Crime Roundup: ಬೆಂಗಳೂರಿನಲ್ಲಿ 6 ಕೋಟಿ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದ ಸಿಸಿಬಿ ಪೊಲೀಸರು

ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಅಪಾರ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಕಿಂಗ್​ಪಿನ್ ಸೇರಿ ಆರು ಆರೋಪಿಗಳನ್ನು ಬಂಧಿಸಿದ ಸಿಸಿಬಿ 6.30 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

Crime Roundup: ಬೆಂಗಳೂರಿನಲ್ಲಿ  6 ಕೋಟಿ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದ ಸಿಸಿಬಿ ಪೊಲೀಸರು
Drugs
Follow us
TV9 Web
| Updated By: ನಯನಾ ರಾಜೀವ್

Updated on: Dec 30, 2022 | 2:02 PM

ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಅಪಾರ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಕಿಂಗ್​ಪಿನ್ ಸೇರಿ ಆರು ಆರೋಪಿಗಳನ್ನು ಬಂಧಿಸಿದ ಸಿಸಿಬಿ 6.30 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಎಂಡಿಎಂಎ, ಚರಸ್, ಗಾಂಜಾ ಸೇರಿ ವಿವಿಧ ಮಾದರಿಯ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಹೊಸವರ್ಷಾಚರಣೆ ಹಿನ್ನೆಲೆ ಬೆಂಗಳೂರಿಗೆ ಡ್ರಗ್ಸ್ ಪೂರೈಸಲು ಯತ್ನಿಸುತ್ತಿದ್ದರು. ಹೊಸ ವರ್ಷಾಚರಣೆ ಹಿನ್ನೆಲೆ ಹಲವೆಡೆ ಕಾರ್ಯಾಚರಣೆ ನಡೆಸಿದ್ದೆವು, ಸಿಸಿಬಿ ಪೊಲೀಸರು 6.30 ಕೋಟಿ ಮೌಲ್ಯದ ಡ್ರಗ್ಸ್​ ಜಪ್ತಿ ಮಾಡಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿಕೆ ನೀಡಿದ್ದಾರೆ.

350 ಎಕ್ಸ್‌ಟಸಿ ಮಾತ್ರೆಗಳು, 2.5 ಕೆ.ಜಿ ಎಂಡಿಎಂಎ, 440 ಗ್ರಾಂ ಚರಸ್, 7 ಕೆ.ಜಿ ಗಾಂಜಾವನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದೇಶಿ ಪ್ರಜೆ ಸೇರಿ 6 ಡ್ರಗ್ ಪೆಡ್ಲರ್​ಗಳನ್ನು ವಶಕ್ಕೆ ಪಡೆಯಲಾಗಿದೆ, ಗೋವಾದಿಂದ ಬೆಂಗಳೂರಿಗೆ ಡ್ರಗ್ಸ್​, ಗಾಂಜಾ ಪೂರೈಸುತ್ತಿದ್ದ ಮಾಹಿತಿ ಲಭ್ಯವಾಗಿರುವುದಾಗಿ ತಿಳಿಸಿದ್ದಾರೆ.

ಕೊಲೆ ಆರೋಪಿಗಳ ಬಂಧನ ಕೆಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬರ್ಬರ ಹತ್ಯೆಯ ಆರೋಪಿಗಳನ್ನು ಒಂದು ತಿಂಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ಬಾಳಪ್ಪ ಎಂಬಾತನ ಮೇಲೆ ಕಲ್ಲು ಎತ್ತುಹಾಕಿ ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ತಿಂಗಳ ಬಳಿಕ ಕೊನೆಗೂ ಪ್ರಮುಖ ಆರೋಪಿ ಸರೋಜಾಳನ್ನು ಬಂಧಿಸಲಾಗಿದೆ. ಡಿಸೆಂಬರ್ 6ರಂದು ದಾಖಲಾಗಿದ್ದ ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆದರೆ ಪ್ರಮುಖ ಆರೋಪಿ ಸರೋಜ ಮಾತ್ರ ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದಳು. ಪ್ರೇಮವ್ವ, ಅಕ್ಕಮಹಾದೇವಿ, ಮಂಜುನಾಥ್, ಕಿರಣ್, ಚೆನ್ನಪ್ಪ ಹಾಗೂ ಕಾಶಿನಾಥ್ ಬಂಧಿತ ಆರೋಪಿಗಳಾಗಿದ್ದಾರೆ‌. ಡಿಸೆಂಬರ್ 4ರಂದು ಕೊಲೆ ನಡೆದಿತ್ತು. ಕೊಲೆ ಮಾಡೋ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ನೇಣುಬಿಗಿದುಕೊಂಡು ಪಿಎಸ್​ಐ ಆತ್ಮಹತ್ಯೆ ನೇಣುಬಿಗಿದುಕೊಂಡು ಪಿಸಿಐ ರಾಮಲಿಂಗ ನಾಯಕ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಅಳಗವಾಡಿ ಗ್ರಾಮದ ಬೀರೇಶ್ವರ ದೇವಸ್ಥಾನದ ಪಕ್ಕದ ಶೆಡ್​ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಇತರೆ ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದು ಹೊಸದೇನಲ್ಲ: ಜಮೀರ್ ಅಹ್ಮದ್
ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದು ಹೊಸದೇನಲ್ಲ: ಜಮೀರ್ ಅಹ್ಮದ್
ಜಮೀರ್ ಪದಬಳಕೆ ವಿಷಯವನ್ನು ಶಿವಕುಮಾರ್ ನೋಡಿಕೊಳ್ಳುತ್ತಾರೆ: ಪರಮೇಶ್ವರ್
ಜಮೀರ್ ಪದಬಳಕೆ ವಿಷಯವನ್ನು ಶಿವಕುಮಾರ್ ನೋಡಿಕೊಳ್ಳುತ್ತಾರೆ: ಪರಮೇಶ್ವರ್
ಸಂಜು ಸಿಕ್ಸರ್​ಗೆ ಮಹಿಳೆ ಕಣ್ಣೀರು: ಕ್ಷಮೆ ಕೇಳಿದ ಸ್ಯಾಮ್ಸನ್
ಸಂಜು ಸಿಕ್ಸರ್​ಗೆ ಮಹಿಳೆ ಕಣ್ಣೀರು: ಕ್ಷಮೆ ಕೇಳಿದ ಸ್ಯಾಮ್ಸನ್
ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್
ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್
ಧೋನಿ ಸಂಪ್ರದಾಯ ಮುಂದುವರಿಸಿದ ಸೂರ್ಯಕುಮಾರ್ ಯಾದವ್
ಧೋನಿ ಸಂಪ್ರದಾಯ ಮುಂದುವರಿಸಿದ ಸೂರ್ಯಕುಮಾರ್ ಯಾದವ್
ಧರಣಿನಿರತ ಮಹಿಳೆಯರನ್ನು ಜೊತೆಗೂಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್
ಧರಣಿನಿರತ ಮಹಿಳೆಯರನ್ನು ಜೊತೆಗೂಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್
ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು
ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು
10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?
10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?