ಮುಂಬೈ: ಮಸಾಜ್ ಸೇವೆಗಾಗಿ ಎಸ್ಕಾರ್ಟ್ ವೆಬ್ ಸೈಟೊಂದನ್ನು ತಡಕಾಡುತ್ತಿದ್ದ ವ್ಯಕ್ತಿಗೆ ಕಾಣಿಸಿದ್ದು ಹೆಂಡತಿ ಮತ್ತು ಸಹೋದರಿಯ ಫೋಟೋ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 14, 2022 | 11:34 AM

ವಿಷಯ ಅರ್ಥಮಾಡಿಕೊಂಡ ವ್ಯಕ್ತಿಯು ವೆಬ್ ಸೈಟ್ ನಲ್ಲಿದ್ದ ಬುಕಿಂಗ್ ನಂಬರ್ ಗೆ ಫೋನ್ ಮಾಡಿದಾಗ ಆ ಕಡೆಯಿಂದ ಒಬ್ಬ ಮಹಿಳೆ ಉತ್ತರಿಸಿದ್ದಾಳೆ. ಖಾರ್ ಪಶ್ವಿಮ ಭಾಗದಲ್ಲಿರುವ ಹೋಟೆಲೊಂದಕ್ಕೆ ಆಕೆಯನ್ನು ಬರಲು ಹೇಳಿದಾಗ ಆಕೆ ಒಪ್ಪಿಕೊಂಡಿದ್ದಾಳೆ.

ಮುಂಬೈ: ಮಸಾಜ್ ಸೇವೆಗಾಗಿ ಎಸ್ಕಾರ್ಟ್ ವೆಬ್ ಸೈಟೊಂದನ್ನು ತಡಕಾಡುತ್ತಿದ್ದ ವ್ಯಕ್ತಿಗೆ ಕಾಣಿಸಿದ್ದು ಹೆಂಡತಿ ಮತ್ತು ಸಹೋದರಿಯ ಫೋಟೋ!
ಪ್ರಾತಿನಿಧಿಕ ಚಿತ್ರ
Follow us on

ಮುಂಬೈ: ಇಂಥ ಆಘಾತಕಾರಿ ಸಂಗತಿಗಳು ಸೋಷಿಯಲ್ ಮಿಡಿಯದಲ್ಲಿ ಸಕ್ರಿಯರಾಗಿರುವ ಜನರ ಬದುಕಿನಲ್ಲಿ ನಡೆಯುವ ಸಾಧ್ಯತೆ ಜಾಸ್ತಿ ಅನಿಸುತ್ತೆ. ಮುಂಬೈ (Mumbai) ಮಹಾನಗರದಲ್ಲಿ ಏನಾಗಿದೆ ಅಂತ ಗೊತ್ತಾದರೆ ನಿಮಗೆ ಶಾಕ್ ಆಗದಿರದು. ಅಲ್ಲಿಯ ನಿವಾಸಿಯೊಬ್ಬ ಮಸಾಜ್ ಸರ್ವಿಸ್ ಗಾಗಿ (massage service) ಎಸ್ಕಾರ್ಟ್ ವೆಬ್ ಸೈಟ್ (escort website) ಒಂದನ್ನು ತಡಕಾಡುತ್ತಿದ್ದಾಗ ಅವನ ಹೆಂಡತಿ ಮತ್ತು ತಂಗಿಯ ಫೋಟೋಗಳು ಕಾಣಿಸಿವೆ! ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯು ಸೋಷಿಯಲ್ ಮಿಡಿಯಗಳಿಂದ ಸುಂದರವಾದ ಯುವತಿಯರು ಪೋಟೋಗಳನ್ನು ಡೌನ್ ಲೋಡ್ ಮಾಡಿ ಅವುಗಳನ್ನು ಎಸ್ಕಾರ್ಟ್ ಮತ್ತು ಮಸಾಜ್ ವೆಬ್ ಸೈಟ್ ಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಳಂತೆ.

ಮುಂಬೈನ ಖಾರ್ ಪ್ರದೇಶದ 31-ವರ್ಷ-ವಯಸ್ಸಿನ ವ್ಯಕ್ತಿ ಮ್ಯಾಸಾ (ಮಸಾಜ್ ಮಾಡುವವರು)ಗಾಗಿ ಹುಡುಕಾಡುತ್ತಿದ್ದಾಗ ಎಸ್ಕಾರ್ಟ್ ವೆಬ್ ಸೈಟೊಂದರಲ್ಲಿ ಅವನ ಹೆಂಡತಿ ಮತ್ತು ತಂಗಿಯ ಪೋಟೋಗಳು ಕಾಣಿಸಿವೆ. ದಿಗ್ಭ್ರಾಂತನಾದ ಅವನು ಕೂಡಲೇ ಹೆಂಡತಿಗೆ ಆ ಫೋಟೋಗಳನ್ನು ಫಾರ್ವರ್ಡ್ ಮಾಡಿ ಏನಿದೆಲ್ಲ ಅಂತ ಕೇಳಿದ್ದಾನೆ. ಅವನ ಹೆಂಡತಿ ಪೋಟೋಗಳನ್ನು ನಾಲ್ಕು ವರ್ಷ ಹಿಂದೆ ತೆಗೆಸಿದ್ದು ಮತ್ತು ತಮ್ಮ ಸಾಮಾಜಿಕ ಜಾಲತಾಣಗಳ ಅಕೌಂಟ್ ಗಳಲ್ಲಿ ಅವುಗಳನ್ನು ಪೋಸ್ಟ್ ಮಾಡಲಾಗಿತ್ತು ಅಂತ ಹೇಳಿದ್ದಾಳೆ.

ಇದನ್ನೂ ಓದಿ: Shocking News: 6 ಲಕ್ಷ ಭಾರತೀಯರ ವೈಯಕ್ತಿಕ ಡೇಟಾ ಹ್ಯಾಕ್, ಮಾಲ್‌ವೇರ್‌ ಸಾಧನ ತಡೆಯಲು ಹೀಗೆ ಮಾಡಿ

ವಿಷಯ ಅರ್ಥಮಾಡಿಕೊಂಡ ವ್ಯಕ್ತಿಯು ವೆಬ್ ಸೈಟ್ ನಲ್ಲಿದ್ದ ಬುಕಿಂಗ್ ನಂಬರ್ ಗೆ ಫೋನ್ ಮಾಡಿದಾಗ ಆ ಕಡೆಯಿಂದ ಒಬ್ಬ ಮಹಿಳೆ ಉತ್ತರಿಸಿದ್ದಾಳೆ. ಖಾರ್ ಪಶ್ವಿಮ ಭಾಗದಲ್ಲಿರುವ ಹೋಟೆಲೊಂದಕ್ಕೆ ಆಕೆಯನ್ನು ಬರಲು ಹೇಳಿದಾಗ ಆಕೆ ಒಪ್ಪಿಕೊಂಡಿದ್ದಾಳೆ. ಅಷ್ಟರಲ್ಲಾಗಲೇ ಅವನು ಹೆಂಡತಿ ಮತ್ತು ಸಹೋದರಿಯನ್ನು ಅದೇ ಹೋಟೆಲ್ ಗೆ ಕರೆಸಿಕೊಂಡಿದ್ದ.

ಆಕೆ ಅಲ್ಲಿಗೆ ಬಂದಾಗ ವ್ಯಕ್ತಿ ಮತ್ತು ಅವನ ಹೆಂಡತಿ ಫೋಟೋಗಳ ಬಗ್ಗೆ ಪ್ರಶ್ನಿಸಲಾರಂಭಿಸಿದ್ದಾರೆ. ಅರೋಪಿಯು ನೇರಾನೇರ ಅವರೊಂದಿಗೆ ಜಗಳಕ್ಕೆ ಬಿದ್ದಿದ್ದಾಳೆ ಮತ್ತು ಅಲ್ಲಿಂದ ಪರಾರಿಯಾಗಲು ಹವಣಿಸಿದ್ದಾಳೆ. ಆದರೆ, ಅವಳನ್ನು ತಡೆದು ನಿಲ್ಲುಸುವಲ್ಲಿ ಅವನು ಮತ್ತು ಹೆಂಡತಿ ಸಫಲರಾಗಿದ್ದಾರೆ.

ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.
ಪೊಲೀಸ್ ವಿಚಾರಣೆಯಲ್ಲಿ ಆಕೆಯ ಹೆಸರು ರೇಷ್ಮಾ ಯಾದವ್ ಅನ್ನೋದು ಗೊತ್ತಾಗಿದೆ. ಅವಳು, ಸುಂದರ ಮಹಿಳೆಯರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಂದ ಹೆಕ್ಕಿ ಅವುಗಳನ್ನು ಎಸ್ಕಾರ್ಟ್ ಮತ್ತು ಮಸಾಜ್ ವೆಬ್ ಸೈಟ್ ಗಳಲ್ಲಿ ಹಾಕುವ ಒಂದು ನೆಟ್ ವರ್ಕ್ನ ಭಾಗವಾಗಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ:  Shocking News: 100 ಜನ ಮನೆಗೆ ನುಗ್ಗಿ ಯುವತಿಯ ಕಿಡ್ನಾಪ್; ತೆಲಂಗಾಣದಲ್ಲೊಂದು ಆಘಾತಕಾರಿ ಘಟನೆ

ರೇಷ್ಮಾ ಯಾದವ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೋರ್ಟ್ ಮುಂದೆ ಹಾಜರುಪಡಿಸಿದ ಬಳಿಕ ನ್ಯಾಯಾಲಯ ಅವಳನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದೆ. ಅವಳೊಂದಿಗೆ ಭಾಗಿಯಾಗಿರಬಹುದಾದ ಎಲ್ಲರನ್ನೂ ಪತ್ತೆ ಮಾಡುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.

ಹಾಗೆಯೇ, ಸಾರ್ವಜನಿಕರಲ್ಲಿ ಅಪೀಲೊಂದನ್ನು ಮಾಡಿಕೊಂಡಿರುವ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಪೋಟೋಗಳನ್ನು ಅಪ್ಲೋಡ್ ಮಾಡುವಾಗ ಜಾಗರೂಕರಾಗಿರುವಂತೆ ಹೇಳಿದ್ದಾರೆ. ತಮ್ಮ ಪ್ರೊಫೈಲ್ ಗಳನ್ನು ಸದಾ ಲಾಕ್ ಮಾಡಿಟ್ಟರೆ ಬೇರೆಯವರು ಅವುಗಳನ್ನು ದುರುಪಯೋಗಪಡಿಸಿಕೊಳ್ಳುವುದು ಸಾಧ್ಯವಾಗದು ಅಂತ ಅವರು ಸಲಹೆ ನೀಡಿದ್ದಾರೆ.

ಮತ್ತಷ್ಟು ದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ