ವೈದ್ಯರು ರೋಗಿಯನ್ನು ಸ್ಪರ್ಶಿಸದೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ: ಕೇರಳ ಹೈಕೋರ್ಟ್
ವೈದ್ಯರು ರೋಗಿಯನ್ನು ಸ್ಪರ್ಶಿಸದೆ ಚಿಕಿತ್ಸೆ ಕೊಡಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವೈದ್ಯರೊಬ್ಬರು ಚಿಕಿತ್ಸೆ ನೀಡುವಾಗ ಮಹಿಳಾ ರೋಗಿಯನ್ನು ಸ್ಪರ್ಶಿಸಿದರು ಎನ್ನುವ ಕಾರಣಕ್ಕೆ ಆ ಮಹಿಳೆಯ ಪತಿ ವೈದ್ಯರಿಗೆ ಕಪಾಳಮೋಕ್ಷ ಮಾಡಿದ್ದ.
ವೈದ್ಯರು ರೋಗಿಯನ್ನು ಸ್ಪರ್ಶಿಸದೆ ಚಿಕಿತ್ಸೆ ಕೊಡಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವೈದ್ಯರೊಬ್ಬರು ಚಿಕಿತ್ಸೆ ನೀಡುವಾಗ ಮಹಿಳಾ ರೋಗಿಯನ್ನು ಸ್ಪರ್ಶಿಸಿದರು ಎನ್ನುವ ಕಾರಣಕ್ಕೆ ಆ ಮಹಿಳೆಯ ಪತಿ ವೈದ್ಯರಿಗೆ ಕಪಾಳಮೋಕ್ಷ ಮಾಡಿದ್ದ. ಇದೀಗ ವೈದ್ಯನಿಗೆ ಕಪಾಳಮೋಕ್ಷ ಮಾಡಿದ ಹಿನ್ನೆಲೆಯಲ್ಲಿ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದ್ದು, ಜೈಲಿನಲ್ಲಿದ್ದಾನೆ, ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ನಿಕಲ್ ಪರೀಕ್ಷೆ ಸಮಯದಲ್ಲಿ ವೈದ್ಯರು ಮಹಿಳಾ, ಪುರುಷ ರೋಗಿಯನ್ನು ಸ್ಪರ್ಶಿಸುವುದರಿಂದ ರೋಗಿಗೆ ಇರಿಸುಮುರಿಸು ಉಂಟಾದರೆ ವೈದ್ಯರಿಗೆ ಚಿಕಿತ್ಸೆ ನೀಡುವುದು ಕಷ್ಟವಾಗುತ್ತದೆ.
ರೋಗಿಯ ಹೃದಯಬಡಿತವನ್ನು ವೀಕ್ಷಿಸಲು ಎದೆ ಭಾಗವನ್ನು ಸ್ಪರ್ಶಿಸಲೇ ಬೇಕಾಗುತ್ತದೆ, ಇನ್ನೂ ಯಾವುದೇ ರೀತಿಯ ಇತರೆ ಆರೋಗ್ಯ ಸಮಸ್ಯೆಗಳಿದ್ದರೆ ಆ ಭಾಗವನ್ನು ಅನಿವಾರ್ಯವಾಗಿ ಸ್ಪರ್ಶಿಸಿ ಏನಾಗಿದೆ ಎಂಬುದನ್ನು ತಿಳಿಯಬೇಕಾಗುತ್ತದೆ. ಇದರಲ್ಲಿ ವೈದ್ಯರ ತಪ್ಪು ಏನೂ ಇರುವುದಿಲ್ಲ.
ಮತ್ತಷ್ಟು ಓದಿ:ಮಂಡ್ಯ: ಎರಡು ಕಾರುಗಳ ನಡುವೆ ಭೀಕರ ಅಪಘಾತ: ನಾಲ್ವರ ಸಾವು
ಜನವರಿ 8 ರಂದು ವೈದ್ಯರೊಬ್ಬರು ಅಪಘಾತ ವಿಭಾಗದಲ್ಲಿ ದಾಖಲಾಗಿದ್ದ ಮಹಿಳಾ ರೋಗಿಗೆ ಚಿಕಿತ್ಸೆ ನೀಡಿದ್ದರು. ಬಳಿಕ ಆ ಮಹಿಳೆಯ ಪತಿ ವೈದ್ಯರ ಕೊರಳಪಟ್ಟಿ ಹಿಡಿದು, ಅವರು ತನ್ನ ಪತ್ನಿಯ ಮೈಮುಟ್ಟಿದ್ದಾರೆ ಎಂದು ಆರೋಪಿಸಿ ಕಪಾಳಮೋಕ್ಷ ಮಾಡಿದ್ದ. ಬಳಿಕ ವೈದ್ಯರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಇದೀಗ ಆರೋಪಿಗೆ ಕ್ರಿಮಿನಲ್ ಪೂರ್ವಾಪರ ಹೊಂದಿದ್ದಾನೆ ಹೀಗಾಗಿ ನಿರೀಕ್ಷಣಾ ಜಾಮೀನು ನೀಡಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ. ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ನಂತರ, ವೈದ್ಯರು ಆರೋಪಿಯ ಪತ್ನಿಯನ್ನು ಇಬ್ಬರು ಸಹೋದರಿಯರ ಸಮ್ಮುಖದಲ್ಲಿ ಗಾಯವಾದ ಭಾಗವನ್ನು ನೋಡಿ ಚಿಕಿತ್ಸೆ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ