AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬಾನಿ ಬೆಂಗಾವಲು ಪಡೆಗೆ ನಾಲ್ಕು ಐಷಾರಾಮಿ ಬೆಂಜ್​ ಎಸ್​ಯುವಿ ಸೇರ್ಪಡೆ: ಹೇಗಿದೆ ಗೊತ್ತಾ ಭದ್ರತೆ?

ಬೆಂಜ್​ ಜಿ63 ಎಎಂಜಿ ಎಸ್​ಯುವಿ ಐಷಾರಾಮಿ ಜೊತೆಗೆ ಸಾಕಷ್ಟು ಆಯ್ಕೆ ಹೊಂದಿದೆ. 0-100 ಕಿಮೀ ವೇಗವನ್ನು ಕೇವಲ 4.5 ಸೆಕೆಂಡ್​ನಲ್ಲಿ ಮುಟ್ಟುವ ಸಾಮರ್ಥ್ಯವನ್ನು ಈ ವಾಹನ ಹೊಂದಿದೆ. ಗರಿಷ್ಠ 220 ಕಿ.ಮೀ ವೇಗದಲ್ಲಿ ಇದು ಸಂಚರಿಸಬಲ್ಲದು.

ಅಂಬಾನಿ ಬೆಂಗಾವಲು ಪಡೆಗೆ ನಾಲ್ಕು ಐಷಾರಾಮಿ ಬೆಂಜ್​ ಎಸ್​ಯುವಿ ಸೇರ್ಪಡೆ: ಹೇಗಿದೆ ಗೊತ್ತಾ ಭದ್ರತೆ?
ಅಂಬಾನಿ ಸಂಚಾರ ಮಾಡುತ್ತಿರುವ ವಾಹನ
ರಾಜೇಶ್ ದುಗ್ಗುಮನೆ
|

Updated on:Jan 17, 2021 | 6:24 PM

Share

ಮುಂಬೈ: ಭಾರತದ ಶ್ರೀಮಂತರ ಸಾಲಿನಲ್ಲಿ ಮೊದಲಿಗರಾಗಿರುವ ರಿಲಯನ್ಸ್​ ಸಂಸ್ಥೆಯ ಒಡೆಯ ಮುಕೇಶ್​ ಅಂಬಾನಿಗೆ Z+ ಭದ್ರತೆ ಒದಗಿಸಲಾಗುತ್ತಿದೆ. ವಿಶೇಷ ಎಂದರೆ, ಈಗ ಅವರ ಬೆಂಗಾವಲು ಪಡೆಗೆ ನಾಲ್ಕು ಮರ್ಸಿಡಿಸ್​ ಬೆಂಜ್​ ಜಿ63 ಎಎಂಜಿ ಎಸ್​ಯುವಿ ಸೇರ್ಪಡೆ ಆಗಿದೆ.

ಹೌದು, ಮುಂಬೈ ರಸ್ತೆಯಲ್ಲಿ ಅಂಬಾನಿ ಸಂಚಾರ ಮಾಡಿದ್ದು, ಈ ವೇಳೆ ಹೊಸದಾಗಿ ಸೇರ್ಪಡೆ ಆಗಿರುವ ಬೆಂಜ್​ ಜಿ63 ಎಎಂಜಿ ಕಾಣಿಸಿದೆ. ನಾಲ್ಕು ವಾಹನಗಳ ಮೌಲ್ಯ ಸುಮಾರು 12 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಅಂದರೆ, ಒಂದು ವಾಹನದ ಬೆಲೆ ಮೂರು ಕೋಟಿ ರೂಪಾಯಿ.

ಇದರ ಜೊತೆಗೆ ಸಾಕಷ್ಟು ಐಷಾರಾಮಿ ಕಾರುಗಳು ಅಂಬಾನಿ ಅವರ ಭದ್ರತಾ ಪಡೆಯಲ್ಲಿವೆ. ಲ್ಯಾಂಡ್​ ರೋವರ್ ಡಿಸ್ಕವರಿ ಸ್ಪೋರ್ಟ್ಸ್​​, ಬಿಎಂಡಬ್ಲ್ಯು 5, ಫೋರ್ಡ್ ಎಂಡೀವರ್​, ಟೊಯಾಟೋ ಫಾರ್ಚೂನರ್​ ವಾಹನಗಳು ಅಂಬಾನಿಗೆ ಭದ್ರತೆ ನೀಡುತ್ತಿವೆ.

ಬೆಂಜ್​ ಜಿ63 ಎಎಂಜಿ ಎಸ್​ಯುವಿ ಐಷಾರಾಮಿ ಜೊತೆಗೆ ಸಾಕಷ್ಟು ಆಯ್ಕೆಗಳನ್ನು ಹೊಂದಿದೆ. 0-100 ಕಿಮೀ ವೇಗವನ್ನು ಕೇವಲ 4.5 ಸೆಕೆಂಡ್​ನಲ್ಲಿ ತಲುಪುವ ಸಾಮರ್ಥ್ಯವನ್ನು ಈ ವಾಹನ ಹೊಂದಿದೆ. ಗರಿಷ್ಠ 220 ಕಿ.ಮೀ ವೇಗದಲ್ಲಿ ಸಂಚಾರ ಸಾಧ್ಯ.  ಅಲ್ಲದೆ, ಸಾಕಷ್ಟು ಸುರಕ್ಷಿತ ವಾಹನಗಳ ಸಾಲಿನಲ್ಲಿ ಮರ್ಸಿಡಿಸ್​ ಬೆಂಜ್​ ಜಿ63 ಎಎಂಜಿ ಎಸ್​ಯುವಿ ಕೂಡ ಇದೆ.

ಪ್ರತಿ ತಿಂಗಳು ಅಂಬಾನಿ ಭದ್ರತೆಗೆ 15-16 ಲಕ್ಷ ವೆಚ್ಚವಾಗಲಿದೆ. ಈ ಹಣವನ್ನು ಸರ್ಕಾರಕ್ಕೆ ಅಂಬಾನಿ ಪಾವತಿ ಮಾಡುತ್ತಾರೆ. ಹೀಗಾಗಿ, ಇಲ್ಲಿ ಭದ್ರತಾ ಸಿಬ್ಬಂದಿಗೆ ವಾಹನ ನೀಡಿದ್ದು ಕೂಡ ಅಂಬಾನಿಯೇ.

ಷೇರು ಬೆಲೆಯಲ್ಲಿ ಮೋಸ: ಮುಕೇಶ್ ಅಂಬಾನಿಗೂ ದಂಡ.. ರಿಲಯನ್ಸ್ ಸಮೂಹಕ್ಕೆ 70 ಕೋಟಿ ರೂ ದಂಡ ವಿಧಿಸಿದ ಸೆಬಿ

Published On - 1:37 pm, Sun, 17 January 21

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ