ಸಿಧು ಮೂಸೆ ವಾಲಾ ಹತ್ಯೆ ಪ್ರಕರಣ: ದೆಹಲಿಯ ತಿಹಾರ್ ಜೈಲಿನಲ್ಲಿ ಶೋಧ, ಉತ್ತರಾಖಂಡದಲ್ಲಿ 6 ಶಂಕಿತರ ಬಂಧನ

| Updated By: ರಶ್ಮಿ ಕಲ್ಲಕಟ್ಟ

Updated on: May 30, 2022 | 6:25 PM

ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರ ಹತ್ಯೆಗೆ ಸಂಬಂಧಿಸಿದಂತೆ ಎಸ್‌ಟಿಎಫ್ ಪಂಜಾಬ್ ಮತ್ತು ಉತ್ತರಾಖಂಡ್ ಜೊತೆಗಿನ ಜಂಟಿ ಕಾರ್ಯಾಚರಣೆಯಲ್ಲಿ  ಪಂಜಾಬ್ ಪೊಲೀಸರು ಡೆಹ್ರಾಡೂನ್‌ನ ಪೆಲಿಯಾನ್ ಪೊಲೀಸ್ ಚೌಕಿ ಪ್ರದೇಶದಿಂದ ಆರು ಜನರನ್ನು ಬಂಧಿಸಿದ್ದಾರೆ.

ಸಿಧು ಮೂಸೆ ವಾಲಾ ಹತ್ಯೆ ಪ್ರಕರಣ: ದೆಹಲಿಯ ತಿಹಾರ್ ಜೈಲಿನಲ್ಲಿ ಶೋಧ, ಉತ್ತರಾಖಂಡದಲ್ಲಿ 6 ಶಂಕಿತರ ಬಂಧನ
ಸಿಧು ಮೂಸೆ ವಾಲಾ
Follow us on

ದೆಹಲಿ: ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ  (Congress) ಸಿಧು ಮೂಸೆ ವಾಲಾ(Sidhu Moose wala) ಹತ್ಯೆಯ ಹಿಂದೆ ಕೈದಿ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಕೈವಾಡವಿದೆ ಎಂಬ ವರದಿಗಳ ನಂತರ ದೆಹಲಿಯ ತಿಹಾರ್ ಜೈಲಿನಲ್ಲಿ ಅಧಿಕಾರಿಗಳು ಆತನ ಸೆಲ್‌ಗಳಲ್ಲಿ ಶೋಧ ನಡೆಸಿದ್ದಾರೆ. ಮೂಸೆ ವಾಲಾ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಮತ್ತು ಕೆನಡ ಮೂಲದ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ ಹೊತ್ತು ಕೊಂಡಿದ್ದಾರೆ ಎಂದು ಪಂಜಾಬ್ ಪೊಲೀಸರು ಭಾನುವಾರ ಹೇಳಿದ್ದಾರೆ. ಈ ಶೋಧ ಬಗ್ಗೆ ಯಾವುದೇ ಹಿರಿಯ ಜೈಲಧಿಕಾರಿ ಹೇಳಿಕೆ ನೀಡಲು ಬಯಸಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಹೆಸರು ಹೇಳಲು ಬಯಸದ ಮತ್ತೊಬ್ಬ ಅಧಿಕಾರಿಯು ಜೈಲು ಸಂಖ್ಯೆ 8ರಲ್ಲಿ ಬಿಷ್ಣೋಯಿಯ ಹೈ ರಿಸ್ಕ್ ಸೆಲ್ ನಲ್ಲಿ ಶೋಧ ನಡೆದಿದೆ. ಅಲ್ಲಿಂದ ಕೆಲವು ನಿಷೇಧಿತ ವಸ್ತುಗಳನ್ನು ಶೋಧ ತಂಡ ಪತ್ತೆ ಹಚ್ಚಿದೆ ಎಂದು ಹೇಳಿದ್ದಾರೆ. ಪತ್ತೆಯಾಗಿರುವ ವಸ್ತುಗಳೇನು ಎಂಬುದರಕ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ದೃಢೀಕರಿಸಿಲ್ಲ ಎಂದು ವರದಿ ಮಾಡಿದೆ. ಪಂಜಾಬ್ ಪೊಲೀಸರು ತಿಹಾರ್ ಜೈಲಿಗೆ ಹೋಗಿ ಬಿಷ್ಣೋಯಿಯನ್ನು ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ. ಆದಾಗ್ಯೂ ಈವರೆಗೆ ಪಂಜಾಬ್ ಸರ್ಕಾರದಿಂದ ಈ ಬಗ್ಗೆ ಯಾವುದೇ ಸೂಚನೆ ಜೈಲು ಇಲಾಖೆಗೆ ಸಿಕ್ಕಿಲ್ಲ. ಬಿಷ್ಣೋಯಿ ಮತ್ತು ಬ್ರಾರ್ ಹೇಗೆ ಸಂಪರ್ಕ ಸಾಧಿಸಿಕೊಂಡರು? ಜೈಲಿನ ಒಳಗಿದ್ದುಕೊಂಡೇ ಇದೆಲ್ಲಾ ಹೇಗೆ ಸಾಧ್ಯವಾಯಿತು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು.

ಉತ್ತರ ಭಾರತದ ಟಾಪ್ ಗ್ಯಾಂಗ್​​ಸ್ಟರ್​​ಗಳಲ್ಲಿ ಒಬ್ಬನಾದ ಬಿಷ್ಣೋಯಿ ವಿರುದ್ದ ದೆಹಲಿ, ರಾಜಸ್ಥಾನ ಮತ್ತು ಪಂಜಾಬ್​​ನಲ್ಲಿ ಕೊಲೆ,ದರೋಡೆ, ಸುಲಿಗೆ ಮೊದಲಾದ ಪ್ರಕರಣಗಳು ದಾಖಲಾಗಿದೆ. ಈತನ ಆಪ್ತ ಸಹಚರ ಸಂಪತ್ ನೆಹ್ರಾನನ್ನು 2018ರಲ್ಲಿ ನಟ ಸಲ್ಮಾನ್ ಖಾನ್ ಹತ್ಯೆ ಮಾಡಲು ಸಂಚು ಹೂಡಿದ ಪ್ರಕರಣದಲ್ಲಿ ಬಂಧಿಸಲಾಗಿತ್ತು. ದೆಹಲಿ ಮೂಲದ ಗ್ಯಾಂಗ್ ಸ್ಟರ್ ಕಾಲಾ ಜಥೇದಿ ಕೂಡಾ ಬಿಷ್ಣೋಯಿ ಸಹಚರ. ಮೋಸ್ಟ್ ವಾಟೆಂಡ್ ವ್ಯಕ್ತಿ ಆಗಿದ್ದ ಜಥೇದಿಯನ್ನು ಕಳೆದ ವರ್ಷ ದೆಹಲಿಯಲ್ಲಿ ಬಂಧಿಸಲಾಗಿತ್ತು.

ಉತ್ತರಾಖಂಡದಲ್ಲಿ 6 ಶಂಕಿತರ ಬಂಧನ
ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರ ಹತ್ಯೆಗೆ ಸಂಬಂಧಿಸಿದಂತೆ ಎಸ್‌ಟಿಎಫ್ ಪಂಜಾಬ್ ಮತ್ತು ಉತ್ತರಾಖಂಡ್ ಜೊತೆಗಿನ ಜಂಟಿ ಕಾರ್ಯಾಚರಣೆಯಲ್ಲಿ  ಪಂಜಾಬ್ ಪೊಲೀಸರು ಡೆಹ್ರಾಡೂನ್‌ನ ಪೆಲಿಯಾನ್ ಪೊಲೀಸ್ ಚೌಕಿ ಪ್ರದೇಶದಿಂದ ಆರು ಜನರನ್ನು ಬಂಧಿಸಿದ್ದಾರೆ ಎಂದು ವಿಶೇಷ ಕಾರ್ಯಪಡೆಯ ಮೂಲಗಳು ತಿಳಿಸಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ
Nupur Sharma: ಬಿಜೆಪಿ ನಾಯಕಿ ನೂಪುರ್ ಶರ್ಮಾ ತಲೆ ಕತ್ತರಿಸಿದವರಿಗೆ 50 ಲಕ್ಷ ಬಹುಮಾನ ಘೋಷಿಸಿದ ಪಾಕಿಸ್ತಾನಿಗಳು
ಪಂಜಾಬಿ ಗಾಯಕ ಮೂಸೆ ವಾಲಾ ಹತ್ಯೆ ಹೊಣೆ ಹೊತ್ತ ಕೆನಡಾದ ಗ್ಯಾಂಗ್​​ಸ್ಟರ್ ಗೋಲ್ಡಿ ಬ್ರಾರ್
Sidhu Moose Wala: ಭದ್ರತೆ ವಾಪಸ್ ಪಡೆದ ಬೆನ್ನಲ್ಲೇ ಗುಂಡೇಟಿನಿಂದ ಹತ್ಯೆಗೀಡಾದ ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ