Yogi Adityanath ಪ್ರಧಾನಿ ಮೋದಿ ಜತೆ ಯೋಗಿ ಆದಿತ್ಯನಾಥ ಮಾತುಕತೆ ; ಉತ್ತರ ಪ್ರದೇಶದಲ್ಲಿನ ಬದಲಾವಣೆಗಳ ಬಗ್ಗೆ ಚರ್ಚೆ

Yogi Adityanath ಪ್ರಧಾನಿ ಮೋದಿ ಜತೆ ಯೋಗಿ ಆದಿತ್ಯನಾಥ ಮಾತುಕತೆ ; ಉತ್ತರ ಪ್ರದೇಶದಲ್ಲಿನ ಬದಲಾವಣೆಗಳ ಬಗ್ಗೆ ಚರ್ಚೆ
ಮೋದಿ ಜತೆ ಯೋಗಿ ಆದಿತ್ಯನಾಥ

Yogi-Modi Meeting: ಇಂದು, ಗೌರವಾನ್ವಿತ ಪಿಎಂ ಮೋದಿಯವರನ್ನು ಭೇಟಿಯಾಗಿ ಅವರ ಮಾರ್ಗದರ್ಶನ ಪಡೆಯುವ ಭಾಗ್ಯ ನನಗೆ ದೊರೆತಿದೆ. ಸಭೆ ಮತ್ತು ಸಲಹೆಗಾರರ ಕಾರ್ಯನಿರತ ವೇಳಾಪಟ್ಟಿಯಿಂದ ಸಮಯ ತೆಗೆದುಕೊಂಡಿದ್ದಕ್ಕಾಗಿ ನಾನು ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದು ಯೋಗಿ ಆದಿತ್ಯನಾಥ ಟ್ವೀಟ್.

TV9kannada Web Team

| Edited By: Rashmi Kallakatta

Jun 11, 2021 | 5:43 PM

ದೆಹಲಿ: : ಉತ್ತರಪ್ರದೇಶದಲ್ಲಿ ಕೇಳಿ ಬಂದಿರುವ ನಾಯಕತ್ವ ಬದಲಾವಣೆ ವದಂತಿಗಳ ನಡುವೆಯೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ದೆಹಲಿಯಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಬಿಜೆಪಿ ಪಕ್ಷದಲ್ಲಿಯೇ ಯೋಗಿ ವಿರುದ್ಧ ಗೊಣಗಾಟಗಳು ಹೆಚ್ಚುತ್ತಿವೆ ಮತ್ತು ಸಾಂಕ್ರಾಮಿಕ ರೋಗವನ್ನು ಸರ್ಕಾರ ಸರಿಯಾಗಿ ನಿಭಾಯಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಪ್ರಧಾನಿ ಮೋದಿಯವರ ನಿವಾಸದಲ್ಲಿ ನಡೆದ ಸಭೆ ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು. “ಇಂದು, ಗೌರವಾನ್ವಿತ ಪಿಎಂ ಮೋದಿಯವರನ್ನು ಭೇಟಿಯಾಗಿ ಅವರ ಮಾರ್ಗದರ್ಶನ ಪಡೆಯುವ ಭಾಗ್ಯ ನನಗೆ ದೊರೆತಿದೆ. ಸಭೆ ಮತ್ತು ಸಲಹೆಗಾರರ ಕಾರ್ಯನಿರತ ವೇಳಾಪಟ್ಟಿಯಿಂದ ಸಮಯ ತೆಗೆದುಕೊಂಡಿದ್ದಕ್ಕಾಗಿ ನಾನು ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತೇನೆ” ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಸ್ವಲ್ಪ ಸಮಯದ ನಂತರ, ಯೋಗಿ ಆದಿತ್ಯನಾಥ ಅವರು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಅವರ ನಿವಾಸಕ್ಕೆ ತೆರಳಿ ಅಲ್ಲಿ ಸುಮಾರು ಒಂದೂವರೆ ಒಂಟೆಗಳ ಕಾಲ ಚರ್ಚೆ ನಡೆಸಿದರು.

“ಉತ್ತರ ಪ್ರದೇಶದ ಯಶಸ್ವಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿ ಮಾಡಿದ್ದೇನೆ” ಎಂದು ಜೆಪಿ ನಡ್ಡಾ ಟ್ವೀಟ್ ಮಾಡಿದ್ದಾರೆ.

ಯೋಗಿ ಆದಿತ್ಯನಾಥ ಅವರು ನಿನ್ನೆಯಿಂದ ದೆಹಲಿ ನಾಯಕತ್ವದೊಂದಿಗೆ ಒಂದರ ಹಿಂದೆ ಮತ್ತೊಂದು ಸಭೆ ನಡೆಸುತ್ತಿದ್ದಾರೆ. ಗುರುವಾರ ಅವರು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ 90 ನಿಮಿಷಗಳ ಸುದೀರ್ಘ ಸಭೆ ನಡೆಸಿದರು. ಉತ್ತರಪ್ರದೇಶ ತನ್ನ ಮುಂದಿನ ಸರ್ಕಾರವನ್ನು ಆಯ್ಕೆ ಮಾಡಲು ಒಂದು ವರ್ಷಕ್ಕಿಂತ ಕಡಿಮೆ ಸಮಯ ಬಾಕಿ ಇರುವಾಗ, ಬಿಜೆಪಿ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ಕ್ರಮಗಳನ್ನು ಚುರುಕುಗೊಳಿಸಿದೆ.

ಯೋಗಿ ಆದಿತ್ಯನಾಥ ಅವರನ್ನು ಬದಲಿಸಲು ಪಕ್ಷ ಬಯಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ, ಆದರೆ ಇತರ ಬದಲಾವಣೆಗಳ ಸಾಧ್ಯತೆ ಇದೆ.

ಕಳೆದ ವಾರ ಬಿಜೆಪಿಯ ಹಿರಿಯ ಮುಖಂಡ ಬಿ.ಕೆ.ಸಂತೋಷ್ ನೇತೃವದ ಕೇಂದ್ರ ಸಮಿತಿ ಉತ್ತರ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಸಚಿವರು, ಶಾಸಕರು, ಸಂಸದರು ಮತ್ತು ಮುಖ್ಯಮಂತ್ರಿಗಳೊಂದಿಗಿನ ಸಭೆ ನಡೆಸಿ ಪ್ರತಿಕ್ರಿಯೆ ತೆಗೆದುಕೊಂಡಿತ್ತು.

ಅವರ ಮೌಲ್ಯಮಾಪನವನ್ನು ನಡೆಸಿದ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಹಿರಿಯ ಮುಖಂಡ ದತ್ತಾತ್ರೇಯ ಹೊಸಬಾಳೆ ಅವರು ಫೀಡ್ ಬ್ಯಾಕ್ ಸೆಷನ್ ಗೆ ಶಿಫಾರಸು ಮಾಡಿದ್ದರು.

ಜಾತಿ ಮತ್ತು ಪ್ರಾದೇಶಿಕ ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಸಚಿವರನ್ನು ಸೇರಿಸುವುದು ಬಿಜೆಪಿಯ ತಕ್ಷಣದ ಪರಿಹಾರಗಳಲ್ಲಿ ಒಂದಾಗಿದೆ ಎಂದು ಮೂಲಗಳು ತಿಳಿಸಿವೆ.  ಕೇಂದ್ರ ನಾಯಕರೊಂದಿಗೆ ಯೋಗಿ ಆದಿತ್ಯನಾಥ ಅವರ ಮಾತುಕತೆ ಈ ಪ್ರಕ್ರಿಯೆಯತ್ತ ಗಮನ ಹರಿಸುವ ಸಾಧ್ಯತೆಯಿದೆ.

ಸಾಂಕ್ರಾಮಿಕ ರೋಗವನ್ನು ಯುಪಿ ಸರ್ಕಾರ ನಿಭಾಯಿಸುವುದರಲ್ಲಿ ವಿಫಲವಾಗಿಗೆಎಂಬ ಟೀಕೆಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಬಿಜೆಪಿ ಉತ್ಸುಕವಾಗಿದೆ. ಗಂಗಾ ನದಿಯಲ್ಲಿ ತೇಲುತ್ತಿರುವ ಅಥವಾ ಅದರ ಪಕ್ಕದಲ್ಲಿ ಆಳವಿಲ್ಲದ ಸಮಾಧಿಯಲ್ಲಿ ಹೂಳಲಾದ ದೇಹಗಳ ಚಿತ್ರಗಳು ರಾಜ್ಯದಲ್ಲಿನ ಬಿಕ್ಕಟ್ಟನ್ನು ಎತ್ತಿ ತೋರಿಸಿವೆ. ಪಕ್ಷದ ಶಾಸಕರು ಮತ್ತು ಸಂಸದರು ಸಹ ತಮ್ಮ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ದೂರುತ್ತಿರುವುದು ಕೂಡಾ ಉತ್ತರ ಪ್ರದೇಶ ಸರ್ಕಾರಕ್ಕೆ ಹೊಡೆತ ನೀಡಿದೆ .

ಇದನ್ನೂ ಓದಿ:  Yogi Adityanath ದೆಹಲಿ ತಲುಪಿದ ಯೋಗಿ ಆದಿತ್ಯನಾಥ; ಪ್ರಧಾನಿ ಮೋದಿ ಜತೆ ನಾಳೆ ಭೇಟಿ ಸಾಧ್ಯತೆ

Follow us on

Related Stories

Most Read Stories

Click on your DTH Provider to Add TV9 Kannada