ಜೈಪುರ: ಚಲಿಸುತ್ತಿದ್ದ ಬಸ್ಗೆ ಹೈ-ಟೆನ್ಷನ್ ವಿದ್ಯುತ್ ತಂತಿ ತಗುಲಿದ ಪರಿಣಾಮ 6 ಮಂದಿ ಮೃತಪಟ್ಟಿದ್ದು, 17ಕ್ಕೂ ಹೆಚ್ಚು ಮಂದಿ ಗಾಯಗೊಂಡ ದುರ್ಘಟನೆ ರಾಜಸ್ಥಾನದ ಜಾಲೋರ್ನಲ್ಲಿ ನಡೆದಿದೆ. ಗಾಯಾಳುಗಳನ್ನು ಜೋಧಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ 6 ಮಂದಿಯ ಸ್ಥಿತಿ ಗಂಭೀರವಾಗಿದೆ.
ಅಜ್ಮರ್ ನಗರದವರಾಗಿದ್ದ ಇವರು ಬಾರ್ಮರ್ನಲ್ಲಿರುವ ಜೈನ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿಂದ ವಾಪಸ್ ಅಜ್ಮರ್ಗೆ ಬರುವಾಗ ಹತ್ತಿರದ, ಅತ್ಯುತ್ತಮ ದಾರಿ ಯಾವುದು ಎಂದು ಗೂಗಲ್ ಮ್ಯಾಪ್ನಲ್ಲಿ ಚೆಕ್ ಮಾಡಿದ್ದಾರೆ. ಗೂಗಲ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಬಸ್ ಚಲಾಯಿಸಿದ್ದಾರೆ. ರಾತ್ರಿ 10.30ರಹೊತ್ತಿಗೆ ಜಾಲೋರ್ ಜಿಲ್ಲೆಯ ಮಹೇಶ್ಪುರ ಬಳಿ ಅತ್ಯಂತ ಕಿರಿದಾದ ದಾರಿಯಲ್ಲಿ ಸಾಗುವಾಗ, ಕೆಳಹಂತದಲ್ಲಿ ತೂಗುತ್ತಿದ್ದ ಹೈ-ಟೆನ್ಷನ್ ತಂತಿ ಬಸ್ಗೆ ತಗುಲಿ, ಬೆಂಕಿ ಹೊತ್ತಿಕೊಂಡಿದೆ.
ಗಾಯಾಳುಗಳನ್ನು ಜೋಧ್ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. 17 ಮಂದಿಯಲ್ಲಿ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ. ಬಸ್ ಚಾಲಕ ಮತ್ತು ನಿರ್ವಾಹಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಡೀಲ್ ಸ್ವಾಮಿ ವಿರುದ್ದ ದಾಖಲಾಯ್ತು ಮತ್ತೆರಡು FIR.. ನೌಕರಿ ಹೆಸರಲ್ಲಿ ನುಂಗಿರುವ ಮೊತ್ತವೆಷ್ಟು ಗೊತ್ತಾ?
Published On - 1:08 pm, Sun, 17 January 21