
ದೆಹಲಿ, ಜ.24: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ‘ಆಪರೇಷನ್ ಸಿಂಧೂರ್’ (Operation Sindoor) ಗೆ ಸಂಬಂಧಿಸಿದಂತೆ ತಮ್ಮ ನಿಲುವಿನ ಬಗ್ಗೆ ಯಾವುದೇ ವಿಷಾದವಿಲ್ಲ (Unapologetic) ಎಂದು ಹೇಳಿದ್ದಾರೆ. ಈ ಕುರಿತು ಅವರು ಕಾಂಗ್ರೆಸ್ ಪಕ್ಷದ ಅಧಿಕೃತ ನಿಲುವನ್ನು ಉಲ್ಲಂಘಿಸಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. 2025ರ ಮೇ ತಿಂಗಳಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಪಾಕಿಸ್ತಾನದ ವಿರುದ್ಧ ನಡೆಸಿದ ಮಿಲಿಟರಿ ಕಾರ್ಯಾಚರಣೆ ಬಗ್ಗೆ ಶಶಿ ತರೂರ್ ಅವರು ಸಮರ್ಥಿಸಿಕೊಂಡಿದ್ದರು, ಅವರ ಈ ನಿಲುವಿನ ಬಗ್ಗೆ ಅವರ ಪಕ್ಷದಲ್ಲೇ ಕೆಲವು ಅಪಸ್ವರಗಳು ಬಂತು, ಪಾಕಿಸ್ತಾನದ ಭಯೋತ್ಪಾದನೆ ಬಗ್ಗೆ ವಿಶ್ವಕ್ಕೆ ತಿಳಿಸುವ ನಿಟ್ಟಿನಲ್ಲಿ ಸರ್ವಪಕ್ಷದ ಸಂಸದರ ನಿಯೋಗವನ್ನು ಬೇರೆ ಬೇರೆ ದೇಶಕ್ಕೆ ಕೇಂದ್ರ ಸರ್ಕಾರ ಕಳಿಸಿತ್ತು. ಈ ಬಗ್ಗೆ ಪ್ರಶಂಸೆ ಕೂಡ ವ್ಯಕ್ತವಾಗಿತ್ತು. ಶಶಿ ತರೂರ್ ಅವರು ಕೂಡ ಈ ನಿಯೋಗದ ನೇತೃತ್ವವನ್ನು ವಹಿಸಿದರು. ಆದರೆ ಕಾಂಗ್ರೆಸ್ ಕೇಂದ್ರದ ಮಿಲಿಟರಿ ಕಾರ್ಯಚರಣೆ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತುವಂತೆ ಹೇಳಿತ್ತು, ಆದರೆ ಇದನ್ನು ಶಶಿ ತರೂರ್ ಅವರು ವಿರೋಧಿಸಿದರು. ಇದು ಪಕ್ಷದ ನಿಯಮ ಉಲ್ಲಂಘನೆ ಮಾಡಿದ್ದಂತೆ ಎಂದು ಕಾಂಗ್ರೆಸ್ ಹೇಳಿದೆ. ಈ ಬಗ್ಗೆ ಇದೀಗ ಕೋಝಿಕ್ಕೋಡ್‌ನಲ್ಲಿ ನಡೆದ ಕೇರಳ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ್ದಾರೆ.
ನಾನು ಸಂಸತ್ತಿನಲ್ಲಿ ಕಾಂಗ್ರೆಸ್‌ನ ಯಾವುದೇ ನಿಲುವುಗಳನ್ನು ಯಾವುದೇ ಹಂತದಲ್ಲೂ ಉಲ್ಲಂಘಿಸಿಲ್ಲ, ಸಾರ್ವಜನಿಕವಾಗಿ ತತ್ವದ ಬಗ್ಗೆ ಭಿನ್ನಾಭಿಪ್ರಾಯವಿರುವ ಏಕೈಕ ವಿಷಯವೆಂದರೆ ಆಪರೇಷನ್ ಸಿಂಧೂರ್, ಅಲ್ಲಿ ನಾನು ಬಲವಾದ ನಿಲುವನ್ನು ತೆಗೆದುಕೊಂಡಿದ್ದೆ ಮತ್ತು ನಾನು ಅದರ ಬಗ್ಗೆ ಎಂದಿಗೂ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದಾರೆ. ಪಹಲ್ಗಮ್ ಘಟನೆ ನಡೆದ ನಂತರ, ನಾನು ಒಬ್ಬ ವೀಕ್ಷಕ ಮತ್ತು ನಿರೂಪಕ, ಬರಹಗಾರನಾಗಿ, ದಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಒಂದು ಅಂಕಣವನ್ನು ಬರೆದಿದ್ದೆ, ಅದಕ್ಕೆ ನಾನು ‘ಆಫ್ಟರ್ ಪಹಲ್ಗಮ್’ ಎಂಬ ಶೀರ್ಷಿಕೆಯನ್ನು ನೀಡಿದ್ದೇನೆ. ಅವರು ಅದಕ್ಕೆ ‘ಹಾರ್ಡ್ ಹಿಟ್, ಹಿಟ್ ಸ್ಮಾರ್ಟ್’ ಎಂಬ ಶೀರ್ಷಿಕೆಯನ್ನು ನೀಡಿದರು . ಅದರಲ್ಲಿ ನಾನು ದೇಶದ ಬಗ್ಗೆ ಹೇಳಿದ್ದೇನೆ. ನಾವು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದ ದೇಶ. ಪಾಕಿಸ್ತಾನದೊಂದಿಗೆ ಪೂರ್ಣ ಪ್ರಮಾಣದ ಸಂಘರ್ಷ ಮಾಡುವುದು ನಮ್ಮ ಉದ್ದೇಶವಲ್ಲ, ನಾವು ಬಾಹ್ಯ ಹೂಡಿಕೆಗಳ ಮೇಲೆ ಅವಲಂಬಿತ ದೇಶ, ಮತ್ತು ಹೂಡಿಕೆದಾರರು ಯುದ್ಧ ವಲಯಗಳನ್ನು ಇಷ್ಟಪಡುವುದಿಲ್ಲ, ಆದ್ದರಿಂದ ಭಾರತವನ್ನು ಯುದ್ಧ ವಲಯವನ್ನಾಗಿ ಪರಿವರ್ತಿಸುವ ಯಾವುದೇ ಹೆಜ್ಜೆಯನ್ನು ನಾವು ಇಡಲು ಸಾಧ್ಯವಿಲ್ಲ.
ಇದನ್ನೂ ಓದಿ: ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ 350ಕ್ಕೆ ಹೆಚ್ಚಿಸುವ ಗುರಿ: ಕರ್ನಾಟಕಕ್ಕೆ ಹೊಸ ವಿಮಾನ ನಿಲ್ದಾಣದ ಭರವಸೆ
ಹಾಗಾಗಿ ನಮ್ಮ ಯುದ್ಧ ಭಯೋತ್ಪಾದಕರ ಮೇಲೆ ಮಾತ್ರ, ಭಯೋತ್ಪಾದಕ ಗುರಿಗಳನ್ನು ಮಾತ್ರ ಹೊಡೆಯಿರಿ ಮತ್ತು ಭಾರತೀಯರು ಭಯೋತ್ಪಾದನೆಯನ್ನು ಮಾತ್ರ ಗುರಿಯಾಗಿಸಿಕೊಂಡಿದ್ದೇವೆ ಎಂದು ಹೇಳಿದರು. ನಾವು ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತಿಲ್ಲ. ಭಯೋತ್ಪಾದನೆಯನ್ನು ನಿಗ್ರಹಿಸಲು ಪಾಕಿಸ್ತಾನಕ್ಕೆ ಒತ್ತಡ ಹಾಕುತ್ತಿದ್ದೇವೆ ಎಂದು ಹೇಳಿದ್ದಾರೆ. ಇನ್ನು ಈ ವೇಳೆ ಭಾರತ ಸರ್ಕಾರದ ನಿಯೋಗದ ನೇತೃತ್ವ ವಹಿಸಿರುವ ಬಗ್ಗೆ ನೆನೆಪಿಸಿಕೊಂಡರು. ಒಂದು ಒಳ್ಳೆಯ ಅನುಭವ ನೀಡಿದೆ. ಭಾರತ ಸತ್ತರೆ ಯಾರು ಬದುಕುತ್ತಾರೆ ಎಂಬ ನೆಹರು ಅವರ ಮಾತನ್ನು ಕೂಡ ನೆನಪಿಸಿಕೊಂಡರು. ಜಗತ್ತಿನಲ್ಲಿ ಭಾರತದ ರಾಷ್ಟ್ರೀಯ ಭದ್ರತೆಯು ಒಂದು ಸಮಸ್ಯೆಯಾಗಿದ್ದಾಗ, ಭಾರತವು ಮೊದಲು ಬರುತ್ತದೆ. ರಾಜಕೀಯ ಪಕ್ಷಗಳು ಮುಖ್ಯ, ಅವು ಉತ್ತಮ ಭಾರತವನ್ನು ರಚಿಸಲು ಒಂದು ವಾಹನ. ಅದನ್ನು ಮಾಡುವ ವಿಧಾನಗಳಲ್ಲಿ ನಾವು ಪರಸ್ಪರ ಭಿನ್ನಾಭಿಪ್ರಾಯ ಹೊಂದಬಹುದು, ಆದರೆ ಭಾರತದ ಹಿತಾಸಕ್ತಿಗಳು ತೊಡಗಿಸಿಕೊಂಡಾಗಲೆಲ್ಲಾ, ಭಾರತವು ಮೇಲುಗೈ ಸಾಧಿಸುತ್ತದೆ ಎಂದು ಹೇಳಿದರು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:47 pm, Sat, 24 January 26