ಸಾರ್ವಜನಿಕವಾಗಿಯೇ ಬಾಯ್​ಫ್ರೆಂಡ್​ಗೆ ಕಿಸ್​ ಮಾಡಿದ ಶ್ರುತಿ ಹಾಸನ್​; ವೈರಲ್​ ಆಯ್ತು ಫೋಟೋ

ಶ್ರುತಿ ಹಾಸನ್​ ತಮ್ಮ ಪ್ರಿಯಕರ ಸಂತನು ಹಜಾರಿಕ ಜೊತೆ ಕಾಲ ಕಳೆಯುತ್ತಿದ್ದಾರೆ. ಹಾಗಂತ ಇದು ಗಾಸಿಪ್​ ಅಲ್ಲ. ಸ್ವತಃ ಶ್ರುತಿ ಹಾಸನ್​ ಅವರು ಈ ಬಗ್ಗೆ ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳ ಮೂಲಕ ಮಾಹಿತಿ ನೀಡಿದ್ದಾರೆ.

ಸಾರ್ವಜನಿಕವಾಗಿಯೇ ಬಾಯ್​ಫ್ರೆಂಡ್​ಗೆ ಕಿಸ್​ ಮಾಡಿದ ಶ್ರುತಿ ಹಾಸನ್​; ವೈರಲ್​ ಆಯ್ತು ಫೋಟೋ
ಸಾರ್ವಜನಿಕವಾಗಿಯೇ ಬಾಯ್​ಫ್ರೆಂಡ್​ಗೆ ಕಿಸ್​ ಮಾಡಿದ ಶ್ರುತಿ ಹಾಸನ್​; ವೈರಲ್​ ಆಯ್ತು ನಟಿಯ ಫೋಟೋ
TV9kannada Web Team

| Edited By: Rajesh Duggumane

Jul 18, 2021 | 12:24 PM

ಕಮಲ್​ ಹಾಸನ್​ ಮಗಳು ನಟಿ ಶ್ರುತಿ ಹಾಸನ್​ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ತಂದೆ ಹೆಸರಲ್ಲಿ ಅವಕಾಶ ಪಡೆದುಕೊಳ್ಳೋಕೆ ಅವರಿಗೆ ಇಷ್ಟವಿಲ್ಲ. ಹೀಗಾಗಿ, ಜೀವನದ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಸ್ವಂತವಾಗಿ ತೆಗೆದುಕೊಳ್ಳುತ್ತಾರೆ. ಬಾಯ್​ಫ್ರೆಂಡ್​ ವಿಚಾರದಲ್ಲೂ ಶ್ರುತಿ ಹಾಸನ್​ ಮುಚ್ಚು ಮರೆ ಮಾಡಿಲ್ಲ. ಈಗ ಅವರು ಬಾಯ್​ಫ್ರೆಂಡ್​ಗೆ ಸಾರ್ವಜನಿಕವಾಗಿ ಕಿಸ್​ ಮಾಡಿದ ಫೋಟೋ ಒಂದು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿದೆ.

ಶ್ರುತಿ ಹಾಸನ್​ ತಮ್ಮ ಪ್ರಿಯಕರ ಸಂತನು ಹಜಾರಿಕ ಜೊತೆ ಕಾಲ ಕಳೆಯುತ್ತಿದ್ದಾರೆ. ಹಾಗಂತ ಇದು ಗಾಸಿಪ್​ ಅಲ್ಲ. ಸ್ವತಃ ಶ್ರುತಿ ಹಾಸನ್​ ಅವರು ಈ ಬಗ್ಗೆ ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳ ಮೂಲಕ ಮಾಹಿತಿ ನೀಡಿದ್ದಾರೆ. ಅಲ್ಲದೆ ಬಾಯ್​ಫ್ರೆಂಡ್​ ಜೊತೆ ತುಂಬ ಆಪ್ತವಾಗಿರುವ ಫೋಟೋಗಳನ್ನು ಅವರು ಶೇರ್​ ಮಾಡುತ್ತಾರೆ. ಈಗ ಅವರು ಸಾರ್ವಜನಿಕವಾಗಿ ಕಿಸ್​ ಮಾಡಿದ್ದಾರೆ.

ಶ್ರುತಿ ಹಾಸನ್​ ಹಾಗೂ ಸಂತನು ಮಾಸ್ಕ್​ ಧರಿಸಿದ್ದಾರೆ.  ಶ್ರುತಿ ಅವರು ಸಂತನು ಮುಖಕ್ಕೆ ಕಿಸ್​ ಮಾಡಿದ್ದಾರೆ. ಇದು ರೀಟೆಲ್​ ಸ್ಟೋರ್​ನಲ್ಲಿ ಎಂಬುದು ಫೋಟೋ ಮೂಲಕ ಸಾಬೀತಾಗಿದೆ. ಇದನ್ನು ನೋಡಿದ ಅನೇಕ ಫ್ಯಾನ್ಸ್​ ಬೇಸರ ಹೊರ ಹಾಕಿದ್ದಾರೆ. ಶ್ರುತಿ ಈ ರೀತಿ ಮಾಡಬಾರದಿತ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಶ್ರುತಿ ಕಪಲ್​ ಗೋಲ್ಸ್​ ನೀಡಿದ್ದಾರೆ ಎನ್ನುವ ಅಭಿಪ್ರಾಯ ಹೊರ ಹಾಕಿದ್ದಾರೆ.

ಶ್ರುತಿ ಹಾಸನ್​ಗೆ ಸದ್ಯ ಕೈ ತುಂಬ ಆಫರ್​ಗಳಿವೆ. ಸ್ಟಾರ್​ ನಟ ಕಮಲ್​ ಹಾಸನ್​ ಪುತ್ರಿ ಆಗಿದ್ದರೂ ಕೂಡ ಅವರು ತಂದೆ-ತಾಯಿ ಬಳಿ ಹಣ ಕೇಳುವುದಿಲ್ಲವಂತೆ. ‘ನಾನು ಇಂಡಿಪೆಂಡೆಂಟ್​ ಮಹಿಳೆ. ನನ್ನ ತಂದೆ ನಟ-ರಾಜಕಾರಣಿ ಹೌದು. ಆದರೆ, ನನ್ನ ಬಿಲ್​ಗಳನ್ನು ನಾನೇ ಪೇ ಮಾಡುತ್ತೇನೆ. ನನ್ನ ತಂದೆ ತಾಯಿ ಬಳಿ ಯಾವಾಗಲೂ ಆರ್ಥಿಕ ಸಹಾಯ ಕೇಳಿಲ್ಲ. ನನಗೆ ಹಣಕಾಸಿನ ತೊಂದರೆ ಇದೆ. ಹೀಗಾಗಿ, ಶೂಟಿಂಗ್​ನಲ್ಲಿ ಪಾಲ್ಗೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಶೂಟಿಂಗ್​​ ಮಾಡುವಾಗ ಮಾಸ್ಕ್​ ಇಲ್ಲದೆ ಕಾಣಿಸಿಕೊಳ್ಳುವುದಕ್ಕೆ ತುಂಬಾನೇ ಭಯವಾಗುತ್ತದೆ. ಆದಾಗ್ಯೂ ಒಪ್ಪಿಕೊಂಡ ಪ್ರಾಜೆಕ್ಟ್​ಗಳನ್ನು ಮುಗಿಸಲೇಬೇಕಾದ ಅನಿವಾರ್ಯತೆ ಇದೆ. ಖರ್ಚುಗಳನ್ನು ನಿಭಾಯಿಸಲು ಕೆಲಸ ಮಾಡುವುದೊಂದೇ ಆಯ್ಕೆ’ ಎಂದು ಶ್ರುತಿ ಇತ್ತೀಚೆಗೆ ಹೇಳಿದ್ದರು.

ಇದನ್ನೂ ಓದಿ: ಚಂದ್ರಚೂಡ್​ ಮಾಜಿ ಪತ್ನಿ ಶ್ರುತಿ ವಿಚಾರ ಕೆದಕಿದ ಮಂಜು; ಬಿಗ್​ ಬಾಸ್​ನಲ್ಲಿ ನಡೆಯಿತು ಯುದ್ಧ

ಕಮಲ್​ ಹಾಸನ್​ ವಿಚ್ಛೇದನ ಪಡೆದಾಗ ಖುಷಿಪಟ್ಟಿದ್ದ ಮಗಳು ಶ್ರುತಿ ಹಾಸನ್​; ಕಾರಣ ಏನು?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada