ಕೊರೊನಾ ಕುರುಕ್ಷೇತ್ರ.. ಚಹಾ ಮಾರುವವನಿಗೆ 50 ಕೋಟಿ ರೂ ಶಾಕ್ ಕೊಟ್ಟ ಬ್ಯಾಂಕ್

| Updated By:

Updated on: Jul 24, 2020 | 8:20 PM

ಕುರುಕ್ಷೇತ್ರ: ತನ್ನ ಪಾಡಿಗೆ ತಾನು ರೋಡ್‌ ಮೇಲೆ ಚಹಾ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಬಡ ವ್ಯಾಪಾರಿಗೆ ಬ್ಯಾಂಕ್‌ ಒಂದು ಜೀವಮಾನದ ಶಾಕ್‌ ನೀಡಿದೆ. ಆ ವ್ಯಾಪಾರಿಗೆ ತಾನು ತೆಗೆದುಕೊಳ್ಳದೇ ಇದ್ದ ಲೋನ್‌ ಕಟ್ಟು ಅಂತಾ ಬರೋಬ್ಬರಿ 50 ಕೋಟಿ ರೂಪಾಯಿಗಳ ನೋಟಿಸ್‌ ಕಳಿಸಿದೆ! ಹೌದು ಹರಿಯಾಣದ ಕುರುಕ್ಷೇತ್ರ ಸಿಟಿಯಲ್ಲಿ ರಾಜಕುಮಾರ ಅನ್ನೋ ರಾಜಬೀದಿ ಬದಿಯ ವ್ಯಾಪಾರಿ ತನ್ನ ಪಾಡಿಗೆ ತಾನು ಟೀ ಮಾರುತ್ತಾ ಜೀವನ ಸಾಗಿಸಿಕೊಂಡಿದ್ದ. ಆದ್ರೆ ಕೊರೊನಾ ಹೆಮ್ಮಾರಿಯಿಂದಾಗಿ ಹಣಕಾಸಿನ ತೊಂದರೆಗೆ ಸಿಲುಕಿದ. ಹೀಗಾಗಿ ಟೀ […]

ಕೊರೊನಾ ಕುರುಕ್ಷೇತ್ರ.. ಚಹಾ ಮಾರುವವನಿಗೆ 50 ಕೋಟಿ ರೂ ಶಾಕ್ ಕೊಟ್ಟ ಬ್ಯಾಂಕ್
Follow us on

ಕುರುಕ್ಷೇತ್ರ: ತನ್ನ ಪಾಡಿಗೆ ತಾನು ರೋಡ್‌ ಮೇಲೆ ಚಹಾ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಬಡ ವ್ಯಾಪಾರಿಗೆ ಬ್ಯಾಂಕ್‌ ಒಂದು ಜೀವಮಾನದ ಶಾಕ್‌ ನೀಡಿದೆ. ಆ ವ್ಯಾಪಾರಿಗೆ ತಾನು ತೆಗೆದುಕೊಳ್ಳದೇ ಇದ್ದ ಲೋನ್‌ ಕಟ್ಟು ಅಂತಾ ಬರೋಬ್ಬರಿ 50 ಕೋಟಿ ರೂಪಾಯಿಗಳ ನೋಟಿಸ್‌ ಕಳಿಸಿದೆ!

ಹೌದು ಹರಿಯಾಣದ ಕುರುಕ್ಷೇತ್ರ ಸಿಟಿಯಲ್ಲಿ ರಾಜಕುಮಾರ ಅನ್ನೋ ರಾಜಬೀದಿ ಬದಿಯ ವ್ಯಾಪಾರಿ ತನ್ನ ಪಾಡಿಗೆ ತಾನು ಟೀ ಮಾರುತ್ತಾ ಜೀವನ ಸಾಗಿಸಿಕೊಂಡಿದ್ದ. ಆದ್ರೆ ಕೊರೊನಾ ಹೆಮ್ಮಾರಿಯಿಂದಾಗಿ ಹಣಕಾಸಿನ ತೊಂದರೆಗೆ ಸಿಲುಕಿದ. ಹೀಗಾಗಿ ಟೀ ವ್ಯಾಪಾರ ಬಿಟ್ಟು ಬೇರೆ ವ್ಯಾಪಾರ ಮಾಡೋಣ ಅಂತಾ ಬ್ಯಾಂಕ್‌ ಲೋನ್‌ಗೆ ಅಪ್ಲೈ ಮಾಡಿದ್ದ.

ಆಗಲೇ ಬಂತು ನೋಡಿ ಪಾಪ ಈ ವ್ಯಾಪಾರಿಗೆ ಜೀವನ ಪೂರ್ತಿ ಎಂದೂ ಮರೆಯದ ಶಾಕ್‌. ಬ್ಯಾಂಕ್‌ ಲೋನ್ ಕೊಡುವುದು ಹಾಗಿರಲಿ.. ಮೊದಲು ನೀನು ತೆಗೆದುಕೊಂಡಿರುವ 50 ಕೋಟಿ ರೂಪಾಯಿ ಸಾಲ ಕಟ್ಟು ಅಂತಾ ನೋಟಿಸ್‌ ನೀಡಿದೆ.

ಇದನ್ನು ನೋಡಿ ಆಕಾಶವೇ ಮೈಮೇಲೆ ಕಳಚಿ ಬಿದ್ದಂತಾಗಿದೆ ಈ ರಾಜಕುಮಾರನಿಗೆ. ನಾನು ಒಬ್ಬ ಬೀದಿ ಬದಿಯ ಚಿಕ್ಕ ಚಹಾ ಮಾರುವ ವ್ಯಾಪಾರಿ. ಒಮ್ಮೆಯೂ ಬ್ಯಾಂಕ್‌ ನಿಂದ ಯಾವುದೇ ಲೋನ್‌ ಪಡೆದಿಲ್ಲ. ಇನ್ನು 50 ಕೋಟಿ ರೂ. ಲೋನ್‌ ತೆಗೆದುಕೊಳ್ಳುವುದು ಎಲ್ಲಿಂದ ಸಾಧ್ಯ ಸ್ವಾಮಿ? ಅಂತಾ ಕಂಗಾಲಾಗಿದ್ದಾನೆ.

Published On - 1:25 pm, Thu, 23 July 20