ದೆಹಲಿ: ಪಾಕಿಸ್ತಾನಕ್ಕೆ ಡ್ರೋನ್ ಮೂಲಕ ಮಾದಕ ವ್ಯಸನಗಳನ್ನು (Smuggling Drugs) ಸಾಗಿಸಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಭಾರತೀಯ ಪ್ರಜೆಗಳನ್ನು ದೆಹಲಿ ಪೊಲೀಸ್‌ನ ಕೌಂಟರ್ ಇಂಟೆಲಿಜೆನ್ಸ್ ಯುನಿಟ್ ಇಂದು ಬಂಧಿಸಿದೆ. ಆರೋಪಿಗಳಾದ ಮಲ್ಕಿತ್ ಸಿಂಗ್, ಧರ್ಮೇಂದ್ರ ಸಿಂಗ್ ಮತ್ತು ಹರ್ಪಾಲ್ ಸಿಂಗ್ ಅವರು ಪಂಜಾಬ್ ನಿವಾಸಿಗಳಾಗಿದ್ದು, ದೆಹಲಿಯ ಸರಾಯ್ ಕಾಲೇ ಖಾನ್‌ನಿಂದ ಕೌಂಟರ್ ಇಂಟೆಲಿಜೆನ್ಸ್ ಯುನಿಟ್‌ನ ವಿಶೇಷ ಇಲಾಖೆಯಿಂದ ಬಂಧಿಸಲಾಗಿದೆ.
ಪಂಜಾಬ್‌ನಲ್ಲಿ ಪರಾರಿಯಾಗಿರುವ ಮೂವರು ಡ್ರಗ್ ಪೂರೈಕೆದಾರರು ಯುಎಸ್ ಮತ್ತು ಫಿಲಿಪೈನ್ಸ್ ದೇಶದಲ್ಲಿ ಇದ್ದರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Crime Roundup: ಬೆಂಗಳೂರಿನಲ್ಲಿ 6 ಕೋಟಿ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದ ಸಿಸಿಬಿ ಪೊಲೀಸರು
ಆರೋಪಿಗಳು ಡ್ರಗ್ಸ್ನ್ನು ಪಾಕಿಸ್ತಾನಕ್ಕೆ ಹವಾಲಾ ಜಾಲದ ಮೂಲಕ ವರ್ಗಾವಣೆ ಮಾಡಲಾಗುತ್ತಿತ್ತು. ಇದರ ಜತೆಗೆ ಹಣಕ್ಕೆ ಬದಲಾಗಿ ಡ್ರೋನ್‌ಗಳು, ಪಂಜಾಬ್ ಮತ್ತು ಇತರ ರಾಜ್ಯಗಳಲ್ಲಿ ಪಾಕಿಸ್ತಾನದಿಂದ ಡ್ರಗ್ಸ್ ಸಾಗಣೆ ಮಾಡುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಆರೋಪಿಯಿಂದ ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳಲ್ಲಿ ಫಿಲಿಪೈನ್ಸ್ ಮತ್ತು ಯುಎಸ್‌ನ ಫೋನ್ ಸಂಖ್ಯೆಗಳು ಪತ್ತೆಯಾಗಿವೆ. ಇದರ ಹಿಂದೆ ದೊಡ್ಡ ಜಾಲವೇ ಇದೆ, ಅವರನ್ನು ಪತ್ತೆ ಮಾಡಲು ಈ ಫೋನ್ ಸಹಾಯವಾಗಬಹುದು ಎಂದು ಹೇಳಲಾಗಿದೆ.
Published On - 12:02 pm, Fri, 12 May 23