ಸರಿಯಾದ ಸಮಯಕ್ಕೆ ಮಲಗಲಿಲ್ಲವೆಂದು ಮಗಳನ್ನು ಕಟ್ಟಿಹಾಕಿ ಸಿಗರೇಟ್ನಿಂದ ಸುಟ್ಟ ತಂದೆ
ಸರಿಯಾದ ಸಮಯಕ್ಕೆ ಮಲಗುತ್ತಿಲ್ಲವೆಂದು ಮಗಳನ್ನು ಕಟ್ಟಿಹಾಕಿ ಸಿಗರೇಟ್ನಿಂದ ತಂದೆಯೊಬ್ಬ ಸುಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 115(2) ಮತ್ತು 118(1) ರ ಅಡಿಯಲ್ಲಿ ತನ್ನ ಮಗಳಿಗೆ ಅಪಾಯಕಾರಿ ವಸ್ತುಗಳಿಂದ ನೋವುಂಟು ಮಾಡಿದ್ದಕ್ಕಾಗಿ ಆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮುಂಬೈ, ಜುಲೈ 02: ಸಮಯಕ್ಕೆ ಸರಿಯಾಗಿ ಮಲಗಲಿಲ್ಲವೆಂದು ಐದು ವರ್ಷದ ಮಗಳನ್ನು ಕಟ್ಟಿಹಾಕಿ ಸಿಗರೇಟ್ನಿಂದ ತಂದೆಯೊಬ್ಬ ಸುಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮಕ್ಕಳಿಗೆ ತಿದ್ದಿ ಬುದ್ದಿ ಹೇಳಿ ಮನವೊಲಿಸಿ ಮಲಗಿಸುವ ಬದಲು ಏನೂ ಅರಿಯದ ಬಾಲಕಿಗೆ ಚಿತ್ರಹಿಂಸೆ ನೀಡಿದ್ದಾನೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 115(2) ಮತ್ತು 118(1) ರ ಅಡಿಯಲ್ಲಿ ತನ್ನ ಮಗಳಿಗೆ ಅಪಾಯಕಾರಿ ವಸ್ತುಗಳಿಂದ ನೋವುಂಟು ಮಾಡಿದ್ದಕ್ಕಾಗಿ ಆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಧ್ಯಾಹ್ನ 2.45 ರ ಸುಮಾರಿಗೆ ಮಗುವಿನ ತಾಯಿ ಪೊಲೀಸರಿಗೆ ವಿಡಿಯೋವೊಂದನ್ನು ಕಳುಹಿಸಿದ್ದರು. ಅದರಲ್ಲಿ ಆಕೆಯ ಪತಿ ತಮ್ಮ ಮಗಳಿಗೆ ಸಿಗರೇಟ್ನಿಂದ ಸುಟ್ಟು ಚಿತ್ರಹಿಂಸೆ ಕೊಡುತ್ತಿರುವುದನ್ನು ಕಾಣಬಹುದು. ಈ ಆಘಾತಕಾರಿ ವಿಡಿಯೋ ನೋಡಿ ಬೆಚ್ಚಿಬಿದ್ದ ಪೊಲೀಸರು ದೂರು ದಾಖಲಿಸಿದ್ದಾರೆ. ತಂದೆ ಬಾಲಕಿಯ ಕಾಲುಗಳನ್ನು ಕಟ್ಟಿ, ಆಕೆಯ ಮೇಲೆ ಹಲ್ಲೆ ಮಾಡಿ, ಸಿಗರೇಟ್ನಿಂದ ಕೆನ್ನೆಯನ್ನು ಸುಟ್ಟಿರುವುದು ವಿಡಿಯೋದಲ್ಲಿದೆ.
ದೂರುದಾರರ ಜೊತೆಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ವಿಚಾರಣೆಗಾಗಿ ಆರೋಪಿಯ ಮನೆಗೆ ಬಂದು ತಂದೆಯ ಬಳಿ ಮಾತನಾಡಿದ್ದಾರೆ. ಚಾರಣೆಯ ಸಮಯದಲ್ಲಿ, ಸಮಯಕ್ಕೆ ಸರಿಯಾಗಿ ನಿದ್ರೆ ಮಾಡದ ಕಾರಣ ತನ್ನ ತಂದೆ ತನಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಬಾಲಕಿ ತಿಳಿಸಿದ್ದಾಳೆ.
ಮತ್ತಷ್ಟು ಓದಿ: ಕೇರಳ: ಹುಟ್ಟಿದ ಮರುಕ್ಷಣವೇ ಶಿಶುಗಳನ್ನು ಕೊಂದು ಹೂತು ಹಾಕಿದ್ದ ಲಿವ್-ಇನ್ ಜೋಡಿ
ತಕ್ಷಣ ಕ್ರಮ ಕೈಗೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಂದೆಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ತನಿಖೆ ಮುಂದುವರೆದಿದ್ದು, ಮಗುವಿನ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




