AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Slap Day: ನಿಮ್ಮ ಮಾಜಿ ಪ್ರೇಮಿ ಮೇಲೆ ಕಪಾಳಮೋಕ್ಷ ಮಾಡುವಷ್ಟು ಕೋಪ ಇದೆಯಾ? ಈ ಕೋಪದಿಂದ ಹೊರಬರಲು ಇಲ್ಲಿದೆ ದಾರಿ

ಪ್ರೀತಿಯಲ್ಲಿ ಒಡಕುಂಟಾಗಿ ಒಬ್ಬರಿಂದೊಬ್ಬರು ದೂರವಿದ್ದೀರಾ, ಈ ಬ್ರೇಕ್‌ಅಪ್ ನಿಮ್ಮ ಮನಸ್ಸಿನಲ್ಲಿ ನಿಮ್ಮ ಪ್ರೇಮಿಯನ್ನು ಸಾಯಿಸುವಷ್ಟು ಕೋಪವನ್ನು ಹುಟ್ಟುಹಾಕುತ್ತದೆ. ಈ ಕೋಪದಿಂದ ಹೊರಬರುವ ಮಾರ್ಗಗಳು ಇಲ್ಲಿವೆ.

Slap Day: ನಿಮ್ಮ ಮಾಜಿ ಪ್ರೇಮಿ ಮೇಲೆ ಕಪಾಳಮೋಕ್ಷ ಮಾಡುವಷ್ಟು ಕೋಪ ಇದೆಯಾ? ಈ ಕೋಪದಿಂದ ಹೊರಬರಲು ಇಲ್ಲಿದೆ ದಾರಿ
Slap Day
ಅಕ್ಷಯ್​ ಪಲ್ಲಮಜಲು​​
|

Updated on:Feb 15, 2023 | 12:26 PM

Share

ಪ್ರೀತಿಯಲ್ಲಿ ಒಡಕುಂಟಾಗಿ ಒಬ್ಬರಿಂದೊಬ್ಬರು ದೂರವಿದ್ದೀರಾ, ಈ ಬ್ರೇಕ್‌ಅಪ್ ನಿಮ್ಮ ಮನಸ್ಸಿನಲ್ಲಿ ನಿಮ್ಮ ಪ್ರೇಮಿಯನ್ನು ಸಾಯಿಸುವಷ್ಟು ಕೋಪವನ್ನು ಹುಟ್ಟುಹಾಕುತ್ತದೆ. ಈ ಕೋಪದಿಂದ ಹೊರಬರುವ ಮಾರ್ಗಗಳು ಇಲ್ಲಿವೆ. ಪ್ರೇಮಿಗಳ ಮಧ್ಯೆ ಗೊಂದಲ ಹಾಗೂ ಕೆಲವೊಂದು ಅನಿರೀಕ್ಷಿತ ಘಟನೆಗಳಿಂದಾಗಿ ಅವರಿಬ್ಬರ ಪ್ರೀತಿಯ ಮಧ್ಯೆ ಬಿರುಕು ಮೂಡಿ ಬ್ರೇಕ್‌ಅಪ್ ಆಗುತ್ತದೆ. ಈ ಘಟನೆಗಳು ತೀವ್ರವಾದ ಕೋಪ, ಅಸಹಾಯಕತೆ ಮತ್ತು ಅಪನಂಬಿಕೆಯ ಭಾವನೆಯನ್ನು ಪ್ರಚೋದಿಸುತ್ತದೆ. ಈ ಕಷ್ಟಕರ ಸಂದರ್ಭಗಳಲ್ಲಿ ನಿಮ್ಮ ಭಾವನೆಗಳನ್ನು ನಿಯಂತ್ರಿಸುವುದು ತುಂಬಾ ಕಷ್ಟಕರವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ನೀವು ಮನಸ್ಸಿನಲ್ಲಿರುವ ಕೋಪವನ್ನು ಹೊರ ಹಾಕಲು ಪ್ರಯತ್ನಿಸುತ್ತಿದ್ದರೆ, ಆ ಕೋಪವನ್ನು ಮನಸ್ಸಿನಿಂದ ಹೊರ ಹಾಕಲು ಸರಿಯಾದ ಮಾರ್ಗವಿದೆ. ನಿಮ್ಮ ಮಾಜಿ ಸಂಗಾತಿಗೆ ಕಪಾಳಮೋಕ್ಷ ಮಾಡಲು ಅಥವಾ ಅವರಿಗೆ ಹಿಂಸಿಸಲು ನೀವು ಭಾವಿಸಿದರೂ ಸಹ, ನಿಮ್ಮ ಆಪ್ತ ಸ್ನೇಹಿತರೊಂದಿಗೆ ಮಾತನಾಡುವ ಮೂಲಕ ಅಥವಾ ಜರ್ನಲ್‌ಗಳನ್ನು ಬರೆಯುವ ಮೂಲಕ ಮನಸ್ಸಿನಲ್ಲಿರುವ ಕೋಪವನ್ನು ತೆಗೆದುಹಾಕಬಹುದು.

ಪ್ರೇಮಿಗಳ ದಿನವಂತೂ ಬಹುತೇಕ ಮುಗಿದಿದೆ. ಹಾಗೂ ಆಂಟಿ- ವ್ಯಾಲೆಂಟೈನ್ಸ್ ವೀಕ್ ಸ್ಲ್ಯಾಪ್ ಡೇ ಇಂದಿನಿಂದ ಆರಂಭವಾಗಲಿದೆ. ಇದು ನೀವು ಪ್ರೀತಿಯಲ್ಲಿ ಅನುಭವಿಸಿದ ನೋವನ್ನು ಕಡಿಮೆ ಮಾಡಲು ಇರುವ ಪರಿಪೂರ್ಣ ಸಮಯವಾಗಿದೆ. ಕೋಪ ಮತ್ತು ದ್ವೇಷವನ್ನು ಹೊಂದುವುದು ಸಹಜ ಆದರೆ ತೀವ್ರವಾದ ಕೋಪವು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇಂತಹ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಸ್ವಯಂ ವಿಶ್ಲೇಷಿಸುವುದು ಹೆಚ್ಚು ನೋವುಂಟು ಮಾಡುವುದನ್ನು ಹಾಗೂ ಕಷ್ಟಕರವಾದ ಬ್ರೇಕ್‌ಅಪ್‌ನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಎಂದು ವೋಕಾರ್ಡ್ ಆಸ್ಪತ್ರೆಯ ಮನೋವೈದ್ಯರಾದ ಡಾ. ಸೋನಾಲ್ ಆನಂದ್ ಹೇಳುತ್ತಾರೆ. ಬ್ರೇಕ್‌ಅಪ್ ನಂತರದ ಕೋಪವನ್ನು ನಿಭಾಯಿಸುವ ಮಾರ್ಗಗಳನ್ನು ಕೂಡಾ ಅವರು ಸೂಚಿಸಿದ್ದಾರೆ.

ಇದನ್ನೂ ಓದಿ: ಇಂದು Breakup Day, ಪ್ರೇಮಿಗಳ ವಿರೋಧಿ ದಿನ ಯಾಕೆ ಗೊತ್ತಾ?

ನಿಮ್ಮ ಮಾಜಿ ಪ್ರೇಮಿಯ ಜೊತೆ ತಕ್ಷಣ ಮಾತನಾಡಬೇಡಿ: ನೀವು ಸ್ವಲ್ಪ ಸವಯ ಕಾಯಿರಿ. ಹಾಗೂ ನೀವು ಮಾಜಿ ಪ್ರೇಮಿಯ ಜೊತೆ ಏನು ಮಾತನಾಡಲಿದ್ದೀರಿ ಮತ್ತು ನಿಮ್ಮಿಬ್ಬರ ಸಂಭಾಷಣೆಯಲ್ಲಿ ನಿಮ್ಮ ನೋವನ್ನು ಹೇಗೆ ವ್ಯಕ್ತಪಡಿಸುತ್ತೀರಿ ಎಂಬುದರ ಕುರಿತು ಯೋಚಿಸಿ. ಮತ್ತು ಇದರ ಕುರಿತು ನಿಮ್ಮ ವಿಶ್ವಾಸಾರ್ಹ ಸ್ನೇಹಿತರಿಂದ ಸಹಾಯವನ್ನು ಪಡೆಯಿರಿ.

ಕಿಕ್ ಬಾಕ್ಸಿಂಗ್, ಯೋಗ ಹಾಗೂ ಧ್ಯಾನ ಮಾಡಿ: ದೈಹಿಕ ವ್ಯಾಯಾಮವು ನೋವಿನಿಂದ ಹೊರಬರಲು ಮತ್ತು ನಮ್ಮ ಮೂಡ್ ಸಮತೋಲನವನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ. ಕಿಕ್ ಬಾಕ್ಸಿಂಗ್, ಯೋಗ ಮತ್ತು ಧ್ಯಾನದಂತಹ ಚಟುವಟಿಕೆಯು ಪ್ರಚೋದನೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಅದು ನಮ್ಮ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ.

ಸಾಮಾಜಿಕ ಮಾಧ್ಯಮಗಳಿಂದ ದೂರವಿರಿ: ಸ್ವಲ್ಪ ಸಮಯದವರೆಗೆ ಸಾಮಾಜಿಕ ಮಾಧ್ಯಮಗಳಿಂದ ಆದಷ್ಟು ದೂರವಿರಲು ಪ್ರಯತ್ನಿಸಿ. ನಿಮ್ಮ ಮಾಜಿ ಪ್ರೇಮಿಯ ಸಾಮಾಜಿಕ ಮಾಧ್ಯಮ ಪೋಸ್ಟ್​​ಗಳನ್ನು ನೋಡುವುದರಿಂದ ನಿಮಗೆ ಅದು ನೋವುಂಟುಮಾಡಬಹುದು. ಆದ್ದರಿಂದ ಸಾಮಾಜಿಕ ಮಾಧ್ಯಮಗಳಿಂದ ದೂರವಿರಿ.

ನಿಮ್ಮನ್ನು ನೀವು ಕ್ಷಮಿಸಿಬಿಡಿ: ನಿಮ್ಮ ಭಾವನೆಗಳು ಮತ್ತು ನಿಮ್ಮ ಅಗತ್ಯಗಳ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ. ನಿಮ್ಮ ಭಾವನೆಗಳನ್ನು ಸ್ವೀಕರಿಸಿ ನಿಮಗೆ ನೀವೆ ಸಮಧಾನ ಮಾಡಿಕೊಳ್ಳಿ ಮತ್ತು ನಿಮ್ಮನ್ನು ಕ್ಷಮಿಸಿ ಹೊಸ ಜೀವನವನ್ನು ಆರಂಭಿಸಿ.

Published On - 12:26 pm, Wed, 15 February 23

Follow Us
Akshay Pallamajalu
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ