ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ನ್ಯಾಯಾಂಗ ಬಂಧನ ಅವಧಿ ಆಗಸ್ಟ್ 8ರ ವರೆಗೆ ವಿಸ್ತರಣೆ

|

Updated on: Jul 26, 2023 | 8:42 PM

ಹಿಂದಿನ ಎಐಎಡಿಎಂಕೆ ಆಡಳಿತದಲ್ಲಿ ಸಾರಿಗೆ ಸಚಿವರಾಗಿದ್ದಾಗ ಉದ್ಯೋಗಕ್ಕಾಗಿ ನಗದು ಹಗರಣದಲ್ಲಿ ಇಡಿ ಅವರನ್ನು ಬಂಧಿಸಿತ್ತು. ಪ್ರಸ್ತುತ ಡಿಎಂಕೆ ಆಡಳಿತದಲ್ಲಿ ಮೊದಲು ವಿದ್ಯುತ್ ಮತ್ತು ನಿಷೇಧ ಮತ್ತು ಅಬಕಾರಿ ಖಾತೆಗಳನ್ನು ನಿರ್ವಹಿಸಿದ್ದ ಬಾಲಾಜಿಗೆ ಈಗ ಯಾವುದೇ ಖಾತೆಗಳು ಇಲ್ಲ.

ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ನ್ಯಾಯಾಂಗ ಬಂಧನ ಅವಧಿ ಆಗಸ್ಟ್ 8ರ ವರೆಗೆ ವಿಸ್ತರಣೆ
ಸೆಂಥಿಲ್ ಬಾಲಾಜಿ
Follow us on

ಚೆನ್ನೈ ಜುಲೈ 26:  ಬಂಧಿತ ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ (Senthil Balaji) ನ್ಯಾಯಾಂಗ ಬಂಧನವನ್ನು ಸಿಟಿ ಸೆಷನ್ಸ್ ನ್ಯಾಯಾಲಯವು (sessions court) ಆಗಸ್ಟ್ 8, 2023 ರವರೆಗೆ ವಿಸ್ತರಿಸಿದೆ. ಪ್ರಿನ್ಸಿಪಲ್ ಸೆಷನ್ಸ್ ನ್ಯಾಯಾಧೀಶ ಎಸ್ ಅಲ್ಲಿ ಅವರ ಮುಂದೆ ಪುಝಲ್ ಜೈಲಿನಿಂದ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಸೆಂಥಿಲ್ ಬಾಲಾಜಿ  ಅವರನ್ನು ಹಾಜರುಪಡಿಸಲಾಯಿತು. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಜೂನ್ 14 ರಂದು ಬಾಲಾಜಿಯನ್ನು ಬಂಧಿಸಿದ್ದು, ಆ ದಿನದಿಂದ ಅವರು ನ್ಯಾಯಾಂಗ ಬಂಧನದಲ್ಲಿದ್ದರು. ನಂತರ ಎರಡು ಬಾರಿ ಅವರ ನ್ಯಾಯಾಂಗ ಬಂಧನಕ್ಕೆ ವಿಸ್ತರಿಸಲಾಗಿತ್ತು. ಅವರ ಇತ್ತೀಚಿನ ನ್ಯಾಯಾಂಗ ಬಂಧನವು ಜುಲೈ 26, 2023 ರಂದು ಕೊನೆಗೊಂಡಿತು. ಆದ್ದರಿಂದ, ಅವರನ್ನು PSJ ಮುಂದೆ ಹಾಜರುಪಡಿಸಲಾಯಿತು.

ಹಿಂದಿನ ಎಐಎಡಿಎಂಕೆ ಆಡಳಿತದಲ್ಲಿ ಸಾರಿಗೆ ಸಚಿವರಾಗಿದ್ದಾಗ ಉದ್ಯೋಗಕ್ಕಾಗಿ ನಗದು ಹಗರಣದಲ್ಲಿ ಇಡಿ ಅವರನ್ನು ಬಂಧಿಸಿತ್ತು.
ಪ್ರಸ್ತುತ ಡಿಎಂಕೆ ಆಡಳಿತದಲ್ಲಿ ಮೊದಲು ವಿದ್ಯುತ್ ಮತ್ತು ನಿಷೇಧ ಮತ್ತು ಅಬಕಾರಿ ಖಾತೆಗಳನ್ನು ನಿರ್ವಹಿಸಿದ್ದ ಬಾಲಾಜಿಗೆ ಈಗ ಯಾವುದೇ ಖಾತೆಗಳು ಇಲ್ಲ.

2021 ರಲ್ಲಿ ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿಯಲ್ಲಿ ದಾಖಲಿಸಲಾದ ಜಾರಿ ಪ್ರಕರಣದ ಮಾಹಿತಿ ನೋಂದಣಿ (ECIR) ಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬಾಲಾಜಿಯನ್ನು ಬಂಧಿಸಿತ್ತು. 2018 ರಲ್ಲಿ ಸ್ಥಳೀಯ ಪೊಲೀಸರು ಅವರ ವಿರುದ್ಧದ ಮೂರು ಎಫ್‌ಐಆರ್‌ಗಳ ಆಧಾರದ ಮೇಲೆ ECIR ದಾಖಲಿಸಿದ್ದಾರೆ. 2015 ರಲ್ಲಿ ಜಯಲಲಿತಾ ಅವರ ಸಂಪುಟದಲ್ಲಿ ಸಾರಿಗೆ ಸಚಿವರಾಗಿದ್ದಾಗ ಉದ್ಯೋಗಕ್ಕಾಗಿ ನಗದು ಸ್ವೀಕರಿಸಿದ್ದರು ಎಂಬ ಆರೋಪವಿತ್ತು.

ಇದನ್ನೂ ಓದಿ: ಕೇರಳದಲ್ಲಿ ಮುಸ್ಲಿಂ ಯೂತ್ ಲೀಗ್ ಪ್ರತಿಭಟನೆ ವೇಳೆ ಹಿಂದೂ ವಿರೋಧಿ ಘೋಷಣೆ; ಕಾಂಗ್ರೆಸ್, ಸಿಪಿಎಂ ಈ ಬಗ್ಗೆ ಏನು ಹೇಳುತ್ತದೆ?: ಅನಿಲ್ ಆಂಟನಿ

2011 ರಿಂದ 2015 ರವರೆಗೆ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಸರ್ಕಾರದ ಅವಧಿಯಲ್ಲಿ ಅವರು ಸಾರಿಗೆ ಸಚಿವರಾಗಿದ್ದರು ಡಿಸೆಂಬರ್ 2018 ರಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಗೆ ಸೇರಿದ ಅವರು ಮೇ 2021 ರಲ್ಲಿ ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಅಧಿಕಾರಕ್ಕೇರಿದಾಗ ವಿದ್ಯುತ್ ಸಚಿವರಾಗಿ ಅಧಿಕಾರ ವಹಿಸಿಕೊಂಡರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 8:10 pm, Wed, 26 July 23