ಸೋನಿಯಾ-ಶರದ್​ ‘ಮಹಾ’ ಮೀಟಿಂಗ್ ನಾಳೆಗೆ ಶಿಫ್ಟ್

ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಮಹಾ ಹೈಡ್ರಾಮಾವೇ ನಡೀತಿದೆ. ನಾವು ಸರ್ಕಾರ ರಚಿಸ್ತೀವಿ ಅಂತ ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್​ ಪಕ್ಷಗಳು ಹೇಳ್ತಿದ್ರೂ, ಬಿಕ್ಕಟ್ಟು ಮಾತ್ರ ಇನ್ನೂ ಮುಗ್ದಿಲ್ಲ. ಮೂರು ಪಕ್ಷಗಳ ನಾಯಕರೊಂದಿಗಿನ ರಾಜ್ಯಪಾಲರ ಸಭೆ ರದ್ದುಗೊಂಡಿರೋದು ಒಂದ್ಕಡೆಯಾದ್ರೆ. ಶರದ್​ ಪವಾರ್ ಹಾಗೂ ಸೋನಿಯಾ ಗಾಂಧಿ ನಡುವಿನ ಸಭೆ ಕೂಡ ಪೋಸ್ಟ್​ಪೋನ್ ಆಗಿದೆ. ‘ಶಿವಸೇನೆ’ ಜೊತೆಗಿನ ಮೈತ್ರಿ ಕುರಿತು ಫೈನಲ್ ಡಿಸಿಷನ್: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಬೇಕು. ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಬೇಕು ಅನ್ನೋ ಉದ್ದೇಶದೊಂದಿಗೆ ಶಿವಸೇನೆ ಜೊತೆ […]

ಸೋನಿಯಾ-ಶರದ್​ ‘ಮಹಾ’ ಮೀಟಿಂಗ್ ನಾಳೆಗೆ ಶಿಫ್ಟ್

Updated on: Nov 17, 2019 | 7:54 PM

ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಮಹಾ ಹೈಡ್ರಾಮಾವೇ ನಡೀತಿದೆ. ನಾವು ಸರ್ಕಾರ ರಚಿಸ್ತೀವಿ ಅಂತ ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್​ ಪಕ್ಷಗಳು ಹೇಳ್ತಿದ್ರೂ, ಬಿಕ್ಕಟ್ಟು ಮಾತ್ರ ಇನ್ನೂ ಮುಗ್ದಿಲ್ಲ. ಮೂರು ಪಕ್ಷಗಳ ನಾಯಕರೊಂದಿಗಿನ ರಾಜ್ಯಪಾಲರ ಸಭೆ ರದ್ದುಗೊಂಡಿರೋದು ಒಂದ್ಕಡೆಯಾದ್ರೆ. ಶರದ್​ ಪವಾರ್ ಹಾಗೂ ಸೋನಿಯಾ ಗಾಂಧಿ ನಡುವಿನ ಸಭೆ ಕೂಡ ಪೋಸ್ಟ್​ಪೋನ್ ಆಗಿದೆ.

‘ಶಿವಸೇನೆ’ ಜೊತೆಗಿನ ಮೈತ್ರಿ ಕುರಿತು ಫೈನಲ್ ಡಿಸಿಷನ್:
ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಬೇಕು. ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಬೇಕು ಅನ್ನೋ ಉದ್ದೇಶದೊಂದಿಗೆ ಶಿವಸೇನೆ ಜೊತೆ ಕೈಜೋಡಿಸಲು ಎನ್​ಸಿಪಿ ಮತ್ತು ಕಾಂಗ್ರೆಸ್​ ಮುಂದಾಗಿದೆ. ಆದ್ರೆ, ಮೈತ್ರಿ ಮಾಡಿಕೊಳ್ಳುವ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಈ ಸಂಬಂಧ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಹಾಗೂ ಸೋನಿಯಾ ಗಾಂಧಿ ಜೊತೆ ಇಂದು ಸಭೆ ನಿಗದಿಯಾಗಿತ್ತು. ಆದ್ರೆ, ದಿಢೀರ್ ಅಂತ ಆ ಸಭೆ ನಾಳೆಗೆ ಮುಂದೂಡಿಕೆಯಾಗಿದೆ. ನಾಳೆ ನಡೆಯೋ ಮಾತುಕತೆ ವೇಳೆ ಮಹಾ ಮೈತ್ರಿ ಬಗ್ಗೆ ಮಹತ್ವದ ನಿರ್ಧಾರ ಹೊರಬೀಳೋ ಸಾಧ್ಯತೆ ದಟ್ಟವಾಗಿದೆ.

ವಿಪಕ್ಷಗಳ ಸಾಲಿನಲ್ಲಿ ಕೂರಲಿದ್ದಾರೆ ಶಿವಸೇನೆ ಸಂಸದರು!
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕುರಿತು ಹೊತ್ತಿದ ಬೆಂಕಿ ಬಿಜೆಪಿ ಹಾಗೂ ಶಿವಸೇನೆ ಮೈತ್ರಿಗೆ ಎಳ್ಳು ನೀರು ಬಿಟ್ಟಿದೆ. ಇದ್ರ ಬೆನ್ನಲ್ಲೇ ಸಂಸತ್​ನ ಉಭಯ ಸದನಗಳಲ್ಲಿ ಶಿವಸೇನೆ ಸಂಸದರ ಆಸನ ವ್ಯವಸ್ಥೆ ಕೂಡ ಬದಲಾಗಿದೆ. ಮೈತ್ರಿ ಮುರಿದ ಹಿನ್ನೆಲೆ ಶಿವಸೇನೆ ಸಂಸದರ ಆಸನಗಳು ವಿರೋಧ ಪಕ್ಷಗಳ ಸಾಲಿಗೆ ಶಿಫ್ಟ್ ಆಗಿದೆ. ಅಂದ್ರೆ ನಾಳೆಯಿಂದ ಆರಂಭವಾಗಲಿರೋ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಶಿವಸೇನೆ ವಿಪಕ್ಷ ಸ್ಥಾನದಲ್ಲಿ ಕೂರಲಿದೆ.