Breaking ಸ್ಮೃತಿ ಇರಾನಿ ಮತ್ತು ಅವರ ಮಗಳು ಗೋವಾ ರೆಸ್ಟೋರೆಂಟ್​​​​ನ ಮಾಲೀಕರಲ್ಲ: ದೆಹಲಿ ಹೈಕೋರ್ಟ್

ಸ್ಮೃತಿ ಇರಾನಿ ಅಥವಾ ಆಕೆಯ ಮಗಳು ಲೈಸನ್ಸ್ ಗಾಗಿ ಯಾವತ್ತೂ ಅರ್ಜಿ ಸಲ್ಲಿಸಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

Breaking ಸ್ಮೃತಿ ಇರಾನಿ ಮತ್ತು ಅವರ ಮಗಳು ಗೋವಾ ರೆಸ್ಟೋರೆಂಟ್​​​​ನ ಮಾಲೀಕರಲ್ಲ: ದೆಹಲಿ ಹೈಕೋರ್ಟ್
ಸ್ಮೃತಿ ಇರಾನಿ
Edited By:

Updated on: Aug 01, 2022 | 6:52 PM

ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಮತ್ತು ಆಕೆಯ ಮಗಳು ಜೊಯಿಷ್ ಗೋವಾದಲ್ಲಿರುವ ರೆಸ್ಟೋರೆಂಟ್ ನ ಮಾಲೀಕರಲ್ಲ. ಅವರಿಗೆ ಪರವಾನಗಿ ನೀಡಿಲ್ಲ ಎಂದು ದೆಹಲಿ ಹೈಕೋರ್ಟ್ (Delhi High Court) ಹೇಳಿದೆ. ಸ್ಮೃತಿ ಇರಾನಿ ಅಥವಾ ಆಕೆಯ ಮಗಳು ಲೈಸನ್ಸ್ ಗಾಗಿ ಯಾವತ್ತೂ ಅರ್ಜಿ ಸಲ್ಲಿಸಿಲ್ಲ ಎಂದಿದೆ ಕೋರ್ಟ್.ರೆಸ್ಟೋರೆಂಟ್ ಆಗಲೀ ಅಲ್ಲಿರುವ ಭೂಮಿಯಾಗಲೀ ಸ್ಮೃತಿ ಇರಾನಿ ಅಥವಾ ಅವರ ಮಗಳಿಗೆ ಸೇರಿದ್ದಲ್ಲ ಎಂದು ಹೈಕೋರ್ಟ್ ಹೇಳಿದೆ.  ತನ್ನ ಘನತೆಗೆ ಧಕ್ಕೆ ತರುವುದಕ್ಕಾಗಿ ಕಾಂಗ್ರೆಸ್ ತನ್ನ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದೆ ಎಂದು ಸ್ಮೃತಿ ಇರಾನಿ ಕಾಂಗ್ರೆಸ್ ನಾಯಕರಾದ ಪವನ್ ಖೇರಾ, ಜೈರಾಮ್ ರಮೇಶ್ ಮತ್ತು ನೆಟ್ಟಾ ಡಿ ಸೋಜಾ ಅವರಿಗೆ ನೋಟಿಸ್ ಕಳುಹಿಸಿದ್ದರು. ತಮ್ಮ ಮತ್ತು ಮಗಳ ಮೇಲೆ ಆಧಾರರಹಿತ ಮತ್ತು ಸುಳ್ಳು ಆರೋಪ ಹೊರಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕರು ಕ್ಷಮೆಯಾಚಿಸಬೇಕು ಎಂದು ಬಿಜೆಪಿ ನಾಯಕಿ ಸ್ಮೃತಿ ಒತ್ತಾಯಿಸಿದ್ದಾರೆ.

ಇದಾದ ನಂತರ ದೆಹಲಿ ಹೈಕೋರ್ಟ್ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಪವನ್ ಖೇರಾ, ನೆಟ್ಟಾ ಡಿ ಸೋಜಾ ಅವರ ವಿರುದ್ದ ನೋಟಿಸ್ ನೀಡಿತ್ತು. ಆಧಾರರಹಿತ ಆರೋಪ ಮಾಡಿದ್ದಕ್ಕಾಗಿ 2 ಕೋಟಿ ನಷ್ಟ ಪರಿಹಾರ ನೀಡಬೇಕು ಎಂದು ಸ್ಮೃತಿ ಒತ್ತಾಯಿಸಿದ್ದರು. ಸ್ಮೃತಿ ಪುತ್ರಿ ಜೋಯಿಷ್ ಗೋವಾದಲ್ಲಿ ಅಕ್ರಮ ಬಾರ್ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಕೇಂದ್ರ ಸಚಿವೆ ಮತ್ತು ಆಕೆಯ ಪುತ್ರಿ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ ಪೋಸ್ಟ್ ಅಳಿಸುವಂತೆ ಕಾಂಗ್ರೆಸ್ ನಾಯಕರಿಗೆ ಕೋರ್ಟ್ ಆದೇಶಿಸಿತ್ತು

Published On - 6:23 pm, Mon, 1 August 22