ಭಾರತದ 1,300 ಸಿಮ್ ಕಾರ್ಡ್​ ಚೀನಾಕ್ಕೆ ರವಾನೆ: ಬಿಎಸ್​ಎಫ್​ನಿಂದ ಚೀನಿ ಪ್ರಜೆಯ ಬಂಧನ

ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಶುಕ್ರವಾರ ಪಶ್ಚಿಮ ಬಂಗಾಳದ ಮಾಲ್ಡಾಕ್ಕೆ ಧಾವಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣವನ್ನು ಬಿಎಸ್​ಎಫ್​ನಿಂದ ಉತ್ತರ ಪ್ರದೇಶ ಪೊಲೀಸರಿಗೆ ವರ್ಗಾಯಿಸಲಾಗಿದೆ.

ಭಾರತದ 1,300 ಸಿಮ್ ಕಾರ್ಡ್​ ಚೀನಾಕ್ಕೆ ರವಾನೆ: ಬಿಎಸ್​ಎಫ್​ನಿಂದ ಚೀನಿ ಪ್ರಜೆಯ ಬಂಧನ
ಬಿಎಸ್​ಎಫ್ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 11, 2021 | 5:04 PM

ದೆಹಲಿ: ಕಳೆದ 2 ವರ್ಷಗಳಲ್ಲಿ 1300 ಸಿಮ್​ಕಾರ್ಡ್​ಗಳನ್ನು ಚೀನಾಕ್ಕೆ ಸಾಗಿಸಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್​ಎಫ್) ಬಂಧಿಸಿರುವ ಚೀನಿ ಪ್ರಜೆ ಮಾಹಿತಿ ನೀಡಿದ್ದಾನೆ. ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಶುಕ್ರವಾರ ಪಶ್ಚಿಮ ಬಂಗಾಳದ ಮಾಲ್ಡಾಕ್ಕೆ ಧಾವಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣವನ್ನು ಬಿಎಸ್​ಎಫ್​ನಿಂದ ಉತ್ತರ ಪ್ರದೇಶ ಪೊಲೀಸರಿಗೆ ವರ್ಗಾಯಿಸಲಾಗಿದೆ.

ಆರೋಪಿಯನ್ನು ಹುಬೆ ಪ್ರಾಂತ್ಯದ ನಿವಾಸಿ ಹ್ಯಾನ್​ ಜುನ್ವೆ ಎಂದು ಗುರುತಿಸಲಾಗಿದೆ. ತನ್ನ ಸಹಚರ ಸುನ್ ಜಿಯಾಂಗ್ ಎಂಬಾತನನ್ನು ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ಈ ಹಿಂದೆ ಬಂಧಿಸಿದ್ದರು ಎಂದು ಆರೋಪಿಯು ಬಿಎಸ್​ಎಫ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ವಿಚಾರಣೆ ಇನ್ನೂ ನಡೆಯುತ್ತಿದೆ. ಈತ ಯಾವುದಾದರೂ ಗುಪ್ತಚರ ಇಲಾಖೆ ಅಥವಾ ಇತರ ಸಂಘಟನೆಗಳೊಂದಿಗೆ ಕೆಲಸ ಮಾಡುತ್ತಿದ್ದನೇ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಬಿಎಸ್​ಎಫ್ ಡಿಐಜಿ ಎಸ್​.ಎಸ್​.ಗುಲೇರಿಯಾ ಹೇಳಿದ್ದಾರೆ.

ಬಾಂಗ್ಲಾದೇಶಿ ಸಿಮ್​ಕಾರ್ಡ್, ಎರಡು ಪೆನ್​ಡ್ರೈವ್​ಗಳು, ಲ್ಯಾಪ್​ಟಾಪ್, ಎರಡು ಐಫೋನ್​, ಎಟಿಎಂ ಕಾರ್ಡ್​ಗಳು, ಅಮೆರಿಕ ಡಾಲರ್​ಗಳ ಜೊತೆಗೆ ಬಾಂಗ್ಲಾದೇಶಿ ಹಾಗೂ ಭಾರತೀಯ ಕರೆನ್ಸಿಯನ್ನು ಬಂಧಿತನಿಂದ ವಶಪಡಿಸಿಕೊಳ್ಳಲಾಗಿದೆ. ಗುರುಗ್ರಾಮದಲ್ಲಿ ಸ್ಟಾರ್ ಸ್ಪ್ರಿಂಗ್ ಹೆಸರಿನ ಹೊಟೆಲ್ ಹೊಂದಿರುವುದಾಗಿ ಬಂಧಿತ ಹೇಳಿದ್ದಾನೆ. 2010ರ ನಂತರ ಕನಿಷ್ಠ 4 ಬಾರಿ ಭಾರತಕ್ಕೆ ಬಂದಿದ್ದೇನೆ ಎಂದು ಅವನು ಹೇಳಿದ್ದಾನೆ ಎಂದು ಗುಲೇರಿಯಾ ಹೇಳಿದ್ದಾರೆ.

‘ತನ್ನ ಹೆಂಡತಿ ಜುನ್ವೆ ಕೆಲ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದಾಗಿ ಬಂಧಿತ ಜಿಯಾಂಗ್ ಒಪ್ಪಿಕೊಂಡಿದ್ದಾನೆ. ಅವನ ಹೇಳಿಕೆಗಳನ್ನು ನಾವು ಪರಿಶೀಲಿಸುತ್ತಿದ್ದೇವೆ’ ಎಂದು ಬಿಎಸ್​ಎಫ್ ಹೇಳಿತ್ತು. ಈ ಬೆಳವಣಿಗೆಯ ನಂತರ ಉತ್ತರ ಪ್ರದೇಶ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದರು. ಹೀಗಾಗಿ ಅವರಿಗೆ ಭಾರತದ ವೀಸಾ ಸಿಗಲಿಲ್ಲ. ನೇಪಾಳ ಮತ್ತು ಬಾಂಗ್ಲಾದೇಶಗಳ ವೀಸಾ ಪಡೆದು ಅವರು ಭಾರತ ಪ್ರವೇಶಿಸಿದ್ದರು.

ಈ ಬಗ್ಗೆ ತನಿಖೆ ನಡೆಯುತ್ತಿದೆ. ಇತರ ಗುಪ್ತಚರ ಸಂಸ್ಥೆಗಳಿಗೂ ಮಾಹಿತಿ ನೀಡಲಾಗಿದೆ. ಬಂಧಿತನ ಲ್ಯಾಪ್​ಟಾಪ್​ ಪರಿಶೀಲನೆಗೆ ಪ್ರಯತ್ನಿಸುತ್ತಿದ್ದೇವೆ ಎಂದು ಗುಲೇರಿಯಾ ಮಾಹಿತಿ ನೀಡಿದರು. ಮಾಲ್ಡಾ ಜಿಲ್ಲೆಯ ಮೂಲಕ ಗುರುವಾರ ಭಾರತ ಪ್ರವೇಶಿಸಿದ್ದ ಜಿಯಾಂಗ್​ ಭದ್ರತಾ ಸಿಬ್ಬಂದಿಯ ಕಣ್ಣಿಗೆ ಬಿದ್ದಿದ್ದ. ಭದ್ರತಾ ಪಡೆಗಳು ಪ್ರಶ್ನಿಸಿದಾಗ ಓಡಿ ಹೋಗಲು ಯತ್ನಿಸಿದ. ಈ ವೇಳೆ ಅವನನ್ನು ಹಿಡಿದು ವಿಚಾರಣೆಗೆ ಒಳಪಡಿಸಲಾಯಿತು.

(Chinese Resident sends 1300 Indian SIM cards to China in last 2 years BSF Arrests the culprit)

ಇದನ್ನೂ ಓದಿ: Tokyo Olympics: ಭಾರತೀಯರ ಭಾವನೆಗೆ ಧಕ್ಕೆ ತರುವುದಿಲ್ಲ; ಚೀನಾ ಕಂಪನಿಯ ಪ್ರಾಯೋಜಕತ್ವ ಬೇಡವೆಂದ ಭಾರತ

ಇದನ್ನೂ ಓದಿ: ಹಣಕಾಸು ವಂಚನೆ: ಕೊರೊನಾ ನಡುವೆಯೇ ಭಾರತದಲ್ಲಿ ಕೇವಲ 2 ತಿಂಗಳಲ್ಲಿ 150 ಕೋಟಿ ದೋಚಿದ್ದ ಚೀನಾ ವಂಚಕರು ಅರೆಸ್ಟ್​

Published On - 5:02 pm, Fri, 11 June 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್