AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Breaking News: ಸಂಜಯ್ ರಾವತ್ ಆಗಸ್ಟ್ 4ರವರೆಗೆ ಇಡಿ ವಶಕ್ಕೆ; ಮನೆಯೂಟ, ವಕೀಲರ ಭೇಟಿಗೆ ಅನುಮತಿ

ಶಿವಸೇನಾ ಸಂಸದ ಸಂಜಯ್ ರಾವತ್ ಅವರನ್ನು ಇಂದು ನಾಲ್ಕು ದಿನಗಳ ಕಾಲ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಲಾಗಿದೆ.

Breaking News: ಸಂಜಯ್ ರಾವತ್ ಆಗಸ್ಟ್ 4ರವರೆಗೆ ಇಡಿ ವಶಕ್ಕೆ; ಮನೆಯೂಟ, ವಕೀಲರ ಭೇಟಿಗೆ ಅನುಮತಿ
ಸಂಜಯ್ ರಾವತ್
TV9 Web
| Edited By: |

Updated on:Aug 04, 2022 | 2:02 PM

Share

ಭೂ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತ ಶಿವಸೇನಾ ಸಂಸದ ಸಂಜಯ್ ರಾವತ್ (Sanjay Raut) ಅವರನ್ನು ಇಂದು (ಸೋಮವಾರ) ನಾಲ್ಕು ದಿನಗಳ ಕಾಲ ಜಾರಿ ನಿರ್ದೇಶನಾಲಯದ (ED) ಕಸ್ಟಡಿಗೆ ಒಪ್ಪಿಸಲಾಗಿದೆ. ತನಿಖಾ ಸಂಸ್ಥೆ ಎಂಟು ದಿನಗಳ ಕಸ್ಟಡಿಗೆ ಕೇಳಿತ್ತು ಆದರೆ ವಿಶೇಷ ನ್ಯಾಯಾಲಯ ಒಪ್ಪಲಿಲ್ಲ ಮತ್ತು 4 ದಿನಗಳ ಕಾಲ ಕಸ್ಟಡಿಗೆ ನೀಡಿತು. ಕಸ್ಟಡಿ ವಿಚಾರಣೆ ಅಗತ್ಯ ಎಂದು ನನಗನಿಸಿದೆ.ಪ್ರವೀಣ್ ರಾವತ್ ವಿರುದ್ಧ ಈ ಹಿಂದೆಯೇ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂಬುದನ್ನು ನಿರ್ಲಕ್ಷಿಸುವಂತಿಲ್ಲ. ಎಲ್ಲವನ್ನೂ  ಈಗಾಗಲೇ ದಾಖಲಿಸಲಾಗಿದ್ದು, ವಿಚಾರಣೆಯಿಂದ ತನಿಖೆವರೆಗೆ ಲಭ್ಯವಾಗಿದೆ. ಸಂಜಯ್ ರಾವತ್ ಅವರ ಪತ್ನಿಯ ಬ್ಯಾಂಕ್  ಖಾತೆಯಲ್ಲಿರುವ ಹಣದ ಬಗ್ಗೆಯೂ ತನಿಖೆ ನಡೆಸಲಾಗುವುದು. ಹಾಗಾಗಿ  ನನ್ನ ಅಭಿಪ್ರಾಯ ಏನೆಂದರೆ ಎಂಟು ದಿನಗಳ ಇಡಿ  ಕಸ್ಟಡಿ ಸಾಧ್ಯವಿಲ್ಲ.  ಅಪರಾಧದ ಬಗ್ಗೆ ವಿಚಾರಣೆ ನಡೆಸಲು ಆಗಸ್ಟ್ 4 ವರೆಗೆ ಆರೋಪಿಯನ್ನು ಕಸ್ಟಡಿಯಲ್ಲಿರಿಸಬಹುದು ಎಂದು  ವಿಶೇಷ ನ್ಯಾಯಮೂರ್ತಿ ಎಂಜಿ ದೇಶಪಾಂಡೆ  ಹೇಳಿದ್ದಾರೆ.

ಮನೆಯೂಟ, ವಕೀಲರನ್ನು ಭೇಟಿ ಮಾಡಲು ಅನುಮತಿ

ಇಡಿ ಕಸ್ಟಡಿಯಲ್ಲಿರುವಾಗ ರಾವತ್ ಅವರಿಗೆ ಮನೆಯೂಟ ಮತ್ತು ವಕೀಲರನ್ನು ಭೇಟಿ ಮಾಡಲು ಅನುಮತಿ ನೀಡಲಾಗಿದೆ.

ಇದನ್ನೂ ಓದಿ
Image
RR vs RCB Qualifier 2: ಇಲ್ಲಿ RCB ತಂಡವೇ ಬಲಿಷ್ಠ, ಆದರೆ…
Image
Cholesterol: ಈ ಲಕ್ಷಣಗಳಿವೆಯಾ? ಹಾಗಾದ್ರೆ ನಿಮ್ಮ ದೇಹದಲ್ಲಿ ಕೊಬ್ಬು ಹೆಚ್ಚಾಗಿದೆ
Image
Heart Disease: ಟಿವಿ ವೀಕ್ಷಣೆ ಕಡಿಮೆ ಮಾಡಿ, ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಿ
Image
Fish Allergy: ಮೀನು ಅಲರ್ಜಿ ಎಂದರೇನು? ನಿಭಾಯಿಸುವುದು ಹೇಗೆ?

ಸಂಜಯ್ ರಾವತ್ ಕುಟುಂಬ ಭೇಟಿ ಮಾಡಿದ ಉದ್ಧವ್

ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಸಂಜಯ್ ರಾವತ್ ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಸಬರ್ ಬನ್ ಮುಂಬೈನ ಭಂದೂಪ್ ನಲ್ಲಿರುವ ರಾವತ್ ಮನೆಗೆ ಸಂಸದ ಅರವಿಂದ್ ಸಾವಂತ್, ಶಾಸಕ ರವೀಂದ್ರ ವೈಕಾರ್ ಮತ್ತು ಶಿವಸೇನಾ ನೇತಾರ ಮಿಲಿಂದ್ ನರ್ವೇಕರ್ ಜತೆಗೆ ಠಾಕ್ರೆ ಭೇಟಿ ನೀಡಿದ್ದಾರೆ.

ಏನಿದು ಪ್ರಕರಣ?

ಮುಂಬೈನ ಪತ್ರಾ ಚಾವ್ಲ್ ಭೂ ಹಗರಣ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವ ಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಅವರನ್ನು ಬಂಧಿಸಲಾಗಿದೆ. 1,034 ಕೋಟಿ ರೂ. ಪತ್ರಾ ಚಾವ್ಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾವತ್ ಅವರನ್ನು ಈ ಹಿಂದೆ 2 ಬಾರಿ ವಿಚಾರಣೆ ನಡೆಸಲಾಗಿತ್ತು. ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್‌ನಲ್ಲಿರುವ ಇಡಿ ವಲಯ ಕಚೇರಿಯಲ್ಲಿ 9 ಗಂಟೆಗಳ ಕಾಲ ವಿಚಾರಣೆಯ ನಂತರ 60 ವರ್ಷದ ಸಂಜಯ್ ರಾವತ್ ಅವರನ್ನು ಬಂಧಿಸಲಾಯಿತು. ಸೋಮವಾರ ಮಧ್ಯರಾತ್ರಿ 12:05 ಗಂಟೆಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಅವರು ತನಿಖೆಗೆ ಸಹಕರಿಸದ ಕಾರಣ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Published On - 4:48 pm, Mon, 1 August 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ