
ಬೆಂಗಳೂರು: ವಿವಿಧ ಸರಕಾರಿ ನೌಕರರ ವೇತನದಲ್ಲಿನ ತಾರತಮ್ಯವನ್ನು ತೋರಿಸುವ ಸುತ್ತೋಲೆಯನ್ನು ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದು ಇದು ಚರ್ಚೆಗೆ ಗ್ರಾಸವಾಗಿದೆ.
ಕೇರಳದ ಕಾಲೇಜು ಪ್ರಾಧ್ಯಾಪಕರೊಬ್ಬರು ನನಗೆ ಇದನ್ನು ಕಳಿಸಿದ್ದಾರೆ ಎಂದು ಹೇಳಿರುವ ತರೂರ್, ಕಸಗುಡಿಸುವ ನೌಕರರಿಗೆ ಒಳ್ಳೆಯ ವೇತನ ಸಿಗುತ್ತದೆ ಎಂದು ಶ್ಲಾಘಿಸುತ್ತೇವೆ. ಅದೇ ವೇಳೆ ಸುಮಾರು ವರ್ಷ ಓದಿ, ಪರಿಶ್ರಮದಿಂದ ಉನ್ನತ ಪದವಿ ಪಡೆದು ಅಸಿಸ್ಟೆಂಟ್ ಪ್ರೊಫೆಸರ್ ಆದವರಿಗೆ ಸಿಗುವುದು ಕಡಿಮೆ ವೇತನ ಎಂಬ ಒಕ್ಕಣೆಯೊಂದಿಗೆ ಯುಜಿಸಿ ಸುತ್ತೋಲೆಯನ್ನು ಟ್ವೀಟಿಸಿದ್ದಾರೆ.
ಐದು ವರ್ಷಗಳಲ್ಲಿ UGC ಮಟ್ಟದ ಸಹಾಯಕ ಪ್ರಾಧ್ಯಾಪಕರ ವೇತನ 15,600 ರಿಂದ 39,100ರೂ.ಗಳಷ್ಟಿದ್ದರೆ, ಕಸಗುಡಿಸುವವರ ವೇತನ ಪ್ರಮಾಣವು ಮೂರು ವರ್ಷಗಳಲ್ಲಿ 16,500 ರಿಂದ 3,57,00ವರೆಗೆ ಇರುತ್ತದೆ ಎಂದು ತರೂರ್ ಆ ಸುತ್ತೋಲೆಯಲ್ಲಿ ಗುರುತು ಹಾಕಿ ಹೈಲೈಟ್ ಮಾಡಿದ್ದಾರೆ.
ತರೂರ್ ಅವರ ಈ ಟ್ವೀಟ್ ಚರ್ಚೆಗೆ ಗ್ರಾಸವಾಗಿದ್ದು ಈ ಸುತ್ತೋಲೆ ತಪ್ಪುದಾರಿಗೆಳೆಯುವ ಮತ್ತು ಹಳೆಯ ವೇತನ ಶ್ರೇಣಿಯನ್ನು ಉಲ್ಲೇಖಿಸುತ್ತಿದೆ ಎಂದು ಹಲವರು ಹೇಳಿದರೆ, ಇನ್ನಿತರರು ಕೇರಳವು ತಿದ್ದುಪಡಿ ಮಾಡಿದ ಯುಜಿಸಿ ವೇತನ ಪ್ರಮಾಣವನ್ನು ಅನುಸರಿಸುವುದಿಲ್ಲ ಎಂದು ಟ್ವೀಟ್ನಲ್ಲಿ ವಾದಿಸಿದ್ದಾರೆ.
Published On - 3:43 pm, Tue, 5 January 21