Bihar Reservation: ಮೀಸಲಾತಿ ಪ್ರಮಾಣವನ್ನು ಶೇ.65ಕ್ಕೆ ಏರಿಸಿದ್ದ ಬಿಹಾರ ಸರ್ಕಾರದ ಆದೇಶ ರದ್ದುಪಡಿಸಿದ ಹೈಕೋರ್ಟ್
ಬಿಹಾರದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ನಿತೀಶ್ ಸರ್ಕಾರಕ್ಕೆ ಪಾಟ್ನಾ ಹೈಕೋರ್ಟ್ ದೊಡ್ಡ ಹೊಡೆತ ನೀಡಿದೆ. ಇಬಿಸಿ, ಎಸ್‌ಸಿ ಮತ್ತು ಎಸ್‌ಟಿಗೆ ಶೇ 65ರಷ್ಟು ಮೀಸಲಾತಿಯನ್ನು ಹೈಕೋರ್ಟ್ ಗುರುವಾರ (ಜೂನ್ 20) ರದ್ದುಪಡಿಸಿದೆ.
ಮೀಸಲಾತಿ(Reservation) ಪ್ರಮಾಣವನ್ನು ಶೇ.65ಕ್ಕೆ ಹೆಚ್ಚಿಸಿದ್ದ ಬಿಹಾರ ಸರ್ಕಾರದ ಆದೇಶವನ್ನು ಪಾಟ್ನಾ ಹೈಕೋರ್ಟ್ ರದ್ದುಗೊಳಿಸಿದೆ. ಬಿಹಾರದಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.65ಕ್ಕೆ ಏರಿಸಿ ನಿತೀಶ್ ಕುಮಾರ್(Nitish Kumar) ನೇತೃತ್ವದ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಈ ಸಂಬಂಧದ ಕಾನೂನನ್ನು ಬಿಹಾರದ ಪಾಟ್ನಾ ಹೈಕೋರ್ಟ್ ರದ್ದುಪಡಿಸಿದ್ದು ಇದನ್ನು ಸಂವಿಧಾನ ಬಾಹಿರ ಎಂದು ಹೇಳಿದೆ.
ಈ ಅರ್ಜಿಗಳಲ್ಲಿ, ರಾಜ್ಯ ಸರ್ಕಾರವು ನವೆಂಬರ್ 9, 2023 ರಂದು ಜಾರಿಗೆ ತಂದ ಕಾನೂನನ್ನು ಪ್ರಶ್ನಿಸಲಾಗಿದೆ. ಇದರಲ್ಲಿ ಎಸ್ ಸಿ, ಎಸ್ ಟಿ, ಇಬಿಸಿ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಶೇ.65ರಷ್ಟು ಮೀಸಲಾತಿ ನೀಡಲಾಗಿತ್ತು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಶೇ.35ರಷ್ಟು ಹುದ್ದೆಗಳಲ್ಲಿ ಮಾತ್ರ ಸರ್ಕಾರಿ ಸೇವೆಯನ್ನು ನೀಡಬಹುದಾಗಿದೆ.
ಬಿಹಾರದಲ್ಲಿ ಮೀಸಲಾತಿ ವ್ಯಾಪ್ತಿಯನ್ನು ವಿಸ್ತರಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ನಿಂದ ಹಿನ್ನಡೆಯಾದಂತಾಗಿದೆ. ಮೀಸಲಾತಿ ವ್ಯಾಪ್ತಿಯನ್ನು ಶೇ.50ರಿಂದ ಶೇ.65ಕ್ಕೆ ಹೆಚ್ಚಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಮತ್ತಷ್ಟು ಓದಿ:ನಾಚಿಕೆಯ ಸಂಗತಿ; ಪಿಎಂ ಮೋದಿಯ ಪಾದ ಮುಟ್ಟಿದ್ದಕ್ಕೆ ನಿತೀಶ್ ಕುಮಾರ್ ವಿರುದ್ಧ ಪ್ರಶಾಂತ್ ಕಿಶೋರ್ ವಾಗ್ದಾಳಿ
ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಎಸ್ಸಿ, ಎಸ್ಟಿ, ಇಬಿಸಿ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ರಾಜ್ಯ ಸರ್ಕಾರವು ಶೇ.65ರಷ್ಟು ಮೀಸಲಾತಿಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ವಿಚಾರಣೆ ವೇಳೆ ಪಾಟ್ನಾ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ಪೀಠ ಈ ತೀರ್ಪು ನೀಡಿದೆ. ರಾಜ್ಯ ಸರ್ಕಾರ ತಂದಿದ್ದ ಕಾನೂನನ್ನು ರದ್ದುಗೊಳಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಅರ್ಜಿದಾರ ಗೌರವ್ ಕುಮಾರ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿದ ನಂತರ ಮಾರ್ಚ್ 11ರಂದು ತೀರ್ಪನ್ನು ಕಾಯ್ದಿರಿಸಲಾಗಿತ್ತು, ಇಂದು ಪಾಟ್ನಾ ಹೈಕೋರ್ಟ್ ತೀರ್ಪು ನೀಡಿದೆ.
ಬಿಹಾರದ ಜನಸಂಖ್ಯೆ ಹಾಗೂ ಉದ್ಯೋಗದ ಪಾಲು ಎಷ್ಟು? ಬಿಹಾರ ಸರ್ಕಾರವು ಕಳೆದ ವರ್ಷಾಂತ್ಯದಲ್ಲಿ ವಿಧಾನಸಭೆಯಲ್ಲಿ ರಾಜ್ಯದ ಆರ್ಥಿಕ ಮತ್ತು ಶೈಕ್ಷಣಿಕ ಅಂಕಿಅಂಶಗಳನ್ನು ಮಂಡಿಸಿತ್ತು. ರಾಜ್ಯದ ಸರ್ಕಾರಿ ಉದ್ಯೋಗಗಳಲ್ಲಿ ಪ್ರತಿ ವರ್ಗದ ಪಾಲು ಎಷ್ಟು ಎಂದು ಸರ್ಕಾರ ಹೇಳಿತ್ತು.
ಬಿಹಾರದಲ್ಲಿ ಸಾಮಾನ್ಯ ವರ್ಗದ ಜನಸಂಖ್ಯೆಯು ಶೇ.15 ಮತ್ತು ಗರಿಷ್ಠ 6 ಲಕ್ಷದ 41 ಸಾವಿರದ 281 ಜನರು ಸರ್ಕಾರಿ ಉದ್ಯೋಗಗಳನ್ನು ಹೊಂದಿದ್ದಾರೆ. ಉದ್ಯೋಗದಲ್ಲಿ ಶೇ.63ರಷ್ಟು ಜನಸಂಖ್ಯೆ ಹೊಂದಿರುವ ಹಿಂದುಳಿದ ವರ್ಗ ಎರಡನೇ ಸ್ಥಾನದಲ್ಲಿದೆ. ಹಿಂದುಳಿದ ವರ್ಗಗಳ ಒಟ್ಟು 6 ಲಕ್ಷದ 21 ಸಾವಿರದ 481 ಉದ್ಯೋಗದಲ್ಲಿದ್ದಾರೆ.
ಮೂರನೇ ಸ್ಥಾನದಲ್ಲಿ ಪರಿಶಿಷ್ಟ ಜಾತಿ ಶೇ.10ರಷ್ಟು ಇದೆ, ಎಸ್ಸಿ ವರ್ಗದಲ್ಲಿ 2 ಲಕ್ಷ 91 ಸಾವಿರದ 4 ಉದ್ಯೋಗಿಗಳಿದ್ದಾರೆ, ಪರಿಶಿಷ್ಟ ಪಂಗಡವು 30 ಸಾವಿರದ 164 ಮಂದಿ ಸರ್ಕಾರಿ ಉದ್ಯೋಗಗಳನ್ನು ಹೊಂದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ