ಪಾಟ್ನಾ: ಬಿಹಾರದ ಔರಂಗಾಬಾದ್ನ ಕುಟುಂಬ ಬ್ಲಾಕ್ನ ಸಿಂಘನಾ ಗ್ರಾಮದ ಮುಖ್ಯಸ್ಥರ ಚುನಾವಣೆಗೆ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸದ ಕಾರಣಕ್ಕೆ ಇಬ್ಬರು ಯುವಕರನ್ನು ನಿರ್ದಯವಾಗಿ ಥಳಿಸಿರುವ ಹೀನಾಯ ಘಟನೆ ನಡೆದಿದೆ. ಇಲ್ಲಿನ ಪ್ರಮುಖ ಅಭ್ಯರ್ಥಿಯಾದ ಬಲವಂತ್ ಸಿಂಗ್ ಇಬ್ಬರು ತನಗೆ ಮತ ಹಾಕಲು ನಿರಾಕರಿಸಿದ್ದರಿಂದ ಕೋಪಗೊಂಡು ರಸ್ತೆಗೆ ಉಗುಳಿದ್ದಾರೆ. ಅಲ್ಲದೆ, ಆ ಇಬ್ಬರಲ್ಲಿ ಒಬ್ಬನ ಬಳಿ ತಾವು ಉಗುಳಿದ್ದನ್ನು ನೆಕ್ಕುವಂತೆ ಒತ್ತಾಯಿಸಿದ್ದಾರೆ. ಹಾಗೇ, ನಡು ರಸ್ತೆಯಲ್ಲಿ ಅವರಿಬ್ಬರ ಬಳಿ ಬಸ್ಕಿ ಹೊಡೆಸಿದ್ದಾರೆ.
ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಸಾಕಷ್ಟು ಹಣ ಹಂಚಿದ್ದ ಬಲವಂತ್ ಸಿಂಗ್ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರು. ಇದರಿಂದ ಕೋಪಗೊಂಡ ಅವರು ತನಗೆ ಮತ ಹಾಕದ ಅನಿಲ್ ಕುಮಾರ್ ಮತ್ತು ಮಂಜೀತ್ ಕುಮಾರ್ಗೆ ರಸ್ತೆಯಲ್ಲೇ ಬಸ್ಕಿ ಹೊಡೆಸಿದ್ದಾರೆ. ಅಲ್ಲದೆ, ರಸ್ತೆಯಲ್ಲಿ ಕಫವನ್ನು ಉಗುಳಿ ಅದನ್ನು ನೆಕ್ಕುವಂತೆ ಒತ್ತಾಯಿಸಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಅಗಿದ್ದು, ಆ ರಾಜಕಾರಣಿಯ ಅಮಾನವೀಯ ವರ್ತನೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ನಡೆದಿರುವುದು ಔರಂಗಾಬಾದ್ ಜಿಲ್ಲೆಯಲ್ಲಿ. ಇಲ್ಲಿನ ಪ್ರಮುಖ ಅಭ್ಯರ್ಥಿಯಾಗಿದ್ದ ಬಲವಂತ್ ಸಿಂಗ್ ಚುನಾವಣೆಯಲ್ಲಿ ಸೋತಿದ್ದರು. ಅವರ ಎದುರು ಅನಿಲ್ ಕುಮಾರ್ ಹಾಗೂ ಮಂಜೀತ್ ಗೇಲಿ ಮಾಡಿದ್ದರಿಂದ ತನಗೆ ಮತ ಹಾಕದ ಕಾರಣಕ್ಕೆ ಅವರಿಬ್ಬರಿಗೂ ಶಿಕ್ಷೆ ಕೊಟ್ಟಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಮಾಹಿತಿ ಪಡೆದು ಔರಂಗಾಬಾದ್ ಎಸ್ಪಿ ಕಾಂತೇಶ್ ಕುಮಾರ್ ಮಿಶ್ರಾ ಸೂಚನೆ ಮೇರೆಗೆ ಅಂಬಾ ಪೊಲೀಸರು ಬಲ್ವಂತ್ ಸಿಂಗ್ ಅವರನ್ನು ಬಂಧಿಸಿದ್ದಾರೆ.
मुखिया चुनाव में हारे बलवंत सिंह ने दलित वोटरों से थूक चटवाया और कान पकड़ कर उठक-बैठक करवाई.
दावा है कि इन लोगों ने मुखिया चुनाव में बलवंत सिंह को वोट नहीं दिया था. ये वीडियो बिहार के औरंगाबाद जिले में कुटुम्बा प्रखंड के डुमरी पंचायत के सिंघना गांव का है. आरोपी बलवंत गिरफ्तार. pic.twitter.com/C5fUQWYPu6
— Utkarsh Singh (@UtkarshSingh_) December 12, 2021
ವಿಡಿಯೋದಲ್ಲಿರುವ ಆ ಇಬ್ಬರು ಯುವಕರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಬಲವಂತ್ ಸಿಂಗ್ ಗ್ರಾಮಾಂತರ ಚುನಾವಣೆಗೆ ಅಭ್ಯರ್ಥಿಯಾಗಿದ್ದರು. ಅವರ ವಿರುದ್ಧ ಶೀಘ್ರವೇ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಎಸ್ಪಿ ಕಾಂತೇಶ್ ಮಿಶ್ರಾ ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಮೊಸರು ತರಲು ಮಾರ್ಗಮಧ್ಯೆ ರೈಲು ನಿಲ್ಲಿಸಿದ ಚಾಲಕ ಅಮಾನತು!
Shocking Video: ಹೋಟೆಲ್ ಊಟದಲ್ಲಿ ಶಿಶ್ನದ ತುಂಡು ಪತ್ತೆ!; ತಿನ್ನೋ ಆಹಾರದಲ್ಲಿ ಗುಪ್ತಾಂಗ ಕಂಡು ಮಹಿಳೆ ಶಾಕ್