ಭಾರತದಲ್ಲಿ ಡಿಸೆಂಬರ್​ ಕೊನೆಯಲ್ಲಿ ಬಳಕೆಗೆ ಸಿಗಲಿದೆ ಒಂದೇ ಡೋಸ್​​ನ ಕೊವಿಡ್ ಲಸಿಕೆ ಸ್ಪುಟ್ನಿಕ್​ ಲೈಟ್​ !

| Updated By: Lakshmi Hegde

Updated on: Nov 25, 2021 | 8:55 AM

ಸ್ಪುಟ್ನಿಕ್​ ಲೈಟ್​ ಏಕ ಡೋಸ್ ಲಸಿಕೆಯಾಗಿದ್ದರೂ ಹಲವು ಎರಡು ಡೋಸ್​ಗಳ ಲಸಿಕೆಗಳಿಗಿಂತ ಶೇ.80ರಷ್ಟು ಪರಿಣಾಮಕಾರಿಯಾಗಿದೆ. ಇದು ಕೊರೊನಾ ಸೋಂಕು ಸೇರಿ ಅದರ ಎಲ್ಲ ರೀತಿಯ ರೂಪಾಂತರಗಳ ವಿರುದ್ಧವೂ ಹೋರಾಡಬಲ್ಲದು ಎಂದು ಆರ್​ಡಿಐಎಫ್​ ಭರವಸೆ ನೀಡಿದೆ. 

ಭಾರತದಲ್ಲಿ ಡಿಸೆಂಬರ್​ ಕೊನೆಯಲ್ಲಿ ಬಳಕೆಗೆ ಸಿಗಲಿದೆ ಒಂದೇ ಡೋಸ್​​ನ ಕೊವಿಡ್ ಲಸಿಕೆ ಸ್ಪುಟ್ನಿಕ್​ ಲೈಟ್​ !
ಸ್ಪುಟ್ನಿಕ್​ ಲೈಟ್​
Follow us on

ದೆಹಲಿ: ಭಾರತದಲ್ಲಿ ಸದ್ಯ ನೀಡಲಾಗುತ್ತಿರುವ ಎಲ್ಲ ಕೊವಿಡ್​ 19 ಲಸಿಕೆಗಳೂ ಎರಡು ಡೋಸ್​​ಗಳದ್ದಾಗಿವೆ. ಈ ಮಧ್ಯೆ ಡಿಸೆಂಬರ್​ ಅಂತ್ಯದ ವೇಳೆಗೆ ಒಂದೇ ಡೋಸ್​​ನ ಕೊವಿಡ್​ 19 ಲಸಿಕೆ ಸ್ಪುಟ್ನಿಕ್​ ಲೈಟ್​ ಭಾರತದಲ್ಲಿ ಬಳಕೆಗೆ ಲಭ್ಯವಾಗಲಿದೆ ಎಂದು ರಷ್ಯಾದ ನೇರ ಹೂಡಿಕೆ ನಿಧಿ (RDIF)ಸಿಇಒ ಕಿರಿಲ್​ ಡಿಮಿಟ್ರಿವ್​ ತಿಳಿಸಿದ್ದಾರೆ.  ಸದ್ಯ ಈ ಸಿಂಗಲ್​ ಡೋಸ್​ ಲಸಿಕೆ ಕ್ಲಿನಿಕಲ್​ ಪ್ರಯೋಗದ ಹಂತದಲ್ಲಿದೆ.  

ಈ ಸ್ಪುಟ್ನಿಕ್​ ಲೈಟ್​ ಲಸಿಕೆಯನ್ನು ಹಾಕಿದ ಮೂರು ತಿಂಗಳವರೆಗೆ ಡೆಲ್ಟಾ ರೂಪಾಂತರದ ವಿರುದ್ಧ ಶೇ.70ರಷ್ಟು ಪರಿಣಾಮಕಾರಿಯಾಗುತ್ತದೆ ಎಂದು ಕಳೆದ ತಿಂಗಳು ಆರ್​ಡಿಐಎಫ್​ ತಿಳಿಸಿತ್ತು. ಅಷ್ಟೇ ಅಲ್ಲ, 60ವರ್ಷಕ್ಕಿಂತ ಕೆಳಗಿನವರಲ್ಲಿ ಶೇ.75ರಷ್ಟು ಪರಿಣಾಮಕಾರಿಯಾಗಿದ್ದು, ಇದು ಕೊವಿಡ್​ ತೀವ್ರ ಸ್ವರೂಪಕ್ಕೆ ಹೋಗುವುದನ್ನು ಮತ್ತು ರೋಗಿಗಳು ಆಸ್ಪತ್ರೆಗೆ ದಾಖಲಾಗುವುದನ್ನು ತಡೆಯುತ್ತದೆ ಎಂದು ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ಈ ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಸಲು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣಾ ಸಂಸ್ಥೆಯ ವಿಷಯ ತಜ್ಞರ ಸಮಿತಿ ಸೆಪ್ಟೆಂಬರ್​​ನಲ್ಲಿ ಶಿಫಾರಸ್ಸು ಮಾಡಿತ್ತು.

ಸ್ಪುಟ್ನಿಕ್​ ಲೈಟ್​ ಏಕ ಡೋಸ್ ಲಸಿಕೆಯಾಗಿದ್ದರೂ ಹಲವು ಎರಡು ಡೋಸ್​ಗಳ ಲಸಿಕೆಗಳಿಗಿಂತ ಶೇ.80ರಷ್ಟು ಪರಿಣಾಮಕಾರಿಯಾಗಿದೆ. ಇದು ಕೊರೊನಾ ಸೋಂಕು ಸೇರಿ ಅದರ ಎಲ್ಲ ರೀತಿಯ ರೂಪಾಂತರಗಳ ವಿರುದ್ಧವೂ ಹೋರಾಡಬಲ್ಲದು ಎಂದು ಆರ್​ಡಿಐಎಫ್​ ಭರವಸೆ ನೀಡಿದೆ.  ಈಗಾಗಲೇ ಸುಮಾರು 15 ದೇಶಗಳಲ್ಲಿ ಈ ಏಕ ಡೋಸ್​ ಲಸಿಕೆಯನ್ನು ನೀಡಲಾಗುತ್ತಿದ್ದು, ಇನ್ನೂ 30 ದೇಶಗಳಲ್ಲಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಅಂದಹಾಗೆ ಸ್ಪುಟ್ನಿಕ್​ ಲೈಟ್​ ಲಸಿಕೆಯನ್ನು ಬೂಸ್ಟರ್​ ಡೋಸ್​​ನಂತೆಯೂ ಕೊಡಬಹುದು ಎಂದು ಸಿಇಒ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪೇಜಾವರ ಶ್ರೀಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ವಿಚಾರ; ಬಸವನಗುಡಿ ಠಾಣೆಗೆ ಇಂದು ಹಂಸಲೇಖ ಹಾಜರು ಸಾಧ್ಯತೆ

Published On - 8:55 am, Thu, 25 November 21