Coronavirus Cases in India: ಸತತ ಮೂರನೇ ದಿನ 1 ಲಕ್ಷಕ್ಕಿಂತ ಕಡಿಮೆ ಹೊಸ ಕೊವಿಡ್ ಪ್ರಕರಣ, 6148 ಮಂದಿ ಸಾವು

Covid 19: ಸಚಿವಾಲಯದ ಅಂಕಿ ಅಂಶಗಳ ಪ್ರಕಾರ 1,51,367 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ಚೇತರಿಸಿಕೊಂಡವರ ಸಂಖ್ಯೆ 27,655,493 ಕ್ಕೆ ಆಗಿದ್ದು, ಚೇತರಿಕೆಯ ಪ್ರಮಾಣವು ಶೇ 94.76% ಕ್ಕೆ ಏರಿದೆ.

Coronavirus Cases in India: ಸತತ ಮೂರನೇ ದಿನ 1 ಲಕ್ಷಕ್ಕಿಂತ ಕಡಿಮೆ ಹೊಸ ಕೊವಿಡ್ ಪ್ರಕರಣ, 6148 ಮಂದಿ ಸಾವು
ಹೈದರಾಬಾದ್​ನಲ್ಲಿ ಪೊಲೀಸರಿಂದ ಕೊರೊನಾ ಜಾಗೃತಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 10, 2021 | 10:48 AM

ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಕೊವಿಡ್ ನಿಂದ 6148 ಮಂದಿಸಾವಿಗೀಡಾಗಿದ್ದು, ದೇಶದಲ್ಲಿ ಸಾವಿನ ಸಂಖ್ಯೆ 3,59,676 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ಒಂದೇ ದಿನದಲ್ಲಿ ಕೊವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಭಾರತದಲ್ಲಿ ದಾಖಲಾದ ಅತಿ ಹೆಚ್ಚು ಸಾವು ಇದಾಗಿದೆ. ಈ ಅವಧಿಯಲ್ಲಿ 94,052 ಜನರು ಪಾಸಿಟಿವ್ ಪರೀಕ್ಷೆ ನಡೆಸಿದ್ದು  ಹೊಸ ಪ್ರಕರಣಗಳ ಸಂಖ್ಯೆ ಸತತ ಮೂರನೇ ದಿನ 100,000 ಕ್ಕಿಂತಲೂ ಕಡಿಮೆಯಾಗಿದೆ. ಈ ಇತ್ತೀಚಿನ ಏಕ-ದಿನದ ಪ್ರಕರಣ ಏರಿಕೆಯೊಂದಿಗೆ ಭಾರತದ ಒಟ್ಟು ಕೊವಿಡ್ -19 ರೋಗಿಳ ಸಂಖ್ಯೆ 2,91,83,121 ಕ್ಕೆ ಏರಿದೆ.

ಸಚಿವಾಲಯದ ಅಂಕಿ ಅಂಶಗಳ ಪ್ರಕಾರ 1,51,367 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ಚೇತರಿಸಿಕೊಂಡವರ ಸಂಖ್ಯೆ 27,655,493 ಕ್ಕೆ ಆಗಿದ್ದು, ಚೇತರಿಕೆಯ ಪ್ರಮಾಣವು ಶೇ 94.76% ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು 11,67,952 ಕ್ಕೆ ಇಳಿದಿದ್ದು ಇದು 63,463 ಪ್ರಕರಣಗಳ ಕುಸಿತವಾಗಿದೆ ಮತ್ತು ಪ್ರಸ್ತುತ 11,67,952 ರಷ್ಟಿದೆ. ಇದು ಒಟ್ಟು ಸಕಾರಾತ್ಮಕ ಪ್ರಕರಣಗಳ ಶೇ 4ರಷ್ಟಿದೆ. ಬುಧವಾರ ಬಿಹಾರದಲ್ಲಿ 20 ಮಂದಿ ಸಾವಿಗೀಡಾಗಿದ್ದುಒಟ್ಟಾರೆ ಸಾವಿನ ಸಂಖ್ಯೆ 5,478 ಆಗಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಜೂನ್ 9 ರಂದು ಕೊವಿಡ್ -19 ಗಾಗಿ ಪರೀಕ್ಷಿಸಿದ ಮಾದರಿಗಳ ಸಂಖ್ಯೆಯನ್ನು 2,004,690. ಜೂನ್ 8 ರಂದು 1,985,967 ಪರೀಕ್ಷೆಗಳನ್ನು ಮಾಡಲಾಗಿದೆ. ಈವರೆಗೆ ಒಟ್ಟು 37,21,98,253 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ಹೇಳಿದೆ.

ಜೂನ್ 8 ರಂದು, ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ 24 ಗಂಟೆಗಳಲ್ಲಿ 86,498 ಹೊಸ ಸೋಂಕುಗಳು ವರದಿ ಆಗಿದೆ. ಏಪ್ರಿಲ್ 6 ರ ನಂತರ ಇದು ಮೊದಲ ಬಾರಿಗೆ ದೇಶದ ಕೊವಿಡ್ -19 ಮೊತ್ತವು ಒಂದೇ ದಿನದಲ್ಲಿ 100,000 ಕ್ಕಿಂತ ಕಡಿಮೆ ಹೊಸ ಪ್ರಕರಣಗಳನ್ನು ಸೇರಿಸಿದೆ. ಒಂದು ದಿನದ ನಂತರ, ಹೊಸ ಪ್ರಕರಣಗಳ ಸಂಖ್ಯೆ ಸ್ವಲ್ಪಮಟ್ಟಿಗೆ 92,596 ಕ್ಕೆ ಏರಿತು. ಎರಡು ದಿನಗಳಲ್ಲಿ ದೈನಂದಿನ ಸಾವು ಸಂಖ್ಯೆ ಕ್ರಮವಾಗಿ 2219 ಮತ್ತು 2123 ಆಗಿದೆ.

ಇದನ್ನೂ ಓದಿ: ಕೊವಿಡ್ ಪರಿಸ್ಥಿತಿ ಆಧರಿಸಿ ಅನ್​ಲಾಕ್ ನಿರ್ಧಾರ: ಕಂದಾಯ ಸಚಿವ ಆರ್ ಅಶೋಕ್

ಇದನ್ನೂ ಓದಿ :  ಕೊರೊನಾ ಲಸಿಕೆ ಬೌದ್ಧಿಕ ಆಸ್ತಿ ಹಕ್ಕು ವಿನಾಯಿತಿ ಬಗ್ಗೆ ಮಾತುಕತೆಗೆ ಸಮ್ಮತಿಸಿದ ವಿಶ್ವ ವ್ಯಾಪಾರ ಸಂಘಟನೆ

(India saw a massive jump of 6148 new Covid-19 deaths coronavirus cases below 100k for 3rd straight day)

Published On - 10:45 am, Thu, 10 June 21