ಕೋವಿಡ್-19 ಮೂರನೇ ಅಲೆ ಅಪ್ಪಳಿಸುವ ಮೊದಲು ಒಂದು ಲಕ್ಷ ವೃತ್ತಿಪರರನ್ನು ತಯಾರು ಮಾಡಲು ಕೇಂದ್ರ ಕೌಶಲ್ಯಾಭಿವೃದ್ಧಿ ಇಲಾಖೆ ಸಂಕಲ್ಪ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 11, 2021 | 6:21 PM

ಪ್ರಧಾನ ಮಂತ್ರಿ ಕೌಶಲ್ ವಿಕಾಸ ಯೋಜನಾ (ಪಿಎಮ್​ಕೆವಿವೈ) ಅಡಿಯಲ್ಲಿ ಈಗಾಗಲೇ 1,75,000 ಕಾರ್ಯಕರ್ತರಿಗೆ ಇಲಾಖೆಯು ಆರೋಗ್ಯ ಸೇವೆ ವಲಯದಲ್ಲಿ ತರಬೇತಿ ನೀಡಿದ್ದು ಅವರನ್ನು ಮುಂಚೂಣಿಯ ಕಾರ್ಯಕರ್ತರನ್ನಾಗಿ ಬಳಸಿಕೊಳ್ಳಬಹುದಾಗಿದೆ ಮತ್ತು ಅವರ ವಿವರಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರವಾನಿಸಲಾಗಿದೆ.

ಕೋವಿಡ್-19 ಮೂರನೇ ಅಲೆ ಅಪ್ಪಳಿಸುವ ಮೊದಲು ಒಂದು ಲಕ್ಷ ವೃತ್ತಿಪರರನ್ನು ತಯಾರು ಮಾಡಲು ಕೇಂದ್ರ ಕೌಶಲ್ಯಾಭಿವೃದ್ಧಿ ಇಲಾಖೆ ಸಂಕಲ್ಪ
ಕೋವಿಡ್​ ವಾರಿಯರ್​ಗಳು
Follow us on

ದೇಶದಾದ್ಯಂತ ಕೊವಿಡ್-19 ಪಿಡುಗು ಸೃಷ್ಟಿಸಿರುವ ತಲ್ಲಣದ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಅಗಾಧ ಬೇಡಿಕೆ ತಲೆದೋರಿರುವುದರಿಂದ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯು 1,00,000 ವೃತ್ತಿಪರರನ್ನು ತಯಾರು ಮಾಡಲು ಒಂದು ವಿಶೇಷ ತರಬೇತಿ ಕಾರ್ಯಕ್ರಮವನ್ನು ಆರಂಭಿಸಲಿದೆ ಎಂದು ಇಲಾಖೆಯ ಮೂಲಗಳಿಂದ ಗೊತ್ತಾಗಿದೆ. 28 ರಾಜ್ಯಗಳ 194 ಜಿಲ್ಲೆಗಳಲ್ಲಿ ಸಕಲ ಸೌಲಭ್ಯಗಳನ್ನು ಹೊಂದಿರುವ ಆರೋಗ್ಯ ಕ್ಷೇತ್ರದ 300 ಕೌಶಲ್ಯ ಕೇಂದ್ರಗಳನ್ನು ತರಬೇತಿ ನೀಡಲು ಆರಿಸಿಕೊಳ್ಳಲಾಗಿದೆ. ಹಾಗೆಯೇ, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಅನುಭವಿ ಅರೋಗ್ಯ ಕಾರ್ಯಕರ್ತರ ಸ್ಕಿಲ್​ಗಳನ್ನು ಉತ್ತಮಪಡಿಸುವ ಕಾರ್ಯವನ್ನೂ ಸಚಿವಾಲಯ ಕೈಗೆತ್ತಿಕೊಳ್ಳಲಿದೆ.

ಇಲಾಖೆಯ ಮೂಲಗಳ ಪ್ರಕಾರ, ಅರೋಗ್ಯ ಕಾರ್ಯಕರ್ತರ ತಂಡವನ್ನು ಸೋಂಕಿನ ಮೂರನೇ ಅಲೆ ಭಾರತವನ್ನು ಅಪ್ಪಳಿಸುವ ಮೊದಲು ತಯಾರು ಮಾಡಲಾಗವುದು. ಮೂರು ತಿಂಗಳು ಅಲ್ಪಾವಧಿಯ ಉದ್ಯೋಗಗಳಿಗೆ ಇಲಾಖೆಯು ಆರು ಆಯಾಮಗಳನ್ನು ಆಯ್ಕೆ ಮಾಡಿಕೊಂಡಿದೆ-ತುರ್ತು ಆರೈಕೆ ನೆರವು, ಮೂಲ ಆರೈಕೆ ನೆರವು, ಸ್ಯಾಂಪಲ್​ಗಳ ಸಂಗ್ರಹಣೆ, ಮನೆಯಲ್ಲಿ ಆರೈಕೆ ಒದಗಿಸುವ ನೆರವು ಮತ್ತು ವೈದ್ಯಕೀಯ ಉಪಕರಣಗಳ ನೆರವು.

ದೇಶದ ಬೇರೆ ಬೇರೆ ಭಾಗಗಳಲ್ಲಿರುವ ಹಲವಾರು ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಆಮ್ಲಜನಕ ಸಾಂದ್ರಕ ಮೊದಲಾದ ವೈದ್ಯಕೀಯ ಉಪಕರಣಗಳು ಲಭ್ಯವಿದ್ದರೂ ಅವಗಳನ್ನು ಬಳಸಲು ಗೊತ್ತಿರುವ ಸಿಬ್ಬಂದಿಯ ಕೊರತೆ ಬಗ್ಗೆ ಅನೇಕ ದೂರುಗಳು ಕೇಳಿಬಂದಿದ್ದರಿಂದ, ವೈದ್ಯಕೀಯ ಉಪಕರಣಗಳನ್ನು ಬಳಸುವ ತರಬೇತಿ ನೀಡಲು ಆದ್ಯತೆ ನೀಡಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ. ರೊಗಿಗಳ ವೈದ್ಯಕೀಯ ದಾಖಲೆಗಳನ್ನು ಹೇಗೆ ನಿರ್ವಹಿಸಬೇಕು ಅನ್ನುವುದನ್ನು ಸಹ ಅವರಿಗೆ ಹೇಳಿಕೊಡಲಾಗುವುದು.

500ಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿರುವ ಆಮ್ಲಜನಕ ಘಟಕಗಳಲ್ಲಿ ಕೆಲಸ ಮಾಡಲು ಸುಮಾರು 20,000 ದಷ್ಟು ಐಟಐ ಪದವೀಧರರನ್ನು ಗುರುತಿಸಲಾಗಿದೆ. ‘ಅವರಿಗೆ, ಆಕ್ಸಿಜನ್ ಸಿಲಿಂಡರ್​ಗಳನ್ನು, ಮಿನಿ ಆಕ್ಸಿಜನ್ ಸಾಂದ್ರಕ ಮತ್ತು ವೆಂಟಿಲೇಟರ್​​ಗಳನ್ನು ಇನ್​ಸ್ಟಾಲ್, ಆಪರೇಟ್​ ಮತ್ತು ನಿರ್ವಹಣೆ ಮಾಡುವ ಮತ್ತು ಆಮ್ಲಜನಕ ಘಟಕಗಳಲ್ಲಿ, ಹಗಲಿರುಳು ಕಾರ್ಯ ನಿರ್ವಹಿಸುವ ಆಯಾಮಗಳಲ್ಲಿ ತರಬೇತಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಪ್ರಧಾನ ಮಂತ್ರಿ ಕೌಶಲ್ ವಿಕಾಸ ಯೋಜನಾ (ಪಿಎಮ್​ಕೆವಿವೈ) ಅಡಿಯಲ್ಲಿ ಈಗಾಗಲೇ 1,75,000 ಕಾರ್ಯಕರ್ತರಿಗೆ ಇಲಾಖೆಯು ಆರೋಗ್ಯ ಸೇವೆ ವಲಯದಲ್ಲಿ ತರಬೇತಿ ನೀಡಿದ್ದು ಅವರನ್ನು ಮುಂಚೂಣಿಯ ಕಾರ್ಯಕರ್ತರನ್ನಾಗಿ ಬಳಸಿಕೊಳ್ಳಬಹುದಾಗಿದೆ ಮತ್ತು ಅವರ ವಿವರಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರವಾನಿಸಲಾಗಿದೆ. ಇನ್ನೂ 1,50,000 ಜನರನ್ನು ಪಿಎಮ್​ಕೆವಿವೈ 2.0 ಯೋಜನೆ ಅಡಿಯಲ್ಲಿ ತರಬೇತಿ ನೀಡಿ ತಯಾರು ಮಾಡಲಾಗುವುದು ಎಂದು ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಜನರು ಆಸ್ಪತ್ರೆಗಳಲ್ಲಿ, ಹಂಗಾಮಿ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಮನೆಗಳಲ್ಲೂ ಸಹ, ವೈದ್ಯಕೀಯ ತುರ್ತು ಸ್ಥಿತಿಯನ್ನು ನಿಭಾಯಿಸಲು ಶಕ್ತರಾಗುವಂಥ ತರಬೇತಿಯನ್ನು ನೀಡಲಾಗುವುದು. ಕೆಲಸದ ಬಗ್ಗೆ ಅವರಿಗೆ ತರಬೇತಿಯನ್ನು ಸರ್ಕಾರೀ ಆಸ್ಪತ್ರೆಗಳಲ್ಲಿ ನೀಡಲಾಗುವುದು ಮತ್ತು ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ಇದರ ಜೊತೆಗೆ ಅವರಿಗೆ 2 ಲಕ್ಷ ರೂ.ಗಳ ಅಪಘಾತ ವಿಮೆಯನ್ನು ನೀಡಲಾಗುವುದು ಎಂದು ಅಧಿಕಾರಿ ಹೇಳಿದರು.

ಮೂಲ ಆರೈಕೆಯಲ್ಲಿ ತರಬೇತಿ ಹೊಂದುವ ಮುಂಚೂಣಿಯ ಕಾರ್ಯಕರ್ತರು, ಸಾಮಾನ್ಯ ವೈದ್ಯಕೀಯ ಉಪಕರಣಗಳೆನಿಸಿಕೊಳ್ಳುವ ಆಮ್ಲಜನಕ ಸಾಂದ್ರಕ, ನೆಬ್ಯೂಲೈಸರ್, ಈಸಿಜಿ ಮತ್ತು ಆಕ್ಸಿಮೀಟರ್​ಗಳನ್ನು ನಿಭಾಯಿಸುವ ತರಬೇತಿಯನ್ನು ನೀಡಲಾಗುವುದು. ಹಾಗೆಯೇ, ಕೊವಿಡ್-19 ನಿಯಮಾವಳಿಗಳ ಪ್ರಕಾರ ಸೋಂಕಿಗೆ ಬಲಿಯಾಗುವವರ ಅಂತ್ಯಸಂಸ್ಕಾರ ನಡೆಸುವ ವಿಧಾನದ ಬಗ್ಗೆಯೂ ಅವರಿಗೆ ತರಬೇತಿ ನೀಡಲಾಗುವುದು.

ಮನೆಯಲ್ಲಿ ಆರೈಕೆ ಒದಗಿಸುವ ಕಟೆಗಿರಿಯಲ್ಲಿ ತುರ್ತಾಗಿ ಪ್ರತಿಕ್ರಿಯಿಸಿವುದು, ಸೋಂಕಿನ ಪ್ರಮಾಣವನ್ನು ವಿಶ್ಲೇಷಿಸುವುದು ಮತ್ತು ಗಂಭೀರ ಸ್ವರೂಪದ ಸೋಂಕಿನಿಂದ ನರಳುತ್ತಿರುವವರಿಗಾಗಿ ಅಂಬ್ಯುಲೆನ್ಸ್​ನಲ್ಲಿ ಉಪಕರಣಗಳನ್ನು ತಯಾರು ಮಾಡುವ ಬಗ್ಗೆಯೂ ತರಬೇತಿ ನೀಡಲಾಗುವುದು ಅಂತ ಇಲಾಖೆಯ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕೊರೊನಾ ಮೂರನೇ ಅಲೆ ಅಕ್ಟೋಬರ್ ಅಥವಾ ನವೆಂಬರ್​ಗೆ ಆರಂಭವಾಗುವ ಸಾಧ್ಯತೆಯಿದೆ: ಸಲಹಾ ಸಮಿತಿ ಎಚ್ಚರಿಕೆ

Published On - 4:40 pm, Fri, 11 June 21