ನನ್ನ ಕರಾಳ ಜೀವನ ಬೆಳಗಿಸಿದ ಮೇರುವ್ಯಕ್ತಿ SPB -ಸ್ವರ ಸಾಮ್ರಾಟನ ಸ್ಮರಿಸಿದ ‘ಸುನೀತ’ ಗಾಯಕಿ

| Updated By: ಸಾಧು ಶ್ರೀನಾಥ್​

Updated on: Sep 25, 2020 | 4:10 PM

‘ಸ್ವರ’ಗಳಲ್ಲೇ ಬದುಕಿದ ಗಾಯಕನಿಗೆ ವಿಧಿಯೇ ‘ಅಪಸ್ವರ’ ಹಾಡಿದೆ. ಈ ಗಾಯನ ಚಕ್ರವರ್ತಿಯನ್ನು ಕಳೆದುಕೊಂಡು ಇಡೀ ಸಂಗೀತ ಲೋಕ ರೋದಿಸುತ್ತಿದೆ. SPB ಹಾಡುಗಳನ್ನು ಕೇಳದೇ ಇರುವವರಿಲ್ಲ. ಎಷ್ಟೋ ಸಂಗೀತಗಾರರಿಗೆ ಇವರು ಸಂಗೀತ ಲೋಕದ ದೇವರು. ಇವರಿಂದ ಪಾಠ-ಉಪದೇಶ ಕಲಿತು ಮುಂದೆ ಬಂದಿರುವವರು ಸಹಸ್ರ ಸಹಸ್ರ. ಛಿದ್ರಗೊಂಡಿದ್ದ ನನ್ನ ಜೀವನವನ್ನು ಬೆಳಗಿಸಿದ ಮೇರುವ್ಯಕ್ತಿ! ನನ್ನ ಬಂಧು, ಆತ್ಮ ಸಂಬಂಧಿ ಆತ. ನನಗೆ ಹಾಡುಗಳನ್ನು ಪ್ರೀತಿಸುವಂತೆ ಮಾಡಿದ, ಹಾಡುವ ಬಯಕೆಯನ್ನು ಹೆಚ್ಚಿಸಿದ, ನನಗೆ ಬೆಂಬಲವಾಗಿ ನಿಂತು, ನನ್ನ ಯೋಗಕ್ಷೇಮವನ್ನು ನೋಡುವ ಮತ್ತು […]

ನನ್ನ ಕರಾಳ ಜೀವನ ಬೆಳಗಿಸಿದ ಮೇರುವ್ಯಕ್ತಿ SPB -ಸ್ವರ ಸಾಮ್ರಾಟನ ಸ್ಮರಿಸಿದ ‘ಸುನೀತ’ ಗಾಯಕಿ
Follow us on

‘ಸ್ವರ’ಗಳಲ್ಲೇ ಬದುಕಿದ ಗಾಯಕನಿಗೆ ವಿಧಿಯೇ ‘ಅಪಸ್ವರ’ ಹಾಡಿದೆ. ಈ ಗಾಯನ ಚಕ್ರವರ್ತಿಯನ್ನು ಕಳೆದುಕೊಂಡು ಇಡೀ ಸಂಗೀತ ಲೋಕ ರೋದಿಸುತ್ತಿದೆ. SPB ಹಾಡುಗಳನ್ನು ಕೇಳದೇ ಇರುವವರಿಲ್ಲ. ಎಷ್ಟೋ ಸಂಗೀತಗಾರರಿಗೆ ಇವರು ಸಂಗೀತ ಲೋಕದ ದೇವರು. ಇವರಿಂದ ಪಾಠ-ಉಪದೇಶ ಕಲಿತು ಮುಂದೆ ಬಂದಿರುವವರು ಸಹಸ್ರ ಸಹಸ್ರ.

ಛಿದ್ರಗೊಂಡಿದ್ದ ನನ್ನ ಜೀವನವನ್ನು ಬೆಳಗಿಸಿದ ಮೇರುವ್ಯಕ್ತಿ! ನನ್ನ ಬಂಧು, ಆತ್ಮ ಸಂಬಂಧಿ ಆತ. ನನಗೆ ಹಾಡುಗಳನ್ನು ಪ್ರೀತಿಸುವಂತೆ ಮಾಡಿದ, ಹಾಡುವ ಬಯಕೆಯನ್ನು ಹೆಚ್ಚಿಸಿದ, ನನಗೆ ಬೆಂಬಲವಾಗಿ ನಿಂತು, ನನ್ನ ಯೋಗಕ್ಷೇಮವನ್ನು ನೋಡುವ ಮತ್ತು ನನ್ನ ಜೀವನದ ಮೇಲಿನ ಪ್ರೀತಿಯನ್ನು ಹೆಚ್ಚಿಸಿದ.. ನನ್ನ ಚಿಕ್ಕಪ್ಪ. ಇಂದು ದೈಹಿಕವಾಗಿ ಇಲ್ಲ ಅಷ್ಟೆ ಎಂದು ಗಾನಗಂಧರ್ವ SPBಯನ್ನು ನೆನೆದು ಗಾಯಕಿ ಸುನಿತಾ ತಮ್ಮ ಗೌರವ-ಭಾವ ಪೂರ್ವಕ ಅನುಭವವನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ.

ಗಾಯಕಿ ಸುನಿತಾ, ಸಂಗೀತಾ ಕಾರ್ಯಕ್ರಮಯೊಂದರಲ್ಲಿ ತೆಲುಗಿನ ಸುವ್ವಿ ಸುವ್ವಿ ಸುವ್ವಾಲಮ್ಮ.. ಹಾಡಿನಲ್ಲಿ SPB ಅವರಿಗೆ ಸಂಗೀತಾ ಸ್ವರಗಳನ್ನು ಹೇಳಿ ಕೊಡುವ ಹಾಡನ್ನು ಹಾಡುವಾ, ತಿದ್ದುವ ಸಂದರ್ಭವಂತೂ ಅಮೋಘವಾಗಿದೆ.