ಕೊವಿಡ್ ಮಾರ್ಗಸೂಚಿ ಪುನರ್ಪರಿಶೀಲಿಸಿದ ಡಿಜಿಎಚ್ಎಸ್: 5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಮಾಸ್ಕ್ ಅಗತ್ಯವಿಲ್ಲ
DGHS Guidelines: ಆರೋಗ್ಯ ಸೇವೆಗಳ ನಿರ್ದೇಶನಾಲಯ (ಡಿಜಿಹೆಚ್ಎಸ್) ಮಾರ್ಗಸೂಚಿಗಳ ಪ್ರಕಾರ, 5 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮಾಸ್ಕ್ ಶಿಫಾರಸು ಮಾಡುವುದಿಲ್ಲ. 6-11 ವರ್ಷ ವಯಸ್ಸಿನ ಮಕ್ಕಳು ಪೋಷಕರು ಮತ್ತು ವೈದ್ಯರ ಮೇಲ್ವಿಚಾರಣೆಯಲ್ಲಿ ಮಾಸ್ಕ್ ಧರಿಸಬಹುದು.
ದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿರುವ ಆರೋಗ್ಯ ಸೇವೆಗಳ ನಿರ್ದೇಶನಾಲಯ ( ಡಿಜಿಎಚ್ಎಸ್) ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೊರೊನಾವೈರಸ್ ರೋಗವನ್ನು ತಡೆಗಟ್ಟಲು ಮಾಸ್ಕ್ ಧರಿಸುವುದು ಬೇಡ. ಆದರೆ ಇದು ವಯಸ್ಕರಿಗೆ ಅಗತ್ಯವೆಂದು ಪರಿಗಣಿಸಲಾಗಿದೆ. ಆರು ವರ್ಷದಿಂದ 11 ವರ್ಷದೊಳಗಿನ ಮಕ್ಕಳು ಮಾಸ್ಕ್ ಧರಿಸಬಹುದು. ಆದರೆ ಪೋಷಕರು ಮತ್ತು ಸಲಹಾ ವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ಎಂದು ಮಾರ್ಗಸೂಚಿ ಬಗ್ಗೆ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇತ್ತೀಚಿನ ಶಿಫಾರಸುಗಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕೊರೊನಾವೈರಸ್ ರೋಗ ನಿರ್ವಹಣೆಗೆ ಸಂಬಂಧಿಸಿದ್ದಾಗಿವೆ.
ಆರೋಗ್ಯ ಸೇವೆಗಳ ನಿರ್ದೇಶನಾಲಯ (ಡಿಜಿಎಚ್ಎಸ್) ಮಾರ್ಗಸೂಚಿಗಳ ಪ್ರಕಾರ, 5 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮಾಸ್ಕ್ ಶಿಫಾರಸು ಮಾಡುವುದಿಲ್ಲ. 6-11 ವರ್ಷ ವಯಸ್ಸಿನ ಮಕ್ಕಳು ಪೋಷಕರು ಮತ್ತು ವೈದ್ಯರ ಮೇಲ್ವಿಚಾರಣೆಯಲ್ಲಿ ಮಾಸ್ಕ್ ಧರಿಸಬಹುದು. ಅದೇ ವೇಳೆ ಡಿಜಿಎಚ್‌ಎಸ್ ಹೊರಡಿಸಿದ ಹೊಸ ಮಾರ್ಗಸೂಚಿಗಳ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ರೆಮ್‌ಡೆಸಿವಿರ್ ಎಂಬ ಆಂಟಿವೈರಲ್ ಔಷಧಿಯನ್ನು ಬಳಸದಂತೆ ಶಿಫಾರಸು ಮಾಡಿದೆ, ಈ ವಯಸ್ಸಿನ ಮಕ್ಕಳಲ್ಲಿ ಎಚ್‌ಆರ್‌ಸಿಟಿ ಇಮೇಜಿಂಗ್ ಅಗತ್ಯವಿದ್ದರೆ ಮಾತ್ರ ಬಳಸಲು ಹೇಳಿದೆ.
According to the guidelines issued by the Directorate General of Health Services (DGHS) for the management of #COVID19 among children below 18 years of age, Remdesivir has not been recommended and rational use of HRCT imaging has been suggested. pic.twitter.com/Ysv8ooxD0Y
— ANI (@ANI) June 10, 2021
ಕೊರೊನಾವೈರಸ್ ಕಾಯಿಲೆಗೆ ಸಂಬಂಧಿಸಿದಂತೆ ಡಿಜಿಹೆಚ್ಎಸ್ ತನ್ನ ಕ್ಲಿನಿಕಲ್ ಮ್ಯಾನೇಜ್ಮೆಂಟ್ ಪ್ರೋಟೋಕಾಲ್ ಗಳನ್ನು ಪರಿಷ್ಕರಿಸುತ್ತಿದೆ. ಮೂರು ದಿನಗಳ ಹಿಂದೆ ತನ್ನ ನವೀಕರಿಸಿದ ಸುತ್ತೋಲೆಯಲ್ಲಿ, ಜ್ವರ ಮತ್ತು ಶೀತವನ್ನು ಹೊರತುಪಡಿಸಿ, ಲಕ್ಷಣರಹಿತ ಮತ್ತು ಸೌಮ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಗ್ಯ ಸಚಿವಾಲಯದ ಅಡಿಯಲ್ಲಿರುವ ಎಲ್ಲಾ ಔಷಧಿಗಳನ್ನು ಕೈಬಿಡಲಾಯಿತು. ವಯಸ್ಕರಲ್ಲಿ ಕೊವಿಡ್ -19 ಸೂಕ್ತ ನಡವಳಿಕೆಯನ್ನು ಅನುಸರಿಸುವ ಪ್ರಾಮುಖ್ಯತೆಯನ್ನು ಇದು ಒತ್ತಿಹೇಳಿತು. ಮಾಸ್ಕ್ ಧರಿಸಿ ದೈಹಿಕ ದೂರ, ಕೈ ನೈರ್ಮಲ್ಯ ಮತ್ತು ಕೆಮ್ಮುವಾಗ ಶಿಷ್ಟಾಚಾರಗಳನ್ನು ಅನುಸರಿಸಿ. ಅವುಗಳನ್ನು ಲಕ್ಷಣರಹಿತ, ಸೌಮ್ಯ, ಮಧ್ಯಮ ಮತ್ತು ತೀವ್ರ ರೋಗಿಗಳು ಅನುಸರಿಸಬೇಕು ಎಂದು ಹೇಳಿದೆ.
As per the Directorate General of Health Services (DGHS) guidelines, mask is not recommended for children of 5 years of age or below; children aged 6-11 years may wear a mask under supervision of parents and doctor. #COVID19
— ANI (@ANI) June 10, 2021
ಮೇ 27 ರಂದು ಡಿಜಿಎಚ್‌ಎಸ್ ಹೊರಡಿಸಿದ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ ರೋಗಲಕ್ಷಣವಿಲ್ಲದ ಅಥವಾ ಸ್ವಲ್ಪ ರೋಗಲಕ್ಷಣದ ಕೊವಿಡ್ -19 ರೋಗಿಗಳಿಗೆ ವೈದ್ಯರು ಸೂಚಿಸಿ ಹೈಡ್ರಾಕ್ಸಿಕ್ಲೋರೋಕ್ವಿನ್, ಐವರ್ಮೆಕ್ಟಿನ್, ಡಾಕ್ಸಿಸೈಕ್ಲಿನ್, ಜಿಂಕ್, ಮಲ್ಟಿವಿಟಾಮಿನ್, ಸೇರಿದಂತೆ ಎಲ್ಲಾ ಔಷಧಿಗಳನ್ನು ಕೈಬಿಡಲಾಗಿದೆ. ಕೊವಿಡ್ -19 ರೋಗಿಗಳಿಗೆ ಸಿಟಿ ಸ್ಕ್ಯಾನ್‌ಗಳಂತಹ ಅನಗತ್ಯ ಪರೀಕ್ಷೆಗಳನ್ನು ಶಿಫಾರಸು ಮಾಡದಂತೆ ವೈದ್ಯರನ್ನು ಕೋರಲಾಗಿದೆ.
ಇದನ್ನೂ ಓದಿ: Coronavirus Cases in India: ಸತತ ಮೂರನೇ ದಿನ 1 ಲಕ್ಷಕ್ಕಿಂತ ಕಡಿಮೆ ಹೊಸ ಕೊವಿಡ್ ಪ್ರಕರಣ, 6148 ಮಂದಿ ಸಾವು
ಇದನ್ನೂ ಓದಿ: ಹುಲಿ-ಸಿಂಹಗಳಲ್ಲಿ ಕೊರೊನಾ ವೈರಸ್ ಕಾಣಿಸಿಕೊಳ್ಳುತ್ತಿರಲು ಕಾರಣವೇನು? ಬೆಕ್ಕುಗಳಿಗೇಕೆ ಅತಿ ಹೆಚ್ಚು ಕೊವಿಡ್ 19 ಅಪಾಯ?
(Wearing masks to prevent coronavirus disease not recommended for children below five DGHS guidelines)