AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಮನೆ ಬಾಡಿಗೆ ಹಣ ಹಾಗೂ ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಪಾರ್ವತಮ್ಮ ಹತ್ಯೆ, ಶರೀಫ್, ಸೈಯದ್ ಅಂದರ್​

ಮಹಿಳೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ದುಷ್ಕರ್ಮಿಗಳನ್ನು ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

Crime News: ಮನೆ ಬಾಡಿಗೆ ಹಣ ಹಾಗೂ ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಪಾರ್ವತಮ್ಮ ಹತ್ಯೆ, ಶರೀಫ್, ಸೈಯದ್ ಅಂದರ್​
ಮೃತ ಪಾರ್ವತಮ್ಮ
TV9 Web
| Edited By: |

Updated on: Dec 30, 2022 | 5:14 PM

Share

ಹಾಸನ: ಮಹಿಳೆಯ ಕತ್ತು ಸೀಳಿ ಬರ್ಬರವಾಗಿ (brutally murdered) ಹತ್ಯೆ ಮಾಡಿ ಪರಾರಿಯಾಗಿದ್ದ ದುಷ್ಕರ್ಮಿಗಳನ್ನು ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಾರ್ವತಮ್ಮ(55) ಕೊಲೆಯಾದ ಮಹಿಳೆ. ಅರಕಲಗೂಡಿನ ಶಫೀರ್ ಹಾಗೂ ಕೋಲಾರ ಜಿಲ್ಲೆಯ ಮಾಲೂರು ಮೂಲದ ಸೈಯ್ಯದ್ ಬಂಧಿತ ಆರೋಪಿಗಳು.

ಘಟನೆ ಹಿನ್ನೆಲೆ

ಪಾರ್ವತಮ್ಮ, ಹೊಳೆನರಸೀಪುರ ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಶಫೀರ್​ಗೆ 2 ವರ್ಷದ‌ ಹಿಂದೆ ಮನೆ ಬಾಡಿಗೆ ನೀಡಿದ್ದರು. ಶಫೀರ್ ಕಳೆದ 1 ವರ್ಷದಿಂದ ಬಾಡಿಗೆಯನ್ನೇಕೊಡದೆ ಕಾಡಿಸುತ್ತಿದ್ದನು. ಇದಲ್ಲದೆ ಪಾರ್ವತಮ್ಮ ಶಫೀರ್​ಗೆ 1 ಲಕ್ಷ ಹಣ ಸಾಲ ನೀಡಿದ್ದು, ಇದನ್ನು ಸಹಿತ ಮರುಕಳಿಸಿರಲಿಲ್ಲ.

ಹೀಗಾಗಿ ಪಾರ್ವತಮ್ಮ ಕುಟುಂಬ ಶಫೀರ್​ನ ಮನೆ ಜಪ್ತಿ ಮಾಡಿ ಹಣ ಕೊಡುವವರೆಗೂ ಸೋಫಾ, ಗಾಡ್ರೇಜ್ ಮತ್ತು ಪೀಠೋಪಕರಣ ನಮ್ಮನೆಯಲ್ಲಿರಲಿ (ಪಾರ್ವತಮ್ಮ) ಎಂದು ಮನೆಗೆ ತಂದಿಟ್ಟುಕೊಂಡಿದ್ದರು. ಈ ಕಾರಣಕ್ಕೆ ಸಿಟ್ಟಾಗಿ, ಶಫೀರ್ ಪಾರ್ವತಮ್ಮರನ್ನು ಹತ್ಯೆ ಮಾಡಲು ಪ್ಲಾನ್ ಮಾಡಿದ್ದನು.

ಇದರಂತೆ ಶಫೀರ್ ತನ್ನ ಸ್ನೇಹಿತನೊಂದಿಗೆ (ಡಿ. 24) ಪಾರ್ವತಮ್ಮ ಪತಿ ರಾಜೇಗೌಡ ಹೊರಗೆ ಹೋಗಿದ್ದರು. ಈ ಸಮಯ ನೋಡಿಕೊಂಡು ಆರೋಪಿಗಳು ಮಾಸ್ಕ್ ಧರಿಸಿಕೊಂಡು ಬೈಕ್‌ನಲ್ಲಿ ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಪಾರ್ವತಮ್ಮ ಮನೆಗೆ ಬಂದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿದ್ದ ಹೊಳೆನರಸೀಪುರ ಗ್ರಾಮಾಂತರ ಪೊಲೀಸರು, ಆರೋಪಿಗಳನ್ನು ಸೆರೆ ಹಿಡಿದು ಜೈಲಿಗೆ ಅಟ್ಟಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Video: ಮದುವೆ ಒಂದು ವಾರವಿರುವಾಗ ಪ್ರೇಮಿಯೊಂದಿಗೆ ಓಡಿ ಹೋಗಲು ಯುವತಿ ಯತ್ನ
Video: ಮದುವೆ ಒಂದು ವಾರವಿರುವಾಗ ಪ್ರೇಮಿಯೊಂದಿಗೆ ಓಡಿ ಹೋಗಲು ಯುವತಿ ಯತ್ನ
ಕೇವಲ 3.30 ರೂಪಾಯಿಗೆ ಒಂದು ಮೊಟ್ಟೆ ಲಭ್ಯ
ಕೇವಲ 3.30 ರೂಪಾಯಿಗೆ ಒಂದು ಮೊಟ್ಟೆ ಲಭ್ಯ
18 ಹಲ್ಲುಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲು ದಂತ ವೈದ್ಯರ ಯತ್ನ, ಬಾಲಕಿ ಸಾವು
18 ಹಲ್ಲುಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲು ದಂತ ವೈದ್ಯರ ಯತ್ನ, ಬಾಲಕಿ ಸಾವು
ಮತದಾನದ ವೇಳೆ ಮುರ್ಷಿದಾಬಾದ್​ನಲ್ಲಿ ಬಾಂಬ್ ದಾಳಿ, ಹಲವರಿಗೆ ಗಾಯ
ಮತದಾನದ ವೇಳೆ ಮುರ್ಷಿದಾಬಾದ್​ನಲ್ಲಿ ಬಾಂಬ್ ದಾಳಿ, ಹಲವರಿಗೆ ಗಾಯ
ರಾಯಚೂರು: ಸ್ಟೀರಿಂಗ್ ಕಟ್ ಆಗಿ ಪಲ್ಟಿಯಾದ KKRTC ಬಸ್, ತಪ್ಪಿದ ಭಾರಿ ದುರಂತ
ರಾಯಚೂರು: ಸ್ಟೀರಿಂಗ್ ಕಟ್ ಆಗಿ ಪಲ್ಟಿಯಾದ KKRTC ಬಸ್, ತಪ್ಪಿದ ಭಾರಿ ದುರಂತ
ಕೊಡಗು: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ, ಹೋಂಸ್ಟೇ ಪರವಾನಗಿ ರದ್ದು
ಕೊಡಗು: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ, ಹೋಂಸ್ಟೇ ಪರವಾನಗಿ ರದ್ದು
ಮಿರ್ಜಾಪುರದಲ್ಲಿ ಎರಡು ಟ್ರಕ್​ಗಳ ನಡುವೆ ಸಿಲುಕಿ ನಜ್ಜುಗುಜ್ಜಾದ ವಾಹನಗಳು
ಮಿರ್ಜಾಪುರದಲ್ಲಿ ಎರಡು ಟ್ರಕ್​ಗಳ ನಡುವೆ ಸಿಲುಕಿ ನಜ್ಜುಗುಜ್ಜಾದ ವಾಹನಗಳು
ಸಾಮಾನ್ಯ ವ್ಯಕ್ತಿಯಂತೆ ಬಂದು ಮತ ಚಲಾಯಿಸಿದ ಸೂಪರ್ ಸ್ಟಾರ್ ರಜನಿಕಾಂತ್ 
ಸಾಮಾನ್ಯ ವ್ಯಕ್ತಿಯಂತೆ ಬಂದು ಮತ ಚಲಾಯಿಸಿದ ಸೂಪರ್ ಸ್ಟಾರ್ ರಜನಿಕಾಂತ್ 
ರಾಜಗಾಂಭಿರ್ಯದಿಂದ ರಸ್ತೆಗೆ ಬಂದ ಹುಲಿ: ಅಪರೂಪದ ವಿಡಿಯೋ ಇಲ್ಲಿದೆ
ರಾಜಗಾಂಭಿರ್ಯದಿಂದ ರಸ್ತೆಗೆ ಬಂದ ಹುಲಿ: ಅಪರೂಪದ ವಿಡಿಯೋ ಇಲ್ಲಿದೆ
‘ರಕ್ಷಿತಾ ರೀತಿ ನಾನು ಪ್ರೇಮ್ ಜೊತೆ ಸಂಸಾರ ಮಾಡ್ತಿದೀನಿ’; ಅರ್ಜುನ್ ಜನ್ಯ
‘ರಕ್ಷಿತಾ ರೀತಿ ನಾನು ಪ್ರೇಮ್ ಜೊತೆ ಸಂಸಾರ ಮಾಡ್ತಿದೀನಿ’; ಅರ್ಜುನ್ ಜನ್ಯ