Yogi Adityanath ದೆಹಲಿ ತಲುಪಿದ ಯೋಗಿ ಆದಿತ್ಯನಾಥ; ಪ್ರಧಾನಿ ಮೋದಿ ಜತೆ ನಾಳೆ ಭೇಟಿ ಸಾಧ್ಯತೆ
Uttar Pradesh: ಉತ್ತರಪ್ರದೇಶದ ಉನ್ನತ ಬ್ರಾಹ್ಮಣ ಮುಖವಾದ ಜಿತಿನ್ ಪ್ರಸಾದ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ ಯೋಗಿ ದೆಹಲಿಗೆ ಬಂದಿದ್ದಾರೆ. ಚುನಾವಣೆಗೆ ಮುಂಚಿತವಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಮರುಹೊಂದಿಕೆಯಲ್ಲಿ ಜಿತಿನ್ ಪ್ರಸಾದ ಅವರು ದೊಡ್ಡ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ
ದೆಹಲಿ: ಉತ್ತರಪ್ರದೇಶದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬ ವರದಿಗಳ ನಡುವೆಯೇ ಯೋಗಿ ಆದಿತ್ಯನಾಥ ಅವರು ಇಂದು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಭೆ ನಡೆಸಲಿದ್ದಾರೆ. ಉತ್ತರ ಪ್ರದೇಶದ ಬಿಜೆಪಿಯಲ್ಲಿ ಪ್ರಕ್ಷುಬ್ಧತೆ ಪ್ರಾರಂಭವಾದ ನಂತರ ದೆಹಲಿ ನಾಯಕತ್ವದೊಂದಿಗಿನ ಅವರ ಮೊದಲ ಸಭೆ ಇದಾಗಿದೆ. ಮುಖ್ಯಮಂತ್ರಿ ಎರಡು ದಿನಗಳ ಕಾಲ ದೆಹಲಿಯಲ್ಲಿರುತ್ತಾರೆ. ಅವರು ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಮತ್ತು ಜೆ.ಪಿ ನಡ್ಡಾ ಅವರನ್ನು ನಾಳೆ ಭೇಟಿಯಾಗುವ ಸಾಧ್ಯತೆ.
ಉತ್ತರಪ್ರದೇಶದ ಉನ್ನತ ಬ್ರಾಹ್ಮಣ ಮುಖವಾದ ಜಿತಿನ್ ಪ್ರಸಾದ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ ಯೋಗಿ ದೆಹಲಿಗೆ ಬಂದಿದ್ದಾರೆ. ಚುನಾವಣೆಗೆ ಮುಂಚಿತವಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಮರುಹೊಂದಿಕೆಯಲ್ಲಿ ಜಿತಿನ್ ಪ್ರಸಾದ ಅವರು ದೊಡ್ಡ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ. ವಿಶೇಷವಾಗಿ ಯೋಗಿ ಆದಿತ್ಯನಾಥ ಸರ್ಕಾರದ ದೃಷ್ಟಿಕೋನ ವನ್ನು ಸರಿಪಡಿಸುವಲ್ಲಿ. ರಾಜ್ಯದ ಬ್ರಾಹ್ಮಣರಲ್ಲಿ ಒಂದು ಭಾಗವು ಠಾಕೂರ್ ಪರ (ಯೋಗಿ ಆದಿತ್ಯನಾಥ ಜಾತಿ) ಎಂದು ಗ್ರಹಿಸಲಾಗಿದೆ.
UP CM Yogi Adityanath to arrive in Delhi, he is likely to meet Prime Minister Narendra Modi tomorrow.
(File photo) pic.twitter.com/0Bp7WUph3X
— ANI (@ANI) June 10, 2021
ಕಳೆದ ವಾರ, ಮತ್ತೊಬ್ಬ ಬ್ರಾಹ್ಮಣ ಮುಖ ಯುಪಿಗೆ ಕಾಲಿಟ್ಟಿದ್ದಾರೆ. ಪಿಎಂ ಮೋದಿಯವರ ಆಪ್ತರಲ್ಲಿ ಒಬ್ಬರೆಂದು ಕರೆಯಲ್ಪಡುವ ಮಾಜಿ ಅಧಿಕಾರಿ ಎ.ಕೆ ಶರ್ಮಾ ಅವರಿಗೆ ರಾಜ್ಯದಲ್ಲಿ ಪ್ರಮುಖ ಪಾತ್ರ ನೀಡಲಾಗುವುದು. ಉತ್ತರಪ್ರದೇಶದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೋಗಿ ಆದಿತ್ಯನಾಥ ವಿರುದ್ಧ ಬಿಜೆಪಿ ನಾಯಕತ್ವ ಅಸಮಧಾನ ಹೊಂದಿದಂತೆ ಕಾಣುತ್ತದೆ. ಕೆಲವೇ ಕೆಲವು ಸಂಸದರು ಮತ್ತು ಶಾಸಕರು ತಮ್ಮದೇ ಸರ್ಕಾರ ಕೊವಿಡ್ ನಿರ್ವಹಣೆ ಬಗ್ಗೆ ಸಾರ್ವಜನಿಕವಾಗಿ ಟೀಕಿಸುತ್ತಿದ್ದಾರೆ.
ಕಳೆದ ವಾರ ಬಿಜೆಪಿಯ ಹಿರಿಯ ಮುಖಂಡ ಬಿ.ಕೆ.ಸಂತೋಷ್ ನೇತೃವದ ಕೇಂದ್ರ ಸಮಿತಿ ಉತ್ತರ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಸಚಿವರು, ಶಾಸಕರು, ಸಂಸದರು ಮತ್ತು ಮುಖ್ಯಮಂತ್ರಿಗಳೊಂದಿಗಿನ ಸಭೆ ನಡೆಸಿ ಪ್ರತಿಕ್ರಿಯೆ ತೆಗೆದುಕೊಂಡಿತ್ತು.
Delhi | Uttar Pradesh CM Yogi Adityanath arrives at the residence of Union Home Minister Amit Shah
He is likely to meet Prime Minister Narendra Modi tomorrow pic.twitter.com/m8Fn03Fqqt
— ANI (@ANI) June 10, 2021
ಅವರ ಮೌಲ್ಯಮಾಪನವನ್ನು ನಡೆಸಿದ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಹಿರಿಯ ಮುಖಂಡ ದತ್ತಾತ್ರೇಯ ಹೊಸಬಾಳೆ ಅವರು ಫೀಡ್ ಬ್ಯಾಕ್ ಸೆಷನ್ ಗೆ ಶಿಫಾರಸು ಮಾಡಿದ್ದರು.
ಜಾತಿ ಮತ್ತು ಪ್ರಾದೇಶಿಕ ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಸಚಿವರನ್ನು ಸೇರಿಸುವುದು ಬಿಜೆಪಿಯ ತಕ್ಷಣದ ಪರಿಹಾರಗಳಲ್ಲಿ ಒಂದಾಗಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ನಾಯಕರೊಂದಿಗೆ ಯೋಗಿ ಆದಿತ್ಯನಾಥ ಅವರ ಮಾತುಕತೆ ಈ ಪ್ರಕ್ರಿಯೆಯತ್ತ ಗಮನ ಹರಿಸುವ ಸಾಧ್ಯತೆಯಿದೆ.
ಸಾಂಕ್ರಾಮಿಕ ರೋಗವನ್ನು ಯುಪಿ ಸರ್ಕಾರ ನಿಭಾಯಿಸುವುದರಲ್ಲಿ ವಿಫಲವಾಗಿಗೆಎಂಬ ಟೀಕೆಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಬಿಜೆಪಿ ಉತ್ಸುಕವಾಗಿದೆ. ಗಂಗಾ ನದಿಯಲ್ಲಿ ತೇಲುತ್ತಿರುವ ಅಥವಾ ಅದರ ಪಕ್ಕದಲ್ಲಿ ಆಳವಿಲ್ಲದ ಸಮಾಧಿಯಲ್ಲಿ ಹೂಳಲಾದ ದೇಹಗಳ ಚಿತ್ರಗಳು ರಾಜ್ಯದಲ್ಲಿನ ಬಿಕ್ಕಟ್ಟನ್ನು ಎತ್ತಿ ತೋರಿಸಿವೆ. ಪಕ್ಷದ ಶಾಸಕರು ಮತ್ತು ಸಂಸದರು ಸಹ ತಮ್ಮ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ದೂರುತ್ತಿರುವುದು ಕೂಡಾ ಉತ್ತರ ಪ್ರದೇಶ ಸರ್ಕಾರಕ್ಕೆ ಹೊಡೆತ ನೀಡಿದೆ .
ಇದನ್ನೂ ಓದಿ: ಉತ್ತರ ಪ್ರದೇಶದ ಸಚಿವ ಸಂಪುಟ ಪುನರ್ ರಚನೆ ಊಹಾಪೋಹ ತಳ್ಳಿ ಹಾಕಿದ ಬಿಜೆಪಿ ಉಪಾಧ್ಯಕ್ಷ ರಾಧಾ ಮೋಹನ್ ಸಿಂಗ್
ಇದನ್ನೂ ಓದಿ: Jitin Prasada ಕಾಂಗ್ರೆಸ್ ನಾಯಕ, ಅನುಭವಿ ರಾಜಕಾರಣಿ ಜಿತಿನ್ ಪ್ರಸಾದ ಬಿಜೆಪಿಗೆ ಸೇರ್ಪಡೆ
Published On - 3:58 pm, Thu, 10 June 21