ಉತ್ತರ ಪ್ರದೇಶದ ಸಚಿವ ಸಂಪುಟ ಪುನರ್ ರಚನೆ ಊಹಾಪೋಹ ತಳ್ಳಿ ಹಾಕಿದ ಬಿಜೆಪಿ ಉಪಾಧ್ಯಕ್ಷ ರಾಧಾ ಮೋಹನ್ ಸಿಂಗ್

ಉತ್ತರ ಪ್ರದೇಶದ ಸಚಿವ ಸಂಪುಟ ಪುನರ್ ರಚನೆ ಊಹಾಪೋಹ ತಳ್ಳಿ ಹಾಕಿದ ಬಿಜೆಪಿ ಉಪಾಧ್ಯಕ್ಷ ರಾಧಾ ಮೋಹನ್ ಸಿಂಗ್
ರಾಜ್ಯಪಾಲರನ್ನು ಭೇಟಿ ಮಾಡಿದ ರಾಧಾ ಮೋಹನ್ ಸಿಂಗ್

Radha Mohan Singh: ಉತ್ತರ ಪ್ರದೇಶದ ಉಸ್ತುವಾರಿ ವಹಿಸಿರುವ ಸಿಂಗ್ ಅವರು ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರನ್ನು ಭಾನುವಾರ ಭೇಟಿ ಮಾಡಿದ್ದು, ಈ ಭೇಟಿ ವೈಯಕ್ತಿಕ ಆಗಿತ್ತು ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

TV9kannada Web Team

| Edited By: Rashmi Kallakatta

Jun 06, 2021 | 6:52 PM

ಲಕ್ನೋ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರದಲ್ಲಿ ಸಚಿವ ಸಂಪುಟ ಪುನರ್ ರಚನೆ ಕುರಿತಾದ ಊಹಾಪೋಹಗಳನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಾಧಾ ಮೋಹನ್ ಸಿಂಗ್ ಭಾನುವಾರ ತಳ್ಳಿಹಾಕಿದ್ದಾರೆ. ಅದೇ ವೇಳೆ ಮುಖ್ಯಮಂತ್ರಿ ಕೆಲವು ಸಚಿವರ ಹುದ್ದೆಗಳನ್ನು ಸೂಕ್ತ ಸಮಯದಲ್ಲಿ ಭರ್ತಿ ಮಾಡಬಹುದು ಎಂದು ಹೇಳಿದರು. ಉತ್ತರ ಪ್ರದೇಶದ ಉಸ್ತುವಾರಿ ವಹಿಸಿರುವ ಸಿಂಗ್ ಅವರು ಗವರ್ನರ್ ಆನಂದಿಬೆನ್ ಪಟೇಲ್ ಅವರನ್ನು ಭಾನುವಾರ ಭೇಟಿ ಮಾಡಿದ್ದು, ಈ ಭೇಟಿ ವೈಯಕ್ತಿಕ ಆಗಿತ್ತು ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಸಚಿವ ಸಂಪುಟ ಪುನರ್ ರಚನೆ ಸಾಧ್ಯತೆಯ ಬಗ್ಗೆ ಕೇಳಿದಾಗ, ಅಂಥದ್ದೇನೂ ಇಲ್ಲ ಎಂದು ಹೇಳಿದ್ದಾರೆ. ಕೆಲವು ಸಚಿವ ಸ್ಥಾನಗಳನ್ನು ತುಂಬಲು ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತಿದೆಯೇ ಎಂದು ಸುದ್ದಿಗಾರರು ಕೇಳಿದಾಗ ಕೆಲವು ಸ್ಥಾನಗಳು ಖಾಲಿ ಇವೆ ಆದರೆ ಅವು ಪ್ರಮುಖ ಸ್ಥಾನಗಳಲ್ಲ ಎಂದು ಸಿಂಗ್ ಉತ್ತರಿಸಿದ್ದಾರೆ. ಖಾಲಿ ಇರುವ ಸ್ಥಾನಗಳಿಗೆ ಸಂಬಂಧಿಸಿದಂತೆ, ಸೂಕ್ತ ಸಮಯದಲ್ಲಿ ಮುಖ್ಯಮಂತ್ರಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದರು. ಉತ್ತರಪ್ರದೇಶದಲ್ಲಿ ಬಿಜೆಪಿ ಪ್ರಬಲ ಸಂಘಟನೆ ಮತ್ತು ಅತ್ಯಂತ ಜನಪ್ರಿಯ ಸರ್ಕಾರವನ್ನು ಹೊಂದಿದೆ ಎಂದು ಸಿಂಗ್ ಹೇಳಿದರು.  ಗವರ್ನರ್ ಪಟೇಲ್ ಅವರೊಂದಿಗಿನ ಭೇಟಿಯ ಬಗ್ಗೆ ಮಾತನಾಡಿದ ಅವರು ಕೆಲವು ಸಮಯದಿಂದ ಅವರನ್ನು ಭೇಟಿಯಾಗಿರಲಿಲ್ಲ. ಹಾಗಾಗಿ ಅವರನ್ನು ಅವರನ್ನು ಭೇಟಿ ಮಾಡಲು ಬಂದಿದ್ದೇನೆ ಎಂದು ಹೇಳಿದರು.

ಉತ್ತರಪ್ರದೇಶದಲ್ಲಿ ಪಕ್ಷದ ಉಸ್ತುವಾರಿ ವಹಿಸಿಕೊಂಡ ನಂತರ ನಾನು ರಾಜ್ಯಪಾಲರನ್ನು ಭೇಟಿ ಮಾಡಿಲ್ಲ ಎಂದು ಅವರು ಹೇಳಿದರು.

ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನಾನು ಕೃಷಿ ಸಚಿವನಾಗಿದ್ದೆ. ನನಗೆ ಗುಜರಾತ್‌ನೊಂದಿಗೆ ಹಳೆಯ ಒಡನಾಟವಿತ್ತು. ಕಳೆದ ಆರು ತಿಂಗಳಲ್ಲಿ ನಾನು ಅವರನ್ನು ಭೇಟಿಯಾಗಲು ಸಾಧ್ಯವಾಗದ ಕಾರಣ, ನಾನು ಇಂದು ಅವರನ್ ಭೇಟಿಯಾಗಿದ್ದೆ. ಇದು ವೈಯಕ್ತಿಕ ಎಂದು ಅವರು ಹೇಳಿದರು.

ಇದನ್ನೂ ಓದಿ:ಉತ್ತರ ಪ್ರದೇಶದಲ್ಲಿ ನಾಯಕತ್ವ ಬದಲಾವಣೆ?..ಊಹಾಪೋಹಗಳಿಗೆ ತೆರೆ; ಪ್ರಮುಖ ವ್ಯಕ್ತಿಯೊಬ್ಬರ ಪ್ರವೇಶ ನಿಶ್ಚಿತ !

Follow us on

Related Stories

Most Read Stories

Click on your DTH Provider to Add TV9 Kannada