ವಿದೇಶಿ ಮಹಿಳೆಗೆ ಜನಿಸಿದವ ಎಂದೂ ದೇಶಭಕ್ತನಾಗಲು ಸಾಧ್ಯವಿಲ್ಲ, ರಾಹುಲ್​ ಗಾಂಧಿಯನ್ನು ಭಾರತದಿಂದ ಹೊರಹಾಕಬೇಕು: ಪ್ರಜ್ಞಾ ಠಾಕೂರ್

|

Updated on: Mar 12, 2023 | 10:03 AM

ವಿದೇಶಿ ನೆಲದಲ್ಲಿ ಭಾರತದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ದೇಶದಿಂದ ಹೊರಹಾಕಬೇಕು ಎಂದು ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಒತ್ತಾಯಿಸಿದ್ದಾರೆ.

ವಿದೇಶಿ ಮಹಿಳೆಗೆ ಜನಿಸಿದವ ಎಂದೂ ದೇಶಭಕ್ತನಾಗಲು ಸಾಧ್ಯವಿಲ್ಲ, ರಾಹುಲ್​ ಗಾಂಧಿಯನ್ನು ಭಾರತದಿಂದ ಹೊರಹಾಕಬೇಕು: ಪ್ರಜ್ಞಾ ಠಾಕೂರ್
ಪ್ರಜ್ಞಾ ಸಿಂಗ್ ಠಾಕೂರ್
Follow us on

ವಿದೇಶಿ ನೆಲದಲ್ಲಿ ಭಾರತದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ದೇಶದಿಂದ ಹೊರಹಾಕಬೇಕು ಎಂದು ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಒತ್ತಾಯಿಸಿದ್ದಾರೆ. ಭಾರತದ ಸಂಸತ್ತಿನಲ್ಲಿ ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ, ನಾಯಕರು ಮಾತನಾಡುವಾಗ ಅವರ ಮೈಕ್​ಗಳನ್ನು ಆಫ್ ಮಾಡಲಾಗುತ್ತಿದೆ ಎಂದು ರಾಹುಲ್ ಗಾಂಧಿ ಲಂಡನ್​ನಲ್ಲಿ ಹೇಳಿದ್ದರು. ಹೌಸ್ ಆಫ್ ಕಾಮನ್ಸ್ ಆವರಣದಲ್ಲಿರುವ ಗ್ರ್ಯಾಂಡ್ ಕಮಿಟಿ ಕೊಠಡಿಯಲ್ಲಿ ವಿರೋಧ ಪಕ್ಷದ ಲೇಬರ್ ಪಕ್ಷದ ಭಾರತೀಯ ಮೂಲದ ಸಂಸದ ವೀರೇಂದ್ರ ಶರ್ಮಾ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಹುಲ್ ಈ ಪ್ರತಿಕ್ರಿಯೆ ನೀಡಿದ್ದರು.

ವಿದೇಶಿ ಮಹಿಳೆಗೆ ಜನಿಸಿದ ಮಗ ಎಂದಿಗೂ ದೇಶಭಕ್ತನಾಗಲು ಸಾಧ್ಯವಿಲ್ಲ ಎಂದು ಚಾಣಕ್ಯ ಹೇಳಿದ್ದಾರೆ, ರಾಹುಲ್ ಗಾಂಧಿ ಈ ಹೇಳಿಕೆಯನ್ನು ನಿಜವೆಂದು ಸಾಬೀತುಪಡಿಸಿದ್ದಾರೆ. ನೀವು ಭಾರತದವರಲ್ಲ, ನಾವು ಒಪ್ಪಿಕೊಂಡಿದ್ದೇವೆ, ಏಕೆಂದರೆ ನಿಮ್ಮ ತಾಯಿ ಇಟಲಿಯವರು ಎಂದು ಠಾಕೂರ್ ಹೇಳಿದರು.

ಮತ್ತಷ್ಟು ಓದಿ: Pragya Thakur: ಮನೆಗಳಲ್ಲಿ ಆಯುಧಗಳನ್ನಿಟ್ಟುಕೊಳ್ಳಿ ಎಂಬ ಪ್ರಜ್ಞಾ ಠಾಕೂರ್ ಹೇಳಿಕೆ ವಿಚಾರ; ಶಿವಮೊಗ್ಗದಲ್ಲಿ 2 ದೂರು ದಾಖಲು

ಸಂಸತ್ತಿನ ಕೆಲಸ ಸುಗಮವಾಗಿ ನಡೆದರೆ ಇನ್ನಷ್ಟು ಕೆಲಸ ಮಾಡಬಹುದು. ಆದರೆ ಕೆಲಸ ಹೆಚ್ಚಾದರೆ ಅವರ (ಕಾಂಗ್ರೆಸ್) ಅಸ್ತಿತ್ವ ಉಳಿಯುವುದಿಲ್ಲ. ಅವರ (ಕಾಂಗ್ರೆಸ್) ಅಸ್ತಿತ್ವ ಅಳಿವಿನ ಅಂಚಿನಲ್ಲಿದೆ. ಹಾಗಾಗಿ ಅವರ ತಲೆಯೂ ಕೂಡ ಹಾಳಾಗುತ್ತಿದೆ.

ನೀವು ಸಾರ್ವಜನಿಕರಿಂದ ಗೆದ್ದು, ಸಾರ್ವಜನಿಕರನ್ನು ಅವಮಾನಿಸುತ್ತಿದ್ದೀರಿ. ದೇಶಕ್ಕೆ ಅಪಮಾನ ಮಾಡುತ್ತಿದ್ದೀರಿ. ವಿದೇಶದಲ್ಲಿ ಕುಳಿತು ಸಂಸತ್ತಿನಲ್ಲಿ ಮಾತನಾಡಲು ನಮಗೆ ಅವಕಾಶ ಸಿಗುತ್ತಿಲ್ಲ ಎಂದು ಹೇಳುತ್ತೀರಿ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ನೊಂದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ