ಹಣಕಾಸು ವಂಚನೆ: ಕೊರೊನಾ ನಡುವೆಯೇ ಭಾರತದಲ್ಲಿ ಕೇವಲ 2 ತಿಂಗಳಲ್ಲಿ 150 ಕೋಟಿ ದೋಚಿದ್ದ ಚೀನಾ ವಂಚಕರು ಅರೆಸ್ಟ್​

ಹಣಕಾಸು ವಂಚನೆ: ಕೊರೊನಾ ನಡುವೆಯೇ ಭಾರತದಲ್ಲಿ ಕೇವಲ 2 ತಿಂಗಳಲ್ಲಿ 150 ಕೋಟಿ ದೋಚಿದ್ದ ಚೀನಾ ವಂಚಕರು ಅರೆಸ್ಟ್​
ಹಣಕಾಸು ವಂಚನೆ: ಕೊರೊನಾ ನಡುವೆಯೇ ಭಾರತದಲ್ಲಿ ಕೇವಲ 2 ತಿಂಗಳಲ್ಲಿ 150 ಕೋಟಿ ದೋಚಿದ್ದ ಚೀನಾ ವಂಚಕರು ಅರೆಸ್ಟ್​

money laundering scam: ಲಕ್ಷಾಂತರ ಮಂದಿ ವಂಚಕ ಸ್ಕೀಂಗಳಲ್ಲಿ ಸಕ್ರಿಯವಾಗಿರುವಾಗ ಚೀನಾದ ವಂಚಕರು ಚಲಾವಣೆಯಲ್ಲಿಟ್ಟಿದ್ದ ಪವರ್​ ಬ್ಯಾಂಕ್​ ಎಂಬ ಆ್ಯಪ್​ ಗೂಗಲ್​ ಪ್ಲೇ ಸ್ಟೋರ್​​ನಲ್ಲಿ ನಾಲ್ಕನೆಯ ಸ್ಥಾನದಲ್ಲಿ ಟ್ರೆಂಡ್​ ಆಗುತ್ತಿತ್ತು. ಅಷ್ಟರಮಟ್ಟಿಗೆ ಚೀನಾ ವಂಚಕರ ದೋಖಾ ಟ್ರೆಂಡಿಂಗ್​ನಲ್ಲಿತ್ತು!

TV9kannada Web Team

| Edited By: sadhu srinath

Jun 10, 2021 | 11:12 AM

ದೆಹಲಿ: ಮತ್ತದೇ ಮಾತಿನ ಮೂಲಕ ಈ ಸುದ್ದಿ ಹೇಳಬೇಕಿದೆ… ವಂಚನೆಗೆ ತುತ್ತಾಗಲು ನಾಮುಂದು ತಾಮುಂದು ಎಂದು ಮುಂದೆಬೀಳುವವರು ಇರುವವರೆಗೂ ವಂಚಕರು ಇದ್ದೇ ಇರುತ್ತಾರೆ… ಮತ್ತು ಇಂತಹ ವಂಚನೆ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ದುರಾಸೆ ಬಿಟ್ಟು, ಜನ ಎಚ್ಚೆತ್ತುಕೊಳ್ಳುವುದೇ ಇಂತಹ ವಂಚಕರಿಗೆ ಸರಿಯಾದ ಬುದ್ಧಿ ಕಲಿಸುವ ಉಪಾಯವಾಗಿದೆ. ತಾಜಾ ಪ್ರಕರಣದಲ್ಲಿ, ಚೀನಾ ಮೂಲದ ಕಂಪನಿಗಳು ಭಾರತದಾದ್ಯಂತ ನಡೆಸುತ್ತಿದ್ದ ಭಾರೀ ಪ್ರಮಾಣದ ಹಣಕಾಸು ವಂಚನೆ ಪ್ರಕರಣಗಳನ್ನು ದೆಹಲಿ ಪೊಲೀಸರು ಬಯಲು ಮಾಡಿದ್ದಾರೆ. ಇದಕ್ಕೆ ಬೆಂಗಳೂರಿನ ನಂಟು ಸಹ ಇದೆ. ಪ್ರಕರಣದಲ್ಲಿ ಇಬ್ಬರು ಚಾರ್ಟೆಡ್​​ ಅಕೌಂಟೆಂಟ್​ಗಳು, ಟಿಬೆಟ್ ಮಹಿಳೆ ಮತ್ತು ಇತರೆ 8 ಮಂದಿಯನ್ನು ಬಂಧಿಸಿದ್ದಾರೆ.

ಈ ವಂಚಕ ಕಂಪನಿಗಳಲ್ಲಿ ಸುಮಾರು 5 ಲಕ್ಷ ಮಂದಿ ಭಾರತೀಯರು ಬಂಡವಾಳ ಹೂಡಿಕೆ ಮಾಡಿದ್ದರು. ಅಂದರೆ ಈ ಐದೂ ಲಕ್ಷ ಮಂದಿ ಕ್ಷಿಪ್ರವಾಗಿ ಹಣ ಗಳಿಸುವ ದುರಾಸೆ ಹೊಂದಿದ್ದರು. ಅದಕ್ಕೆ ತಕ್ಕಂತೆ ಕ್ಷಿಪ್ರ ಹಣ ಗಳಿಕೆ ಆ್ಯಪ್​​ಗಳ ಮೂಲಕ ವಂಚನೆಗೊಳಗಾದ ಈ 5 ಲಕ್ಷ ಮಂದಿ ಭಾರತೀಯರ ಡೇಟಾವನ್ನು ಚೀನಾ ಮೂಲದ ವಂಚಕರು ಕದ್ದಿದ್ದರು ಎಂಬುದು ಇದೀಗ ಬಹಿರಂಗವಾಗಿದೆ. ವಂಚಕರು ಕೇವಲ 2 ತಿಂಗಳಲ್ಲಿ 150 ಕೋಟಿ ದೋಚಿದ್ದರು ಎಂದು ದೆಹಲಿ ಪೊಲೀಸ್​ ಕಮೀಷನರ್ ಎಸ್​ ಎನ್ ಶ್ರೀವಾಸ್ತವ ತಿಳಿಸಿದ್ದಾರೆ.​

ದೆಹಲಿ ಸಮೀಪದ ಗುರಗಾಂವ್ ಬಳಿ ನೆಲೆಸಿದ್ದ ಚಾರ್ಟೆಡ್​​ ಅಕೌಂಟೆಂಟ್ (CA) ಒಬ್ಬ, ಚೀನಾದ ವಂಚಕರಿಗೆ ನೆರವಾಗಲು 110 ಬೇನಾಮಿ ಕಂಪನಿಗಳನ್ನು ತೆರೆದಿದ್ದ. ಅವನಿಂದ ನಾನಾ ಬ್ಯಾಂಕ್​ ಖಾತೆಗಳು ಮತ್ತು ಪೇಮೆಂಟ್​ ಗೇಟ್​ವೇ ಗಳಲ್ಲಿ ಸ್ಥಗಿತಗೊಂಡಿರುವ 11 ಕೋಟಿ ರೂಪಾಯಿ ಮೊತ್ತ, 97 ಲಕ್ಷ ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚೀನಾ ವಂಚಕರ ದೋಖಾ ಟ್ರೆಂಡಿಂಗ್​ನಲ್ಲಿತ್ತು! ಈ ವಂಚಕರು 24-35 ದಿನಗಳಲ್ಲಿ ಬಂಡವಾಳವನ್ನು ದ್ವಿಗುಣಗೊಳಿಸುವುದಾಗಿ ಆಸೆ ತೋರಿಸಿದ್ದರು. ಅಷ್ಟೇ ಅಲ್ಲ… ದುರಾಸೆಯ ಪರಮಾವಧಿ ಅಂದ್ರೆ ಗಂಟೆಗಳ ಲೆಕ್ಕದಲ್ಲಿ ಮತ್ತು ದಿನದ ಲೆಕ್ಕದಲ್ಲಿ ನಾವು ನಿಮಗೆ ನಿಮ್ಮ ಬಂಡವಾಳವನ್ನು ಎರಡು ಪಟ್ಟು ಮೂರು ಪಟ್ಟು ಹೆಚ್ಚಿಸಿಕೊಡುತ್ತೇವೆ ಎಂದು ವಂಚಕರು ನಯವಾಗಿ ಹೇಳುತ್ತಿದ್ದರು. ಮತ್ತು ಈ ಐದು ಲಕ್ಷ ಮಂದಿಯೂ ಕ್ಯೂನಲ್ಲಿ ನಿಂತವರಂತೆ ಬಂಡವಾಳ ಹೂಡಿ, ವಂಚನೆಗೊಳಗಾಗಿದ್ದಾರೆ. ಜಸ್ಟ್​ 300 ರೂಪಾಯಿಯಿಂದ ಲಕ್ಷಾಂತರ ರೂಪಾಯಿಗಳವರೆಗೂ ಈ ವಂಚನೆ ಸ್ಕೀಂಗಳಲ್ಲಿ ಹೂಡಿಕೆ ಮಾಡುವುದಕ್ಕೆ ಅವಕಾಶ ನೀಡಿದ್ದರು ಈ ವಂಚಕರು.

ಹೀಗೆ ಲಕ್ಷಾಂತರ ಮಂದಿ ವಂಚಕ ಸ್ಕೀಂಗಳಲ್ಲಿ ಸಕ್ರಿಯವಾಗಿರುವಾಗ ಚೀನಾದ ವಂಚಕರು ಚಲಾವಣೆಯಲ್ಲಿಟ್ಟಿದ್ದ ಪವರ್​ ಬ್ಯಾಂಕ್​ ಎಂಬ ಆ್ಯಪ್​ ಗೂಗಲ್​ ಪ್ಲೇ ಸ್ಟೋರ್​​ನಲ್ಲಿ ನಾಲ್ಕನೆಯ ಸ್ಥಾನದಲ್ಲಿ ಟ್ರೆಂಡ್​ ಆಗುತ್ತಿತ್ತು. ಅಷ್ಟರಮಟ್ಟಿಗೆ ಚೀನಾ ವಂಚಕರ ದೋಖಾ ಟ್ರೆಂಡಿಂಗ್​ನಲ್ಲಿತ್ತು!

Power Bank ಮತ್ತು EZPlan ಎಂಬ ಎರಡು ಆ್ಯಪ್​ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದ್ದವು. ಇದರ ಮೇಲೆ ದೆಹಲಿ ಸೈಬರ್​ ಕ್ರೈಂ ಸೆಲ್​ ಇದರ ಮೇಲೆ ಒಂದು ಕಣ್ಣಿಟ್ಟಿತ್ತು. ಅದರ ಅನುಸಾರ ತನಿಖೆಗೆ ಇಳಿದಾಗ ಈ ವಂಚನೆ ಜಾಲ ಪತ್ತರೆಯಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

EZPlan ಎಂಬ ಆ್ಯಪ್ ವೆಬ್​ಸೈಟ್​​ನಲ್ಲಿ ಲಭ್ಯವಾಗುತ್ತಿತ್ತು. ಇನ್ನು Power Bank ಎಂಬುದು ಬೆಂಗಳೂರಿನಲ್ಲಿ ನೆಲೆಸಿರುವ ತ್ವರಿತವಾಗಿ ಚಾರ್ಜ್​​ ಮಾಡುವ ತಂತ್ರಜ್ಞಾನದ ಸ್ಟಾರ್ಟ್​ ಅಪ್​ ಕಂಪನಿ ಎಂದು ಬಿಂಬಿಸಲಾಗಿತ್ತು. ಆದರೆ ಇದರ ಸರ್ವರ್​​ ಚೀನಾದಲ್ಲಿದೆ ಎಂಬುದನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದರು. ಆದರೆ ಈ ವಂಚಕ ಆ್ಯಪ್​ಗಳಲ್ಲಿ access to camera, read contact details ಮತ್ತು read and write to external storage ಎಂಬ ಗುಪ್ತ ಮಾಹಿತಿ ಸಂಗ್ರಹ ವ್ಯವಸ್ಥೆಗಳೂ ಇಣುಕಿದ್ದವು. ಇದರಿಂದ ಲಕ್ಷಾಂತರ ಮಂದಿ ಈ ವಂಚನೆ ಜಾಲಕ್ಕೆ ಸುಲಭದ ಸುತ್ತಾಗುತ್ತಿದ್ದರು. ಮತ್ತು ತಾವಷ್ಟೇ ಅಲ್ಲ, ತಮ್ಮ ಸಂಬಂಧಿಕರು, ಆಪ್ತರು, ಹಿತೈಷಿಗಳನ್ನೂ ಸಹ ಈ ಜಾಲಕ್ಕೆ ಸಿಲುಕುವಂತೆ ಪುಸಲಾಯಿಸುತ್ತಿದ್ದರು.

(money laundering scam run by China entities Power Bank EZPlan busted Two CAs Tibetan woman arrested by delhi Cyber Crime Cell)

ಜಿಎಸ್​ಟಿ ವಂಚನೆಯ ₹ 20,124 ಕೋಟಿ ಕೇಂದ್ರ ಸರ್ಕಾರದಿಂದ ಪತ್ತೆ: ನಿರ್ಮಲಾ ಸೀತಾರಾಮನ್

Follow us on

Related Stories

Most Read Stories

Click on your DTH Provider to Add TV9 Kannada