1993 Mumbai Bomb Blast: ಬಾಂಬ್​ಸ್ಫೋಟ ಸಂಭವಿಸಿ 30 ವರ್ಷ ಕಳೆದರೂ ಪರಿಹಾರ ಇನ್ನೂ ಬಂದಿಲ್ಲ, ಆ ಕರಾಳ ದಿನ ನೆನೆದು ಕಣ್ಣೀರಿಟ್ಟ ವ್ಯಕ್ತಿ

ಮುಂಬೈ ಬಾಂಬ್​ ಸ್ಫೋಟ ಸಂಭವಿಸಿ 30 ವರ್ಷ ಕಳೆದರೂ ಪರಿಹಾರದ ಮೊತ್ತ ಇನ್ನೂ ಕೈಸೇರಿಲ್ಲ ಎಂದು ಆ ದಿನವನ್ನು ನೆನೆದು ವ್ಯಕ್ತಿಯೊಬ್ಬರು ಕಣ್ಣೀರು ಹಾಕಿದ್ದಾರೆ

1993 Mumbai Bomb Blast: ಬಾಂಬ್​ಸ್ಫೋಟ ಸಂಭವಿಸಿ 30 ವರ್ಷ ಕಳೆದರೂ ಪರಿಹಾರ ಇನ್ನೂ ಬಂದಿಲ್ಲ, ಆ ಕರಾಳ ದಿನ ನೆನೆದು ಕಣ್ಣೀರಿಟ್ಟ ವ್ಯಕ್ತಿ
ಮುಂಬೈ ಸ್ಫೋಟImage Credit source: BBC News
Follow us
|

Updated on:Mar 12, 2023 | 10:57 AM

ಮುಂಬೈ ಬಾಂಬ್​ ಸ್ಫೋಟ ಸಂಭವಿಸಿ 30 ವರ್ಷ ಕಳೆದರೂ ಪರಿಹಾರದ ಮೊತ್ತ ಇನ್ನೂ ಕೈಸೇರಿಲ್ಲ ಎಂದು ಆ ದಿನವನ್ನು ನೆನೆದು ವ್ಯಕ್ತಿಯೊಬ್ಬರು ಕಣ್ಣೀರು ಹಾಕಿದ್ದಾರೆ. 1993ರ ಮಾರ್ಚ್​ 12 ರಂದು ಮುಂಬೈನಲ್ಲಿ ಮೊದಲ ಭಯೋತ್ಪಾದನಾ ದಾಳಿ ಸಂಭವಿಸಿತ್ತು, ಆಗ ತನಗೆ 36 ವರ್ಷ ವಯಸ್ಸು. ಈಗ ತನಗೆ 66 ವರ್ಷ ಇನ್ನೂ ಕೂಡ ಪರಿಹಾರ ಧನ ಕೈಸೇರಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ, ಮಹಾರಾಷ್ಟ್ರದ ರಾಜ್ಯಪಾಲ ರಮೇಶ್ ಬೈಸ್, ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಉದ್ದೇಶಿಸಿ ಅಜ್ಮೀರಾ ಪತ್ರ ಬರೆದಿದ್ದಾರೆ.

ಮುಂಬೈ ಬಾಂಬ್ ಸ್ಫೋಟದ ಮೂವತ್ತು ವರ್ಷಗಳು ಪೂರ್ಣಗೊಂಡಿವೆ ಆದರೆ ಬಾಂಬ್ ಸ್ಫೋಟದಲ್ಲಿ ಬದುಕುಳಿದವರಿಗೆ ಇಂದಿಗೂ ಪರಿಹಾರ ಸಿಕ್ಕಿಲ್ಲ. 1993 ರ ಸರಣಿ ಬಾಂಬ್ ಸ್ಫೋಟದ 30 ವರ್ಷಗಳ ನಂತರ ತನ್ನ ನೋವನ್ನು ನೆನಪಿಸಿಕೊಂಡ ಅಜ್ಮೇರಾ, ದಾಳಿಯ ಸಮಯದಲ್ಲಿ ತನಗೆ 36 ವರ್ಷ ವಯಸ್ಸಾಗಿತ್ತು ಮತ್ತು ಸ್ಫೋಟ ಸಂಭವಿಸುವ ಸ್ವಲ್ಪ ಮೊದಲು ಕೆಲಸಕ್ಕಾಗಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ಹೊರಗಿದ್ದೆ ಎಂದು ಹೇಳಿದರು. ಸ್ಫೋಟ ಸಂಭವಿಸ ಬಳಿಕ ದೇಹದಲ್ಲಿ ಗಾಜಿನ ಚೂರುಗಳು ಹೊಕ್ಕಿದ್ದವು.

ಮತ್ತಷ್ಟು ಓದಿ: Hyderabad: ವಿಮಾನ ತಪ್ಪಿಹೋಗುತ್ತೆಂದು ಫ್ಲೈಟ್​ ಅಲ್ಲಿ ಬಾಂಬ್ ಇದೆ ಎಂದು ಕರೆ ಮಾಡಿದ ವ್ಯಕ್ತಿಯ ಬಂಧನ

ಓರ್ವ ಕ್ಯಾಬ್ ಡ್ರೈವರ್ ನನ್ನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದರು, ಈವರೆಗೆ 40-45 ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ, ನನ್ನ ದೇಹದಲ್ಲಿ ಇನ್ನೂ ಗಾಜಿನ ಚೂರುಗಳು ಇರುವುದರಿಂದ ನಾನು ಹೆಚ್ಚಿನ ಚಿಕಿತ್ಸೆಗೆ ಒಳಗಾಗಬೇಕಿದೆ ಎಂದು ಅವರು ಹೇಳಿದರು. ಮಗೆ ಸರ್ಕಾರದಿಂದ ಯಾವುದೇ ಸಹಾಯ ಸಿಕ್ಕಿಲ್ಲ, ಅಂದಿನ ಸಿಎಂ ಹಾಗೂ ಹಲವು ಸಚಿವರಿಗೆ ಪತ್ರ ಬರೆದಿದ್ದೇನೆ. ಆದರೆ ಯಾರೂ ಕಾಳಜಿ ವಹಿಸಲಿಲ್ಲ, ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಡಿಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿ ನನ್ನ ನೋವನ್ನು ಹೇಳಲು ಬಯಸುತ್ತೇನೆ ಎಂದು ಅವರು ಹೇಳಿದರು. ಮಾರ್ಚ್ 12, 1993 ರಂದು ಹೋಟೆಲ್‌ಗಳು, ಬಿಎಸ್‌ಇ, ಜವೇರಿ ಬಜಾರ್‌ನ ಚಿನ್ನದ ಆಭರಣ ಕೇಂದ್ರ, ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ, ಶಿವಸೇನಾ ಭವನ ಮತ್ತು ಇತರ ವಿವಿಧ 12 ಆಯಕಟ್ಟಿನ ಪ್ರದೇಶಗಳಲ್ಲಿ ಬಾಂಬ್‌ಗಳು ಸ್ಫೋಟಗೊಂಡು ಕನಿಷ್ಠ 315 ಜನರು ಸಾವನ್ನಪ್ಪಿದರು. ಜಾಗತಿಕವಾಗಿ ಅತಿದೊಡ್ಡ ಭಯೋತ್ಪಾದಕ ಕೃತ್ಯಗಳಲ್ಲಿ ಇದು ಕೂಡ ಒಂದಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:56 am, Sun, 12 March 23