ಸದ್ಗುರು ಟ್ವೀಟ್​​ನಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಶುರುವಾಯ್ತು ಇಂಡಿಯಾ vs ಭಾರತ್ ಚರ್ಚೆ

|

Updated on: Jun 20, 2024 | 3:22 PM

ಸದ್ಗುರು ಟ್ವೀಟ್ ಗೆ ಪ್ರತಿಕ್ರಿಯಿಸಿದ ಯುಟ್ಯೂಬರ್ ಧ್ರುವ್ ರಾಠಿ, ಜಗದೀಶ್ ವಾಸುದೇವ್ ಅವರೇ ನೀವು ನಿಮ್ಮ "ಭಾರತ ವಿರೋಧಿ ಅಜೆಂಡಾವನ್ನು ನಿಲ್ಲಿಸುತ್ತೀರಾ? ಇಂಡಿಯಾ ಮತ್ತು ಭಾರತ ಈ ಎರಡೂ ಪದಗಳನ್ನು ಸಂವಿಧಾನದಲ್ಲಿ ಬರೆದಿದೆ ಎಂದು ಎಲ್ಲರಿಗೂ ಗೊತ್ತು, ಆದರೆ ರಾಜಕೀಯಕ್ಕಾಗಿ ನೀವು ಒಡೆದು ಆಳುವ ಕೆಟ್ಟ ಆಟ ಆಡುತ್ತಿದ್ದೀರಿ ಎಂದಿದ್ದಾರೆ.

ಸದ್ಗುರು ಟ್ವೀಟ್​​ನಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಶುರುವಾಯ್ತು ಇಂಡಿಯಾ vs ಭಾರತ್ ಚರ್ಚೆ
ಸದ್ಗರು- ಧ್ರುವ್ ರಾಠಿ
Follow us on

ದೆಹಲಿ ಜೂನ್ 20: ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) “ಇಂಡಿಯಾ”vs “ಭಾರತ” ಎಂಬ ಚರ್ಚೆ ಅನಗತ್ಯ ಎಂದು ಹೇಳಿ, ಪಠ್ಯಪುಸ್ತಕಗಳು ಎರಡೂ ಪದಗಳನ್ನು ಪರ್ಯಾಯವಾಗಿ ಬಳಸುತ್ತವೆ ಎಂದಿತ್ತು. ಇದರ ಬೆನ್ನಲ್ಲೇ ಆಧ್ಯಾತ್ಮಿಕ ನಾಯಕ ಸದ್ಗುರು (Sadhguru) ಈ ವಿಷಯದ ಬಗ್ಗೆ ತಮ್ಮ ನಿಲುವನ್ನು ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮ (Social media) ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಸಾಹತುಶಾಹಿ ಆಳ್ವಿಕೆ ಕೊನೆಗೊಂಡಾಗ ಭಾರತವು “ಭಾರತ್” ಎಂಬ ಹೆಸರನ್ನು ಮರುಪಡೆಯಬೇಕಿತ್ತು, ಏಕೆಂದರೆ ಆ ಹೆಸರು ಪ್ರತಿಯೊಬ್ಬರ ಹೃದಯದಲ್ಲಿ “ಪ್ರತಿಧ್ವನಿಸುತ್ತದೆ” ಎಂದು ಸದ್ಗುರು ಟ್ವೀಟ್ ಮಾಡಿದ್ದರು. ಸದ್ಗುರು ಅವರ ಈ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನುಂಟು ಮಾಡಿದೆ.

ಸದ್ಗುರು ಟ್ವೀಟ್


ಸದ್ಗುರು ಟ್ವೀಟ್ ಗೆ ಪ್ರತಿಕ್ರಿಯಿಸಿದ ಯುಟ್ಯೂಬರ್ ಧ್ರುವ್ ರಾಠಿ, ಜಗದೀಶ್ ವಾಸುದೇವ್ ಅವರೇ ನೀವು ನಿಮ್ಮ “ಭಾರತ ವಿರೋಧಿ ಅಜೆಂಡಾವನ್ನು ನಿಲ್ಲಿಸುತ್ತೀರಾ? ಇಂಡಿಯಾ ಮತ್ತು ಭಾರತ ಈ ಎರಡೂ ಪದಗಳನ್ನು ಸಂವಿಧಾನದಲ್ಲಿ ಬರೆದಿದೆ ಎಂದು ಎಲ್ಲರಿಗೂ ಗೊತ್ತು, ಆದರೆ ರಾಜಕೀಯಕ್ಕಾಗಿ ನೀವು ಒಡೆದು ಆಳುವ ಕೆಟ್ಟ ಆಟ ಆಡುತ್ತಿದ್ದೀರಿ ಎಂದಿದ್ದಾರೆ.

ಧ್ರುವ್ ರಾಠಿ ಟ್ವೀಟ್ ಗೆ ಪ್ರತಿಕ್ರಿಯಿಸಿದ ಇನ್ನೊಬ್ಬ ಯೂಟ್ಯೂಬರ್ ಫ್ಲೈಯಿಂಗ್ ಬೀಸ್ಟ್  ಗೌರವ್ ತನೇಜಾ, ಅಂತರ್ಜಾಲದಲ್ಲಿ ವಿಭಿನ್ನ ಅಭಿಪ್ರಾಯಗಳು ಏಕೆ ಅಸ್ತಿತ್ವದಲ್ಲಿರಬಾರದು. ಕೆಲವು ವಿದೇಶಿಯರು ಇಂಟರ್ನೆಟ್‌ನಲ್ಲಿರುವ ಎಲ್ಲಾ ವಿಷಯವನ್ನು ಏಕೆ ನಿಯಂತ್ರಿಸಲು ಬಯಸುತ್ತಾರೆ. #Dictator ಎಂದು ಕೇಳಿದ್ದಾರೆ.

ಗೌರವ್ ತನೇಜಾ ಟ್ವೀಟ್


ಎಲ್ಲಾ ಶಾಲಾ ಪಠ್ಯಪುಸ್ತಕಗಳಲ್ಲಿ “ಇಂಡಿಯಾ” ಬದಲಿಗೆ “ಭಾರತ್” ಎಂದು ಬಳಸಬೇಕು NCERT ಸಮಿತಿಯ ಶಿಫಾರಸು ಮಾಡಿದೆ ಎಂದು ಸದ್ಗುರು, ಎಎನ್ಐ ಸುದ್ದಿಸಂಸ್ಥೆ ಮಾಡಿದ್ದ ಪೋಸ್ಟ್ ನ್ನು ರೀಪೋಸ್ಟ್ ಮಾಡಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಈ ಚರ್ಚೆ ಶುರುವಾಗಿದೆ.

ಇದನ್ನೂ ಓದಿ: Bihar Reservation: ಮೀಸಲಾತಿ ಪ್ರಮಾಣವನ್ನು ಶೇ.65ಕ್ಕೆ ಏರಿಸಿದ್ದ ಬಿಹಾರ ಸರ್ಕಾರದ ಆದೇಶ ರದ್ದುಪಡಿಸಿದ ಹೈಕೋರ್ಟ್​

“ಬ್ರಿಟಿಷರು ದೇಶವನ್ನು ತೊರೆದಾಗ ನಾವು ‘ಭಾರತ’ ಎಂಬ ಹೆಸರನ್ನು ಮರಳಿ ಪಡೆಯಬೇಕಾಗಿತ್ತು. ಹೆಸರು ಎಲ್ಲವನ್ನೂ ಮಾಡುವುದಿಲ್ಲ ಆದರೆ ಪ್ರತಿಯೊಬ್ಬರ ಹೃದಯದಲ್ಲಿ ಪ್ರತಿಧ್ವನಿಸುವ ರೀತಿಯಲ್ಲಿ ದೇಶವನ್ನು ಹೆಸರಿಸುವುದು ಮುಖ್ಯವಾಗಿದೆ. “ನೇಷನ್ ಎಂದರೆ ನಮಗೆ ಎಲ್ಲವೂ ಎಂದರೂ, ‘ಇಂಡಿಯಾ’ ಎಂಬ ಪದಕ್ಕೆ ಯಾವುದೇ ಅರ್ಥವಿಲ್ಲ. ರಾಷ್ಟ್ರದ ಹೆಸರನ್ನು ಅಧಿಕೃತವಾಗಿ ಬದಲಾಯಿಸಲು ನಮಗೆ ಸಾಧ್ಯವಾಗದಿದ್ದರೆ ಅಥವಾ ಇಷ್ಟವಿಲ್ಲದಿದ್ದರೆ, ನಾವು ಕನಿಷ್ಠ ಪಕ್ಷ ‘ಭಾರತ್’ ಅನ್ನು ನಮ್ಮ ದೈನಂದಿನ ಭಾಷೆಯಲ್ಲಿ ತರುವ ಸಮಯ ಬಂದಿದೆ. ಇಂಡಿಯಾ ಹುಟ್ಟುವ ಮೊದಲೇ ಭಾರತ ಅಸ್ತಿತ್ವದಲ್ಲಿತ್ತು ಎಂದು ಯುವ ಪೀಳಿಗೆ ತಿಳಿದಿರಬೇಕು. ಅಭಿನಂದನೆಗಳು,” ಎಂದು ಸದ್ಗುರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:21 pm, Thu, 20 June 24