅದು ‘ಕಾಫಿ ವಿತ್​ ಕರಣ್​’ (Koffee With Karan) ಶೋ. ಬಾಲಿವುಡ್​ನ (Bollywood) ಅನೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಬಂದು ಹೋಗಿದ್ದಾರೆ. ಈಗಾಗಲೇ 6 ಸೀಸನ್​ಗಳನ್ನು ಪೂರೈಸಿರುವ ಈ ಟಾಕ್​ ಶೋನ ಹೊಸ ಸೀಸನ್​ ಆರಂಭ ಆಗುತ್ತಿದೆ. ಈ ಸುದ್ದಿಯನ್ನು ಸ್ವತಃ ಕರಣ್​ ಜೋಹರ್​ ಅವರು ತಿಳಿಸಿದ್ದಾರೆ. ಹೊಸ ಪ್ರೋಮೋ ಮೂಲಕ ಅವರು ಈ ವಿಚಾರ ತಿಳಿಸಿದ್ದಾರೆ.

ಬೇರೆ ಎಲ್ಲ ಟಾಕ್ ಶೋಗಳಿಗಿಂತಲೂ ‘ಕಾಫಿ ವಿತ್​ ಕರಣ್​’ ತುಂಬ ವಿಶೇಷ. ಈ ಕಾರ್ಯಕ್ರಮಕ್ಕೆ ಬರುವವರಿಗೆ ಕರಣ್​ ಜೋಹರ್​ ಅವರು ನೇರವಾದ ಪ್ರಶ್ನೆಗಳನ್ನು ಕೇಳುತ್ತಾರೆ. ಅಷ್ಟೇ ಅಲ್ಲ, ಕೆಲವೊಮ್ಮೆ ತುಂಬ ಬೋಲ್ಡ್ ಆದಂತಹ ಮಾತುಕಥೆ ಕೂಡ ಇಲ್ಲಿ ನಡೆಯುತ್ತದೆ. ಅದರಿಂದ ಕಾಂಟ್ರವರ್ಸಿ ಆದ ಉದಾಹರಣೆಯೂ ಇದೆ. ಒಟ್ಟಿನಲ್ಲಿ ಪ್ರೇಕ್ಷಕರಿಗೆ ಈ ಶೋ ಸಖತ್​ ಮಜಾ ನೀಡುತ್ತದೆ.

ಇದನ್ನೂ ಓದಿ: ‘ಹೃದಯಂ’ ರಿಮೇಕ್​ನಲ್ಲಿ ಸೈಫ್​ ಅಲಿ ಖಾನ್​ ಮಗ ಇಬ್ರಾಹಿಂ? ಲಾಂಚ್​ ಮಾಡ್ತಾರೆ ಕರಣ್​ ಜೋಹರ್​

ಈ ಹಿಂದಿನ ಸೀಸನ್​ಗಳು ಟಿವಿಯಲ್ಲಿ ಪ್ರಸಾರ ಆಗಿದ್ದವು. ಈಗ ನೇರವಾಗಿ ಒಟಿಟಿಯಲ್ಲಿ ‘ಕಾಫಿ ವಿತ್​ ಕರಣ್​ ಸೀಸನ್ 7’ ಪ್ರಸಾರ ಆಗಲಿದೆ. ‘ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​’ ಒಟಿಟಿಯಲ್ಲಿ ಈ ಶೋ ಬಿತ್ತರ ಆಗಲಿದೆ. ಹಾಗಾಗಿ ಇನ್ನಷ್ಟು ಬೋಲ್ಡ್​ ಮಾತುಗಳು ಈ ಬಾರಿ ಇರಲಿವೆ ಎಂಬುದು ಖಚಿತ. ಜುಲೈ 7ರಿಂದ ಈ ಸೀಸನ್​ ಶುರು ಆಗಲಿದೆ. ಕರಣ್​ ಜೋಹರ್​ ಹಂಚಿಕೊಂಡಿರುವ ಪ್ರೋಮೋಗೆ ಜನರು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ.

ಕರಣ್​ ಜೋಹರ್​ ಅವರು ಸದ್ಯ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಬಹುವರ್ಷಗಳ ಬಳಿಕ ಅವರು ನಿರ್ದೇಶಕನ ಕ್ಯಾಪ್​ ಧರಿಸಿರುವ ಕಾರಣ ಆ ಚಿತ್ರದ ಮೇಲೆ ನಿರೀಕ್ಷೆ ಮೂಡಿದೆ. ನಿರ್ದೇಶನದ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ಅವರು ‘ಕಾಫಿ ವಿತ್​ ಕರಣ್​’ ಶೋ ನಡೆಸಿ ಕೊಡಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada