Shiv Sena: ಉದ್ಧವ್ ಠಾಕ್ರೆ ಬಣದಲ್ಲಿರುವ ಹಲವು ಶಾಸಕರು ನಮ್ಮ ಜತೆ ಕೈ ಜೋಡಿಸಲು ಸಿದ್ಧರಿದ್ದಾರೆ: ಶಿವಸೇನಾ ನಾಯಕ
ಶಿವಸೇನೆಯ ಉದ್ಧವ್ ಠಾಕ್ರೆ ಬಣದಲ್ಲಿರುವ ಹಲವು ಶಾಸಕರು ನಮ್ಮ ಜತೆ ಕೈ ಜೋಡಿಸಲು ಸಿದ್ಧರಿದ್ದಾರೆ ಎಂದು ಶಿವಸೇನಾ ನಾಯಕರು ತಿಳಿಸಿದ್ದಾರೆ.
ಶಿವಸೇನೆಯ ಉದ್ಧವ್ ಠಾಕ್ರೆ ಬಣದಲ್ಲಿರುವ ಹಲವು ಶಾಸಕರು ನಮ್ಮ ಜತೆ ಕೈ ಜೋಡಿಸಲು ಸಿದ್ಧರಿದ್ದಾರೆ ಎಂದು ಶಿವಸೇನಾ ನಾಯಕರು ತಿಳಿಸಿದ್ದಾರೆ. ಕಳೆದ ವರ್ಷ ಠಾಕ್ರೆ ವಿರುದ್ಧ ಬಂಡಾಯವೆದ್ದು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಶಿಂದೆ ನೇತೃತ್ವದ ಬಣಕ್ಕೆ ಚುನಾವಣಾ ಆಯೋಗವು ಶಿವಸೇನೆಯ ಹೆಸರು ಹಾಗೂ ಚಿಹ್ನೆಯನ್ನು ನೀಡಿದ್ದು, ಇದೇ ಅಧಿಕೃತ ಪಕ್ಷ ಎಂದು ಘೋಷಿಸಿದೆ.
ಶಿವಸೇನೆ ಇರುವುದು ಒಂದೇ ಪಕ್ಷ ಹಾಗೂ ಚಿಹ್ನೆ ಎರಡೂ ನಮ್ಮ ಕಡೆ ಇದೆ, ಎಲ್ಲರೂ ನಮ್ಮೊಂದಿಗೆ ಇರಬೇಕು, ನಾವು ಏನು ಹೇಳುತ್ತೇವೋ ಅದನ್ನು ಅನುಸರಿಸಬೇಕು, ಎರಡು ವಾರಗಳ ನಂತರ ನಾವು ಅವರಿಗೆ ಏನು ಮಾಡಬೇಕೆಂಬುದನ್ನು ನೋಡುತ್ತೇವೆ ಎಂದು ಶಿವಸೇನೆಯ ಮುಖ್ಯ ಸಚೇತಕ ಭರತ್ ಗೋಗವಾಲೆ ಹೇಳಿದ್ದಾರೆ.
ಮುಖ್ಯ ಸಚೇತಕರ ಆದೇಶವನ್ನು ಉಲ್ಲಂಘಿಸುವ ಯಾವುದೇ ನಾಯಕರ ವಿರುದ್ಧ ಕನಿಷ್ಠ ಎರಡು ವಾರಗಳವರೆಗೆ ಪಕ್ಷವು ಕ್ರಮ ಕೈಗೊಳ್ಳುವುದಿಲ್ಲ ಎಂದು ಶಿವಸೇನೆ ನಿನ್ನೆ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ. ಲೋಕಸಭೆಯಲ್ಲಿ ತಮ್ಮ ಮುಖ್ಯ ಸಚೇತಕರನ್ನು ಶಿವಸೇನೆ ಕೂಡ ಬದಲಾಯಿಸಲಿದೆ ಮತ್ತು ಶಿಂದೆ ಶೀಘ್ರದಲ್ಲೇ ಹೆಸರನ್ನು ಘೋಷಿಸಲಿದ್ದಾರೆ ಎಂದು ಗೋಗವಾಲೆ ಹೇಳಿದರು.
ಮತ್ತಷ್ಟು ಓದಿ: ಸಿಎಂ ನನ್ನ ಮಗನನ್ನು ಕೊಲೆ ಮಾಡಲು ಸುಪಾರಿ ನೀಡಿದ್ದಾರೆ: ಸಂಜಯ್ ರಾವತ್ ಗಂಭೀರ ಆರೋಪ
ನಾವು ಸದ್ಯಕ್ಕೆ ಯಾರ ವಿರುದ್ಧವೂ ಕ್ರಮ ಕೈಗೊಳ್ಳುವುದಿಲ್ಲ. ನಮ್ಮ ವಿಪ್ ಮಾತ್ರ ಎಲ್ಲರೂ ವಿಧಾನಸಭಾ ಅಧಿವೇಶನಕ್ಕೆ ಹಾಜರಾಗಬೇಕೆಂದು ಹೇಳುತ್ತದೆ. ಉದ್ಧವ್ ಠಾಕ್ರೆ ನೇತೃತ್ವದ ಬಣವಾದ ಶಿವಸೇನೆಯ ಉದ್ಧವ್ ಬಾಳಾಸಾಹೇಬ್ ಠಾಕ್ರೆಯ ಅನೇಕ ಶಾಸಕರು ನಮ್ಮೊಂದಿಗೆ ಸೇರಲು ಸಿದ್ಧರಾಗಿದ್ದಾರೆ ಎಂದ ಗೋಗವಾಲೆ ಹೇಳಿದರು.
ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರು, ಶಿಂದೆ ಅವರು ಅಸಂವಿಧಾನಿಕ ಸರ್ಕಾರವನ್ನು ಹೇಗೆ ನಡೆಸುತ್ತಿದ್ದಾರೆಂದು ಮಹಾರಾಷ್ಟ್ರದ ಜನರಿಗೆ ತಿಳಿದಿದೆ, ಅದು ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ