
ನವದೆಹಲಿ, ನವೆಂಬರ್ 13: ದೆಹಲಿಯಲ್ಲಿ ನವೆಂಬರ್ 10ರಂದು ನಿಗೂಢ ಸ್ಫೋಟ(Blast)ವೊಂದು ಸಂಭವಿಸಿತ್ತು. ಪರಿಣಾಮ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಘಟನೆ ನಡೆದ ಸ್ಥಳದಿಂದ ಸುಮಾರು 300 ಮೀಟರ್ ದೂರದಲ್ಲಿರುವ ಅಂಗಡಿಯೊಂದರ ಮೇಲೆ ವ್ಯಕ್ತಿಯೊಬ್ಬರ ತೋಳು ಪತ್ತೆಯಾಗಿದೆ.
12 ಸೆಕೆಂಡುಗಳ ವೀಡಿಯೊದಲ್ಲಿ ಕೆಂಪು ಕೋಟೆ ಕಾರಿಡಾರ್‌ನ ಎದುರಿನ ಲಜಪತ್ ರಾಯ್ ಮಾರುಕಟ್ಟೆಯ ಅಂಗಡಿಯ ಮೇಲ್ಭಾಗದಲ್ಲಿ ಕತ್ತರಿಸಿದ ತೋಳು ಇರುವುದನ್ನು ತೋರಿಸಲಾಗಿದೆ. ಕೇವಲ ಅಮೋನಿಯಂ ನೈಟ್ರೇಟ್ ಆಲ್ಲ ಸ್ಫೋಟದಲ್ಲಿ ಅದಕ್ಕಿಂತ ಪ್ರಬಲವಾದ ರಾಸಾಯನಿಕಗಳು ಇರಬಹುದು ಎಂದು ಅಂದಾಜಿಸಲಾಗಿದೆ.
ಸ್ಫೋಟದ ಸ್ಥಳದಿಂದ ಎಫ್‌ಎಸ್‌ಎಲ್ ತಂಡವು ಎರಡು ಕಾರ್ಟ್ರಿಡ್ಜ್‌ಗಳು, ಜೀವಂತ ಮದ್ದುಗುಂಡುಗಳು ಮತ್ತು ಸ್ಫೋಟಕಗಳು ಸೇರಿದಂತೆ 40 ಕ್ಕೂ ಹೆಚ್ಚು ಮಾದರಿಗಳನ್ನು ಸಂಗ್ರಹಿಸಿದೆ. ಪ್ರಾಥಮಿಕ ವಿಶ್ಲೇಷಣೆಯು ಸ್ಫೋಟಕ ಮಾದರಿಗಳಲ್ಲಿ ಒಂದು ಅಮೋನಿಯಂ ನೈಟ್ರೇಟ್ ಎಂದು ತೋರುತ್ತಿದೆ ಎಂದು ಅಧಿಕಾರಿ ಹೇಳಿದರು.ಎರಡನೇ ಸ್ಫೋಟಕ ಮಾದರಿಯು ಅಮೋನಿಯಂ ನೈಟ್ರೇಟ್‌ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ಹೇಳಲಾಗುತ್ತಿದೆ.
ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ವಿಭಾಗದ ತಜ್ಞರು, ಕೆಲವು ಮೃತದೇಹಗಳ ಮೇಲೆ ಅಡ್ಡ ಗಾಯದ ಮಾದರಿಯನ್ನು ಗಮನಿಸಲಾಗಿದೆ ಎಂದು ಹೇಳಿದರು. ಅಡ್ಡ-ಗಾಯದ ಮಾದರಿ ಎಂದರೆ ಸ್ಫೋಟದ ಪ್ರಭಾವದಿಂದಾಗಿ ಜನರು ಗೋಡೆಗೆ ಅಥವಾ ನೆಲಕ್ಕೆ ಡಿಕ್ಕಿ ಹೊಡೆದಿದ್ದಾರೆ ಎಂದರ್ಥ. ಮೃತರ ಶ್ವಾಸಕೋಶ, ಕಿವಿ ಮತ್ತು ಹೊಟ್ಟೆಗೆ ಹಾನಿಯಾಗಿತ್ತು ಎಂಬುದು ತಿಳಿದುಬಂದಿದೆ.
ಭಾರತದಾದ್ಯಂತ ಹಲವು ನಗರಗಳಲ್ಲಿ ಸುಮಾರು 8 ಭಯೋತ್ಪಾದಕರು ಸರಣಿ ಸ್ಫೋಟ(Blast)ಗಳನ್ನು ನಡೆಸಲು ಸಂಚು ರೂಪಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ತನಿಖಾ ಸಂಸ್ಥೆಗಳು ಗುರುವಾರ ತಿಳಿಸಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಭಯೋತ್ಪಾದಕರು ತಲಾ ಎರಡು ಗುಂಪುಗಳಾಗಿ ನಾಲ್ಕು ನಗರಗಳಿಗೆ ತೆರಳಲು ಯೋಜಿಸಿದ್ದರು, ಅವರು ತಮ್ಮೊಂದಿಗೆ ಬಹು ಐಇಡಿಗಳನ್ನು ಸಾಗಿಸಬೇಕಿತ್ತು. ಸುಮಾರು 8 ಶಂಕಿತರು ನಾಲ್ಕು ಸ್ಥಳಗಳಲ್ಲಿ ಸರಣಿ ಸ್ಫೋಟ ನಡೆಸಲು ಯೋಜಿಸಿದ್ದರು.
ಮತ್ತಷ್ಟು ಓದಿ: ದೆಹಲಿ ನಿಗೂಢ ಸ್ಫೋಟ: ಡಾ. ಉಮರ್ ಹಾಗೂ ಇತರೆ ಉಗ್ರರಿಗೆ ಟರ್ಕಿಶ್ ಹ್ಯಾಂಡ್ಲರ್ ‘ಯುಕಾಸಾ’ ಜತೆ ಇತ್ತು ನಂಟು
ಅವರು ತಲಾ ಎರಡು ಗುಂಪುಗಳಾಗಿ ನಾಲ್ಕು ನಗರಗಳಿಗೆ ತೆರಳಲು ಯೋಜಿಸಿದ್ದರು. ತನಿಖಾ ಸಂಸ್ಥೆಯ ಮೂಲಗಳು ಎಎನ್‌ಐಗೆ ತಿಳಿಸಿರುವಂತೆ ಡಾ. ಮುಜಮ್ಮಿಲ್, ಡಾ. ಅದೀಲ್, ಉಮರ್ ಮತ್ತು ಶಾಹೀನ್ ಜಂಟಿಯಾಗಿ ಸುಮಾರು 20 ಲಕ್ಷ ರೂ. ನಗದನ್ನು ಸಂಗ್ರಹಿಸಿದ್ದು, ದೆಹಲಿ ಸ್ಫೋಟದ ಮೊದಲು ಅದನ್ನು ಉಮರ್‌ಗೆ ಹಸ್ತಾಂತರಿಸಲಾಗಿತ್ತು.
ನಂತರ ಅವರು ಗುರುಗ್ರಾಮ, ನೂಹ್ ಮತ್ತು ಹತ್ತಿರದ ಪ್ರದೇಶಗಳಿಂದ ಐಇಡಿ ತಯಾರಿಕೆಗಾಗಿ ಉದ್ದೇಶಿಸಲಾದ 3 ಲಕ್ಷ ರೂ. ಮೌಲ್ಯದ 20 ಕ್ವಿಂಟಾಲ್‌ಗೂ ಹೆಚ್ಚು ಎನ್‌ಪಿಕೆ ರಸಗೊಬ್ಬರವನ್ನು ಖರೀದಿಸಿದ್ದರು ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ