ಆಟೋ ಚಾಲಕನೊಂದಿಗೆ ವಾಗ್ವಾದ ಮಾಡುತ್ತಲೇ ಕುಸಿದು ಬಿದ್ದು ಪ್ರಾಣ ಬಿಟ್ಟ ಶಿವಸೇನಾ ನಾಯಕನ ಪುತ್ರ

|

Updated on: Jul 29, 2024 | 12:11 PM

ಶಿವಸೇನೆಯ ನಾಯಕನ ಪುತ್ರರೊಬ್ಬರು ಆಟೋ ಚಾಕನೊಂದಿಗೆ ವಾಗ್ವಾದ ಮಾಡುತ್ತಾ ಕುಸಿದುಬಿದ್ದು ಪ್ರಾಣಬಿಟ್ಟಿದ್ದಾರೆ, ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಪೊಲೀಸರು ಅಂದಾಜಿಸಿದ್ದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಆಟೋ ಚಾಲಕನೊಂದಿಗೆ ವಾಗ್ವಾದ ಮಾಡುತ್ತಲೇ ಕುಸಿದು ಬಿದ್ದು ಪ್ರಾಣ ಬಿಟ್ಟ ಶಿವಸೇನಾ ನಾಯಕನ ಪುತ್ರ
ಹೃದಯಾಘಾತ
Follow us on

ಆಟೋ ಚಾಲಕನೊಂದಿಗೆ ವಾಗ್ವಾದ ಮಾಡುತ್ತಲೇ ಶಿವಸೇನಾ(ಯುಟಿಬಿ) ನಾಯಕನ ಪುತ್ರ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಪಾಲ್ಘಢದಲ್ಲಿ ನಡೆದಿದೆ. ಅವಿಭಜಿತ ಶಿವಸೇನೆಯ ಮಾಜಿ ಥಾಣೆ ಜಿಲ್ಲಾ ಮುಖ್ಯಸ್ಥ ರಘುನಾಥ್ ಮೋರೆ ಅವರ ಪುತ್ರ ಮಿಲಿಂದ್ ಮೋರೆ ಅವರು ತಮ್ಮ ಕುಟುಂಬದೊಂದಿಗೆ ನವಪುರದ ರೆಸಾರ್ಟ್‌ ಬಳಿ ಭಾನುವಾರ ಸಂಜೆ ಘಟನೆ ನಡೆದಿದೆ ಎಂದು ಉಪ ಪೊಲೀಸ್ ಆಯುಕ್ತ ಜಯಂತ್ ಬಜ್ಬಲೆ ತಿಳಿಸಿದ್ದಾರೆ.

ರೆಸಾರ್ಟ್​ನಿಂದ ಹೊರಗೆ ಹೋಗುವಾಗ ಆಟೋ ಚಾಲಕನೊಂದಿದೆ ಜಗಳವಾಡಿದ್ದಾರೆ ಆ ಸಮಯದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಆದರೆ ಅಲ್ಲಿಗೆ ಬರುವಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದರು ಎಂದು ವೈದ್ಯರು ಹೇಳಿದ್ದಾರೆ. ಹೃದಯಾಘಾತವು ಪ್ರಾಥಮಿಕ ಕಾರಣವೆನ್ನುವ ಅಭಿಪ್ರಾಯಕ್ಕೆ ಬರಲಾಯಿತು.

ಮತ್ತಷ್ಟು ಓದಿ: ಮೊಮ್ಮಗನ ಶವ ನೋಡಿದ ಅಜ್ಜನಿಗೆ ಹೃದಯಾಘಾತ, ಒಟ್ಟಿಗೆ ಅಂತ್ಯಸಂಸ್ಕಾರ

ಮೋರ್ ಅವರ ಸಂಬಂಧಿಕರ ದೂರಿನ ಆಧಾರದ ಮೇಲೆ, ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಸೆಕ್ಷನ್ 105 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಿಲಿಂದ್ ಮೋರೆ ಅವರು ಶಿವಸೇನೆಯ (ಯುಬಿಟಿ) ಥಾಣೆ ಘಟಕದ ಉಪ ಮುಖ್ಯಸ್ಥರಾಗಿದ್ದಾರೆ ಎಂದು ಪಕ್ಷದ ಪದಾಧಿಕಾರಿಗಳು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ