ಮಕ್ಕಳಿಗೆ ಕೊರೊನಾ ಬಂದರೆ 6 ನಿಮಿಷದ ನಡಿಗೆ ಸೂತ್ರ ಮತ್ತು ಈ ಕೆಳಕಂಡ ಚಿಕಿತ್ಸಾ ವಿಧಾನ ಅನುಸರಿಸಿ; ಕೇಂದ್ರದಿಂದ ನೂತನ​ ಮಾರ್ಗಸೂಚಿ ಪ್ರಕಟ

Guidelines to treat Children: ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟರೂ ಯಾವುದೇ ಕಾರಣಕ್ಕೂ ರೆಮ್​ಡಿಸಿವಿರ್ ಬಳಕೆ ಮಾಡುವುದು ಬೇಡ. ಅಲ್ಲದೇ, ವೈದ್ಯರ ನಿರ್ದೇಶನವಿಲ್ಲದೇ ಸ್ಟೀರಾಯ್ಡ್ ಬಳಕೆಯನ್ನು ಮಾಡಲೇಬಾರದು ಎಂದು ಡಿಜಿಹೆಚ್​ಎಸ್​ ಸ್ಪಷ್ಟವಾಗಿ ತಿಳಿಸಿದೆ.

ಮಕ್ಕಳಿಗೆ ಕೊರೊನಾ ಬಂದರೆ 6 ನಿಮಿಷದ ನಡಿಗೆ ಸೂತ್ರ ಮತ್ತು ಈ ಕೆಳಕಂಡ ಚಿಕಿತ್ಸಾ ವಿಧಾನ ಅನುಸರಿಸಿ; ಕೇಂದ್ರದಿಂದ ನೂತನ​ ಮಾರ್ಗಸೂಚಿ ಪ್ರಕಟ
ಪ್ರಾತಿನಿಧಿಕ ಚಿತ್ರ (ಕೃಪೆ: unicef.org)
Follow us
TV9 Web
| Updated By: Skanda

Updated on:Jun 10, 2021 | 7:29 AM

ದೆಹಲಿ: ಕೊರೊನಾ ಸೋಂಕಿಗೆ ಒಳಗಾದ ಮಕ್ಕಳಿಗೆ ಚಿಕಿತ್ಸೆ ನೀಡುವ ವಿಚಾರವಾಗಿ ಕೇಂದ್ರ ಆರೋಗ್ಯ ಸೇವೆಗಳ ನಿರ್ದೇಶನಾಲಯದಿಂದ (DGHS) ನೂತನ ಮಾರ್ಗಸೂಚಿ ಹೊರಡಿಸಲಾಗಿದೆ. ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡರೆ ಯಾವ ರೀತಿಯ ಚಿಕಿತ್ಸೆ ನೀಡಬೇಕು, ಗಂಭೀರ ಮತ್ತು ಸಾಧಾರಣ ಸೋಂಕಿಗೆ ಹೇಗೆ ಪ್ರತ್ಯೇಕ ಚಿಕಿತ್ಸಾ ವಿಧಾನ ಅನುಸರಿಸಬೇಕು, ಯಾವೆಲ್ಲಾ ಔಷಧಗಳನ್ನು ಮಕ್ಕಳಿಗೆ ನೀಡಕೂಡದು ಎನ್ನುವ ಬಗ್ಗೆ ಇದರಲ್ಲಿ ಉಲ್ಲೇಖಿಸಲಾಗಿದ್ದು, ಮೂರನೇ ಅಲೆಗೂ ಮುನ್ನವೇ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಹೆಚ್ಚು ಕಾಣಿಸಿಕೊಳ್ಳುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸದರಿ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.

ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟರೂ ಯಾವುದೇ ಕಾರಣಕ್ಕೂ ರೆಮ್​ಡಿಸಿವಿರ್ ಬಳಕೆ ಮಾಡುವುದು ಬೇಡ ಎಂದು ಡಿಜಿಹೆಚ್​ಎಸ್​ ಸ್ಪಷ್ಟವಾಗಿ ತಿಳಿಸಿದೆ. ಅಲ್ಲದೇ, ಸ್ಟೀರಾಯ್ಡ್​ ಬಳಕೆಯ ಕುರಿತಾಗಿಯೂ ಎಚ್ಚರಿಸಿಲಾಗಿದ್ದು, ವೈದ್ಯರ ನಿರ್ದೇಶನವಿಲ್ಲದೇ ಸ್ಟೀರಾಯ್ಡ್ ಬಳಕೆಯನ್ನು ಮಾಡಲೇಬಾರದು. ಆಸ್ಪತ್ರೆಯಲ್ಲೂ ಮಕ್ಕಳಿಗೆ ಸ್ಟೀರಾಯ್ಡ್ ನೀಡುವಾಗ ಅನಿವಾರ್ಯತೆ ಇದೆಯೇ ಎಂದು ಗಮನಿಸಿ ಸೂಕ್ತ ಡೋಸ್​ ಮಾತ್ರ ಬಳಸಬೇಕು.ಇದರ ಹೊರತಾಗಿ ಮನೆಯಲ್ಲಿಯೇ ಇರಿಸಿ ಸ್ಟೀರಾಯ್ಡ್ ನೀಡುವುದನ್ನು ಖಡಾಖಂಡಿತವಾಗಿ ತಡೆಯಬೇಕು ಎಂದು ಹೇಳಲಾಗಿದೆ.

ಗುಣಲಕ್ಷಣವಿಲ್ಲದ ಮತ್ತು ಕಡಿಮೆ ರೋಗ ಲಕ್ಷಣ ಇರೋ ಮಕ್ಕಳಿಗೆ ಸ್ಟಿರಾಯ್ಡ್​ಗಳನ್ನ ನೀಡುವುದನ್ನ ನಿರ್ಬಂಧಿಸುವ ಜತೆಗೆ, ಅಗತ್ಯವಿದ್ದರೆ ಮಾತ್ರ ಹೆಚ್​ಆರ್​ಸಿಟಿ ಮಾಡಿಸಲು ವೈದ್ಯರು ಸಲಹೆ ನೀಡಬೇಕು, ಅನಗತ್ಯವಾಗಿ ಹೆಚ್​ಆರ್​ಸಿಟಿ ಮಾಡಿಸಕೂಡದು ಎನ್ನುವುದನ್ನು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಬಹುಮುಖ್ಯವಾಗಿ ಆ್ಯಂಟಿಮೈಕ್ರೋಬಿಯಲ್ ಥೆರಪಿ ಮತ್ತು ಪ್ರೊಫಿಲ್ಯಾಕ್ಸಿಸ್ ಬಳಕೆ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಗುಣಲಕ್ಷಣವಿಲ್ಲದ ಅಥವಾ ಕಡಿಮೆ ರೋಗ ಲಕ್ಷಣ ಇರುವ ಮಕ್ಕಳಿಗೆ ಈ ಔಷಧಗಳನ್ನು ನೀಡುವುದು ಬೇಡ. ಒಂದು ವೇಳೆ ಸೋಂಕು ಹೆಚ್ಚಳವಾಗಿದ್ದರೆ ಅಥವಾ ಗಂಭೀರವಾಗಿದ್ದರೆ ಸೂಕ್ತ ಚಿಕಿತ್ಸೆ ನಂತರ ವೈದ್ಯರ ಸಲಹೆಯ ಮೇರೆಗಷ್ಟೇ ನೀಡಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಕಡಿಮೆ ಗುಣಲಕ್ಷಣ ಹೊಂದಿರುವ ಮಕ್ಕಳಿಗೆ ಪ್ಯಾರಸಿಟಮಾಲ್ ನೀಡಬಹುದು. ಅದು ಕೂಡಾ ಮಕ್ಕಳ ದೇಹದ ತೂಕಕ್ಕೆ ತಕ್ಕಂತೆ ನೀಡಬೇಕಾಗಿದ್ದು, ಜ್ವರ ಹಾಗೂ ಗಂಟಲು ಸಮಸ್ಯೆ ನಿವಾರಿಸುವ ಸಲುವಾಗಿ ಪ್ರತಿ 4ರಿಂದ 6ಗಂಟೆಗೊಮ್ಮೆ ಕೊಡಬಹುದು ಎಂದು ಸಲಹೆ ನೀಡಲಾಗಿದೆ. ಅದರೊಂದಿಗೆ, ಕಫ ಕಾಣಿಸಿಕೊಂಡರೆ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದು ಉತ್ತಮ ಎಂದು ಹೇಳಲಾಗಿದೆ.

ಮಗುವಿನ ದೇಹದಲ್ಲಿ ಕೊರೊನಾ ಸೋಂಕು ತುಸು ಹೆಚ್ಚಿನ ಪ್ರಭಾವ ಬೀರುತ್ತಿದೆ ಎನ್ನುವುದು ಕಂಡುಬಂದ ಕೂಡಲೇ ಆಕ್ಸಿಜನ್​ ಥೆರಪಿ ನೀಡಬೇಕು. ಮಕ್ಕಳ ಆರೋಗ್ಯದ ಮೇಲೆ ನಿಗಾ ಇಡಲು ಪಲ್ಸ್ ಆಕ್ಸಿಮೀಟರ್ ಅಳವಡಿಸುವುದು ಉತ್ತಮ. 12ವರ್ಷ ಮೇಲ್ಪಟ್ಟ ಮಕ್ಕಳನ್ನು ಪೋಷಕರ ಉಸ್ತುವಾರಿಯಲ್ಲಿ 6 ನಿಮಿಷ ನಿರಂತರವಾಗಿ ನಡೆಸುವ ಮೂಲಕ ಮೂಲಕ ದೇಹದಲ್ಲಿ ಆಕ್ಸಿಜನ್ ಮಟ್ಟ ತಿಳಿದುಕೊಳ್ಳಬಹುದು ಅಲ್ಲದೇ ಯಾವುದೇ ಸಂದರ್ಭದಲ್ಲಿ ತೀವ್ರ ತೆರನಾದ ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣವೇ ಚಿಕಿತ್ಸೆ ದೊರಕಿಸಬೇಕು ಎನ್ನುವುದನ್ನೂ ತಿಳಿಸಲಾಗಿದೆ.

ಪ್ರಮುಖ ಅಂಶಗಳನ್ನು ಇನ್ನೊಮ್ಮೆ ಗಮನಿಸಿ: ಗುಣಲಕ್ಷಣವಿಲ್ಲದ, ಕಡಿಮೆ ರೋಗ ಲಕ್ಷಣವಿರೋ ಮಕ್ಕಳಿಗೆ ಸ್ಟೀರಾಯ್ಡ್ ನಿರ್ಬಂಧ ಸ್ಟೀರಾಯ್ಡ್​​ಗಳನ್ನ ಅಗತ್ಯ ಸಮಯದಲ್ಲಿ, ಅಗತ್ಯ ಪ್ರಮಾಣದಲ್ಲಿ ಮಾತ್ರ ನೀಡಬೇಕು ಯಾವುದೇ ಕಾರಣಕ್ಕೂ ಮಕ್ಕಳಿಗೆ ರೆಮ್​ಡಿಸಿವಿರ್ ಇಂಜೆಕ್ಷನ್​ ನೀಡಬಾರದು ಮಕ್ಕಳಲ್ಲಿ ಸೋಂಕು ಹೆಚ್ಚು ಹರಡಿದ್ರೆ ಮಾತ್ರ ಆ್ಯಂಟಿ ಮೈಕ್ರೋಬಿಯಲ್ಸ್​ ಬಳಕೆ ಅಗತ್ಯವಿದ್ದರೆ ಮಾತ್ರ ಹೆಚ್​ಆರ್​ಸಿಟಿ ಮಾಡಿಸಲು ವೈದ್ಯರು ಸಲಹೆ ನೀಡಬೇಕು ಕಡಿಮೆ ಗುಣಲಕ್ಷಣ ಇರುವ ಮಕ್ಕಳಿಗೆ ದೇಹ ತೂಕಕ್ಕೆ ತಕ್ಕಂತೆ ಪ್ಯಾರಸಿಟಮಾಲ್ ಮಕ್ಕಳಲ್ಲಿ ಅಲ್ಪ ಪ್ರಮಾಣದ ಸೋಂಕು ಇದ್ರೆ ತಕ್ಷಣ ಆಕ್ಸಿಜನ್ ಥೆರಪಿ ನೀಡಿ ಸೋಂಕು ಹೆಚ್ಚಳವಾಗಿ ಉಸಿರಾಟ ತೊಂದರೆ ಆರಂಭವಾದ್ರೆ ತಕ್ಷಣ ಚಿಕಿತ್ಸೆ ನೀಡಿ ಮಕ್ಕಳಿಗೆ ಪಲ್ಸ್​ ಆಕ್ಸಿಮೀಟರ್ ಅಳವಡಿಸಿ 6 ನಿಮಿಷ ನಡಿಗೆಗೆ ಸೂಚಿಸಬೇಕು 6 ನಿಮಿಷ ನಡಿಗೆಯ ಮೂಲಕ ದೇಹದ ಆಕ್ಸಿಜನ್ ಮಟ್ಟದ ಮೇಲೆ ನಿಗಾ ವಹಿಸಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣವೇ ಚಿಕಿತ್ಸೆ ದೊರಕಿಸಬೇಕು

ಕೊರೊನಾ ಮೂರನೇ ಅಲೆ ಮಕ್ಕಳಿಗೆ ಮಾರಕವಾಗಬಹುದು ಎಂದು ಇಲ್ಲಿಯ ತನಕ ಕೆಲ ವರದಿಗಳು ತಿಳಿಸಿವೆ. ಆದರೆ, ಇದನ್ನು ನಿರಾಕರಿಸಿರುವ ಸರ್ಕಾರ ಅದನ್ನು ದೃಢವಾಗಿ ಹೇಳಲು ಯಾವುದೇ ಸ್ಪಷ್ಟ ಆಧಾರಗಳಿಲ್ಲ. ಆದರೂ, ಪರಿಸ್ಥಿತಿ ಹದಗೆಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ನಿಮ್ಮ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಗಮನ ವಹಿಸುತ್ತಿದ್ದೀರಾ? ಎಳೆ ಮನಸ್ಸುಗಳಿಗೆ ಗಾಯವಾಗದಂತೆ ನೋಡಿಕೊಳ್ಳುವುದು ಮುಖ್ಯ 

ಕೊವಿಡ್​ 19 ಮೂರನೇ ಅಲೆ ಮಕ್ಕಳಿಗೇ ಬಾಧಿಸುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷಿಯೂ ಇಲ್ಲ: ಡಾ.ವಿಕೆ.ಪೌಲ್​

Published On - 7:28 am, Thu, 10 June 21

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್