ಅವಳಿಗೆ ಸಾಯಬೇಕೆನಿಸಿತ್ತು, ಅದಕ್ಕೆ ಕೊಂದೆ; ಮಾಜಿ ಪ್ರೇಯಸಿಗೆ ವಿಷ ಹಾಕಿ ಸಾಯಿಸಿದ ಬಳಿಕ ತಪ್ಪೊಪ್ಪಿಕೊಂಡ ಯುವಕ!

ಉತ್ತರ ಪ್ರದೇಶದ ಲಲಿತಪುರದಲ್ಲಿ ಮಾಜಿ ಪ್ರೇಯಸಿಗೆ ವಿಷಪ್ರಾಶನ ಮಾಡಿ ಕೊಲೆ ಮಾಡಿದ ನಂತರ ಪೊಲೀಸರ ಬಳಿ ವ್ಯಕ್ತಿಯೊಬ್ಬ ತಪ್ಪೊಪ್ಪಿಕೊಂಡಿದ್ದಾನೆ. ಮೃತ ಯುವತಿ ರಾಣಿಯ ದೇಹವು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದ್ದು, ಪೊಲೀಸರಿಗೆ ಅವಳನ್ನು ಗುರುತಿಸುವುದು ಕಷ್ಟಕರವಾಗಿತ್ತು. ನಂತರ ಪೊಲೀಸರು ಮಹಿಳೆಯ ಕೈಯಲ್ಲಿ 'ಆರ್-ಜಗದೀಶ್' ಎಂದು ಬರೆದಿರುವುದನ್ನು ನೋಡಿದರು, ಅದು ಯುವತಿಯನ್ನು ಗುರುತಿಸಲು ಸಹಾಯ ಮಾಡಿತು.

ಅವಳಿಗೆ ಸಾಯಬೇಕೆನಿಸಿತ್ತು, ಅದಕ್ಕೆ ಕೊಂದೆ; ಮಾಜಿ ಪ್ರೇಯಸಿಗೆ ವಿಷ ಹಾಕಿ ಸಾಯಿಸಿದ ಬಳಿಕ ತಪ್ಪೊಪ್ಪಿಕೊಂಡ ಯುವಕ!
Crime

Updated on: Jul 18, 2025 | 10:51 PM

ನೊಯ್ಡಾ, ಜುಲೈ 18: ಇತ್ತೀಚೆಗೆ ಹೆಂಡತಿ ಮತ್ತು ಪ್ರೆಯಸಿಯರು ತಮ್ಮ ಗಂಡನನ್ನು ಕೊಲೆ ಮಾಡುವ ಪ್ರಕರಣ ಹೆಚ್ಚಾಗಿದೆ. ಹೊಸ ಹೊಸ ವಿಧದಲ್ಲಿ ಕೊಲೆ ನಡೆದು ಶವವನ್ನು (Deadbody) ಹೂತುಹಾಕುತ್ತಿರುವ ಘಟನೆಗಳು ಸಮಾಜದ ಸ್ವಾಸ್ಥ್ಯದ ಬಗ್ಗೆ ಆತಂಕ ಮೂಡಿಸಿವೆ. ಇದರ ನಡುವೆ ಮಾಜಿ ಲಿವ್ ಇನ್ ರಿಲೇಷನ್​​ ಸಂಗಾತಿಗೆ ವಿಷ ಹಾಕಿ ಕೊಂದಿರುವ ಯುವಕನೊಬ್ಬ ‘ಅವಳು ಸಾಯಲು ಬಯಸಿದ್ದಳು, ಅದಕ್ಕೆ ನಾನೇ ಅವಳನ್ನು ಕೊಂದೆ’ ಎಂದು ಹೇಳುವ ಮೂಲಕ ಪೊಲೀಸರಿಗೇ ಶಾಕ್ ನೀಡಿದ್ದಾನೆ.

ಉತ್ತರ ಪ್ರದೇಶದ ಲಲಿತಪುರದಲ್ಲಿ ಈ ಘಟನೆ ನಡೆದಿದೆ. ತನ್ನ ಮಾಜಿ ಪ್ರೇಯಸಿಗೆ ವಿಷಪ್ರಾಶನ ಮಾಡಿ ಕೊಲೆ ಮಾಡಿದ ನಂತರ ಯುವಕ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಮೃತ ಯುವತಿ ರಾಣಿಯ ದೇಹವು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದ್ದು, ಪೊಲೀಸರಿಗೆ ಅವಳನ್ನು ಗುರುತಿಸುವುದು ಕಷ್ಟಕರವಾಗಿತ್ತು. ಆ ಯುವತಿಯ ಕೈಯಲ್ಲಿ ‘ಆರ್-ಜಗದೀಶ್’ ಎಂದು ಬರೆದಿದ್ದರಿಂದ ಅದು ಮಹಿಳೆಯನ್ನು ಗುರುತಿಸಲು ಸಹಾಯ ಮಾಡಿತು.

ಉತ್ತರ ಪ್ರದೇಶದ ಲಲಿತಪುರದಲ್ಲಿ ಒಬ್ಬ ವ್ಯಕ್ತಿ ತನ್ನ ಮಾಜಿ ಸಂಗಾತಿಯ ವಿಘಟನೆಯ ನಂತರ ಆಕೆಗೆ ವಿಷಪ್ರಾಶನ ಮಾಡಿ ಕೊಂದನು. ಆರೋಪಿ ಜಗದೀಶ್ ರಾಯ್ಕ್ವಾರ್ ತನ್ನ ಪ್ರಿಯತಮೆಯನ್ನು ಹೇಗೆ ಕೊಲ್ಲುವುದು ಮತ್ತು ನಂತರ ಆಕೆಗೆ ವಿಷ ಕುಡಿಸಿ ದೇಹವನ್ನು ನದಿಗೆ ಎಸೆಯುವುದು ಎಂದು ಗೂಗಲ್‌ನಲ್ಲಿ ಹುಡುಕಿದ್ದ.

ಇದನ್ನೂ ಓದಿ: ಬೀದಿ ನಾಯಿಯನ್ನು ಉಳಿಸಲು ಹೋಗಿ 17 ವರ್ಷದ ಸ್ಕೂಟಿ ಸವಾರ ಸಾವು

ಆ ವ್ಯಕ್ತಿ ತಪ್ಪಿಸಿಕೊಳ್ಳಲು ಯೋಜಿಸುತ್ತಿದ್ದಾಗ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದರು. ಕೊಲೆಗೆ ಪಶ್ಚಾತ್ತಾಪ ಪಡದ ಆರೋಪಿ ಪೊಲೀಸರ ಬಳಿ ಆಕೆಯೇ ಸಾಯಲು ಬಯಸಿದ್ದರಿಂದ ನಾನು ಆಕೆಯನ್ನು ಕೊಂದಿದ್ದೇನೆ ಎಂದು ಹೇಳಿದ್ದಾನೆ.

ವರದಿಗಳ ಪ್ರಕಾರ, ರಾಣಿ ಎಂದು ಗುರುತಿಸಲ್ಪಟ್ಟ ಬಲಿಪಶು ಜಗದೀಶ್ ಜೊತೆ ಸಂಬಂಧ ಹೊಂದಿದ್ದಳು. ಆಕೆ ಲಲಿತಪುರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಪೊಲೀಸರ ಪ್ರಕಾರ, ಆರೋಪಿಯ ಮದುವೆ ಬೇರೊಬ್ಬಳೊಂದಿಗೆ ನಿಶ್ಚಯವಾದ ನಂತರ ರಾಣಿ ಮತ್ತು ಜಗದೀಶ್ ನಡುವೆ ಜಗಳ ನಡೆದಿದೆ. ತನ್ನ ಗಂಡನನ್ನು ಜಗದೀಶ್ ಜೊತೆ ವಾಸಿಸಲು ಬಿಟ್ಟಿದ್ದ ರಾಣಿ, ಜಗದೀಶನ ಭಾವಿ ಪತ್ನಿ ಮತ್ತು ಆಕೆ ಒಟ್ಟಿಗೆ ವಾಸಿಸಬೇಕೆಂದು ಬಯಸಿದ್ದನ್ನು ಜಗದೀಶ್ ವಿರೋಧಿಸಿದ್ದನು. ಇದಾದ ನಂತರ ಅವರಿಬ್ಬರ ನಡುವೆ ಜಗಳವಾಗಿತ್ತು. ಇದರಿಂದ ಕೋಪಗೊಂಡ ಜಗದೀಶ್ ತನ್ನ ಪ್ರಿಯತಮೆಯಾಗಿದ್ದ ರಾಣಿಯನ್ನು ಕೊಲ್ಲುವ ಮಾರ್ಗಗಳನ್ನು ಆನ್‌ಲೈನ್‌ನಲ್ಲಿ ಹುಡುಕಿದನು. ಕೊನೆಗೆ ವಿಷ ಕೊಟ್ಟು ಕೊಲ್ಲುವ ಆಯ್ಕೆಯನ್ನು ಆರಿಸಿಕೊಂಡನು.

ಇದನ್ನೂ ಓದಿ: ತಮಿಳುನಾಡು: ಪೊಲೀಸ್​ ಠಾಣೆ ಬಳಿ ಜಾಮೀನಿನ ಮೇಲೆ ಹೊರ ಬಂದಿದ್ದ ಆರೋಪಿಯ ಬರ್ಬರ ಹತ್ಯೆ

ಜಗದೀಶ್ ರಾಣಿಯನ್ನು ಆಹ್ವಾನಿಸಿ ಅವಳಿಗೆ ಜ್ಯೂಸ್​ನಲ್ಲಿ ವಿಷ ಬೆರೆಸಿ ಕುಡಿಸಿದನು. ಅವಳು ಪ್ರಜ್ಞೆ ತಪ್ಪಿದ ನಂತರ ಅವನು ಅವಳನ್ನು ಕತ್ತು ಹಿಸುಕಿ ಕೊಂದನು. ನಂತರ, ಆಕೆಯ ದೇಹವನ್ನು ಶಹಜಾದ್ ನದಿಯಲ್ಲಿ ನೀಲಿ ಚೀಲದಲ್ಲಿ ಕಟ್ಟಿ ಎಸೆದನು. ಸ್ಥಳೀಯ ಮೀನುಗಾರನೊಬ್ಬ ನದಿಯಲ್ಲಿ ತೇಲುತ್ತಿರುವ ನೀಲಿ ಚೀಲವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದನು. ಆಕೆಯ ಕೈ ಮೇಲಿದ್ದ ಜಗದೀಶನ ಹೆಸರಿನಿಂದ ಪೊಲೀಸರಿಗೆ ಶವವನ್ನು ಪತ್ತೆಹಚ್ಚಲು ಸಹಾಯವಾಯಿತು ಹಾಗೂ ಕೊಲೆಗಾರನನ್ನು ಹಿಡಿಯಲು ಅನುಕೂಲವಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ