ಪ್ರಧಾನಿ ಮೋದಿಗೆ ಗಡ್ಡ ತೆಗೆಸಲು 100 ರೂಪಾಯಿ ಮನಿ ಆರ್ಡರ್​ ಕಳುಹಿಸಿ ಪತ್ರ ಬರೆದ ಚಾಯ್​ವಾಲಾ

PM Modi Beard Look: ನಮ್ಮ ಪ್ರಧಾನಿಗಳ ಬಗ್ಗೆ ಅತ್ಯಂತ ಗೌರವ ಹಾಗೂ ಮೆಚ್ಚುಗೆ ಇದೆ. ನನಗೆ ದೇಶದ ಪ್ರಧಾನಿಯನ್ನು ನೋಯಿಸುವ ಉದ್ದೇಶ ಖಂಡಿತವಾಗಿಯೂ ಇಲ್ಲ. ಆದರೆ, ಅವರು ತಮ್ಮ ಗಡ್ಡವನ್ನು ತೆಗೆಸಬೇಕು ಎಂದು ಮನವಿ ಮಾಡಿ 100 ರೂ. ಕಳುಹಿಸುತ್ತಿದ್ದೇನೆ. ಇದು ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಜನರು ದಿನೇ ದಿನೇ ಅನುಭವಿಸುತ್ತಿರುವ ಕಷ್ಟವನ್ನು ನೀಗಿಸಲು ಪ್ರಧಾನಿಗಳ ಗಮನ ಸೆಳೆಯುವ ಪ್ರಯತ್ನ: ಅನಿಲ್​

ಪ್ರಧಾನಿ ಮೋದಿಗೆ ಗಡ್ಡ ತೆಗೆಸಲು 100 ರೂಪಾಯಿ ಮನಿ ಆರ್ಡರ್​ ಕಳುಹಿಸಿ ಪತ್ರ ಬರೆದ ಚಾಯ್​ವಾಲಾ
ನರೇಂದ್ರ ಮೋದಿ
Follow us
TV9 Web
| Updated By: Digi Tech Desk

Updated on:Jun 10, 2021 | 2:28 PM

ಮುಂಬೈ: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅನೇಕ ಕಾರಣಗಳಿಗಾಗಿ ಸುದ್ದಿಯಲ್ಲಿರುತ್ತಾರೆ. ಮಾತಿನ ಶೈಲಿ, ಹಾವಭಾವ, ಧಿರಿಸು, ಕೇಶ ವಿನ್ಯಾಸ, ಚಾಯ್​ವಾಲಾ ಹೇಳಿಕೆ ಹೀಗೆ ಎಲ್ಲವೂ ಜನರಿಗೆ ಮಾತಿನ ವಸ್ತುಗಳೇ. ಪ್ರಧಾನಿ ಪಟ್ಟಕ್ಕೇರುವಾಗ ಟ್ರಿಮ್​ ಮಾಡಿದ ಗಡ್ಡ ವಿನ್ಯಾಸವನ್ನು ಹೊಂದಿದ್ದ ಮೋದಿ ಈಗ ಉದ್ದ ಗಡ್ಡ ಬಿಟ್ಟಿದ್ದಾರೆ. ಒಂದಷ್ಟು ಮಂದಿ ಅವರ ಬಿಳಿ ಬಣ್ಣದ ಉದ್ದ ಗಡ್ಡಕ್ಕೆ ಮೆಚ್ಚುಗೆಯನ್ನೂ ಇನ್ನು ಕೆಲವರು ಟೀಕೆಯನ್ನೂ ಸಮಪ್ರಮಾಣದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಇಲ್ಲೊಬ್ಬರು ಚಾಯ್​ವಾಲಾ ಒಂದು ಹೆಜ್ಜೆ ಮುಂದೆ ಹೋಗಿ ಮೋದಿಯ ಗಡ್ಡಕ್ಕೆ ಟಾಂಗ್ ಕೊಟ್ಟಿದ್ದಾರೆ. ಪ್ರಧಾನಿಗೆ 100ರೂಪಾಯಿ ಮನಿ ಆರ್ಡರ್ ಮಾಡಿರುವ ಮಹಾರಾಷ್ಟ್ರದ ಟೀ ವ್ಯಾಪಾರಿಯೊಬ್ಬರು ಅದರೊಂದಿಗೆ ಪತ್ರವೊಂದನ್ನು ಬರೆದು ಗಡ್ಡ ತೆಗೆಸುವಂತೆ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ಒಂದೂವರೆ ವರ್ಷದಲ್ಲಿ ಅಸಂಘಟಿತ ವಲಯಗಳು ಕೊರೊನಾ ಲಾಕ್​ಡೌನ್​ನಿಂದ ಬಹುದೊಡ್ಡ ಹೊಡೆತ ಅನುಭವಿಸಿದ್ದು, ಈ ಬೆಳವಣಿಗೆಗಳಿಂದ ಬೇಸರಗೊಂಡ ಅನಿಲ್​ ಮೋರ್ ಎಂಬ ಚಹಾದಂಗಡಿ ಮಾಲೀಕರು ಮೋದಿಗೆ ಪತ್ರ ಬರೆದಿದ್ದಾರೆ. ಇಂದಾಪುರ್ ರಸ್ತೆಯ ಸಮೀಪ ಖಾಸಗಿ ಆಸ್ಪತ್ರೆಯೊಂದರ ಎದುರು ಚಹಾದಂಗೆಇ ಇಟ್ಟುಕೊಂಡಿರು ಅನಿಲ್​, ಮೋದಿ ತಮ್ಮ ಗಡ್ಡವನ್ನು ಬಹಳ ಸೊಗಸಾಗಿ ಬೆಳೆಸಿದ್ದಾರೆ. ಆದರೆ, ವಾಸ್ತವವಾಗಿ ಅವರು ಏನನ್ನಾದರೂ ಬೆಳೆಸಬೇಕೆಂದಿದ್ದರೆ ಅದು ಉದ್ಯೋಗಾವಕಾಶಗಳಾಗಿದೆ. ಈ ದೇಶದ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸಲು ಯೋಚಿಸಬೇಕು. ತ್ವರಿತವಾಗಿ ಜನರಿಗೆ ಕೊರೊನಾ ಲಸಿಕೆ ವಿತರಿಸುವತ್ತ ಗಮನ ನೀಡಬೇಕು. ಈಗಿರುವ ವೈದ್ಯಕೀಯ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಲು ಪ್ರಯತ್ನಿಸಬೇಕು. ಎರಡು ಲಾಕ್​ಡೌನ್​ಗಳಿಂದ ಜನರು ಅನುಭವಿಸಿದ ಸಂಕಷ್ಟಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲಕ್ಕೂ ಮಿಗಿಲಾಗಿ ಪ್ರಧಾನ ಮಂತ್ರಿ ಹುದ್ದೆಗೆ ಈ ದೇಶದಲ್ಲಿ ಅತ್ಯುನ್ನತ ಸ್ಥಾನಮಾನವಿದೆ. ನನಗೆ ನಮ್ಮ ಪ್ರಧಾನಿಗಳ ಬಗ್ಗೆ ಅತ್ಯಂತ ಗೌರವ ಹಾಗೂ ಮೆಚ್ಚುಗೆ ಇದೆ. ನನಗೆ ದೇಶದ ಪ್ರಧಾನಿಯನ್ನು ನೋಯಿಸುವ ಉದ್ದೇಶ ಖಂಡಿತವಾಗಿಯೂ ಇಲ್ಲ. ಆದರೆ, ಅವರು ತಮ್ಮ ಗಡ್ಡವನ್ನು ತೆಗೆಸಬೇಕು ಎಂದು ಮನವಿ ಮಾಡಿ 100ರೂ. ಕಳುಹಿಸುತ್ತಿದ್ದೇನೆ. ಇದು ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಜನರು ದಿನೇ ದಿನೇ ಅನುಭವಿಸುತ್ತಿರುವ ಕಷ್ಟವನ್ನು ನೀಗಿಸಲು ಪ್ರಧಾನಿಗಳ ಗಮನ ಸೆಳೆಯುವ ಪ್ರಯತ್ನ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಪತ್ರದಲ್ಲಿ ಅನಿಲ್​ ಮೋರ್ ಕೆಲ ವಿಚಾರಗಳನ್ನು ಪ್ರಸ್ತಾಪಿಸಿದ್ದು, ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ 5 ಲಕ್ಷ ರೂ. ಹಾಗೂ ಕೊರೊನಾ ಲಾಕ್​ಡೌನ್​ನಿಂದ ಸಂಕಷ್ಟ ಅನುಭವಿಸುತ್ತಿರುವ ಕುಟುಂಬಗಳಿಗೆ 30ಸಾವಿರ ರೂ. ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ನರೇಂದ್ರ ಮೋದಿ ಗಡ್ಡ ಬಿಟ್ಟರೆ ರವೀಂದ್ರನಾಥ್​ ಠಾಗೋರ್​ ಆಗುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯ 

ಮುಖ ತೋರಿಸಲಾಗದೇ ಪ್ರಧಾನಿ ಮೋದಿ ಗಡ್ಡ ಬಿಟ್ಟಿದ್ದಾರೆ; ಮಾಜಿ ಸಿಎಂ ಸಿದ್ದರಾಮಯ್ಯ ಕುಹಕ

Published On - 8:37 am, Thu, 10 June 21