AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬಕಾರಿ ನೀತಿ ಪ್ರಕರಣ: ಅರವಿಂದ್ ಕೇಜ್ರಿವಾಲ್ ಜಾಮೀನು ಅರ್ಜಿಯ ಆದೇಶ ಕಾಯ್ದಿರಿಸಿದ ದೆಹಲಿ ನ್ಯಾಯಾಲಯ

ರೋಸ್ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶ ನಿಯಾಯ್ ಬಿಂದು ಅವರು ಗುರುವಾರ ಈ ಪ್ರಕರಣದ ಆದೇಶವನ್ನು ಕಾಯ್ದಿರಿಸುವ ಮೊದಲು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದರು. ಎಲ್ಲಾ ವಕೀಲರು ತಮ್ಮ ವಾದಗಳಲ್ಲಿ ಸಂಕ್ಷಿಪ್ತವಾಗಿರಲು ಕೇಳಿದಾಗ ನ್ಯಾಯಾಧೀಶರು ಈ ವಿಷಯವನ್ನು ಅನಿರ್ದಿಷ್ಟವಾಗಿ ಬಾಕಿ ಇರಿಸಲು ಬಯಸುವುದಿಲ್ಲ ಎಂದು ಸೂಚಿಸಿದರು.

ಅಬಕಾರಿ ನೀತಿ ಪ್ರಕರಣ: ಅರವಿಂದ್ ಕೇಜ್ರಿವಾಲ್ ಜಾಮೀನು ಅರ್ಜಿಯ ಆದೇಶ ಕಾಯ್ದಿರಿಸಿದ ದೆಹಲಿ ನ್ಯಾಯಾಲಯ
ಅರವಿಂದ್ ಕೇಜ್ರಿವಾಲ್
ರಶ್ಮಿ ಕಲ್ಲಕಟ್ಟ
|

Updated on: Jun 20, 2024 | 1:13 PM

Share

ದೆಹಲಿ ಜೂನ್ 20: ಈಗ ರದ್ದುಗೊಂಡಿರುವ ದೆಹಲಿಯ ಅಬಕಾರಿ ನೀತಿಯಲ್ಲಿನ (excise policy)ಅಕ್ರಮಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (Enforcement Directorate) ತನಿಖೆ ನಡೆಸುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಕೋರಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಮನವಿ ಸಲ್ಲಿಸಿದ್ದು, ಈ ಮನವಿಯ ಆದೇಶವನ್ನು ದೆಹಲಿ ನ್ಯಾಯಾಲಯವು ಗುರುವಾರ ಕಾಯ್ದಿರಿಸಿದೆ. ವೈದ್ಯಕೀಯ ಮಂಡಳಿಯ ಪರೀಕ್ಷೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಲು ಪತ್ನಿ ಸುನಿತಾ ಕೇಜ್ರಿವಾಲ್‌ಗೆ ಅನುಮತಿ ನೀಡುವಂತೆ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ಆದೇಶವನ್ನೂ ನ್ಯಾಯಾಲಯ ಕಾಯ್ದಿರಿಸಿದೆ.

ರೋಸ್ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶ ನಿಯಾಯ್ ಬಿಂದು ಅವರು ಗುರುವಾರ ಈ ಪ್ರಕರಣದ ಆದೇಶವನ್ನು ಕಾಯ್ದಿರಿಸುವ ಮೊದಲು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದರು. ಎಲ್ಲಾ ವಕೀಲರು ತಮ್ಮ ವಾದಗಳಲ್ಲಿ ಸಂಕ್ಷಿಪ್ತವಾಗಿರಲು ಕೇಳಿದಾಗ ನ್ಯಾಯಾಧೀಶರು ಈ ವಿಷಯವನ್ನು ಅನಿರ್ದಿಷ್ಟವಾಗಿ ಬಾಕಿ ಇರಿಸಲು ಬಯಸುವುದಿಲ್ಲ ಎಂದು ಸೂಚಿಸಿದರು. ದೆಹಲಿ ಮುಖ್ಯಮಂತ್ರಿಯ ಜಾಮೀನು ಅರ್ಜಿಯನ್ನು ವಿರೋಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ವಿ ರಾಜು, ಅಪರಾಧದ ಆದಾಯದ ಒಂದು ಭಾಗವನ್ನು ಗೋವಾ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗೋವಾದಲ್ಲಿ ಆಮ್ ಆದ್ಮಿ ಪಕ್ಷದ ಸಂಚಾಲಕನ ಹೋಟೆಲ್ ವಾಸ್ತವ್ಯಕ್ಕೆ ಬಳಸಲಾಗಿದೆ ಎಂದು ಸಾಬೀತುಪಡಿಸಲು ಇಡಿ ಸಾಕ್ಷ್ಯಾಧಾರಗಳನ್ನು ಹೊಂದಿದೆ ಎಂದು ವಾದಿಸಿದರು. .

ಗೋವಾ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಪ್ರಚಾರಕ್ಕಾಗಿ ಹಣವನ್ನು ನಿರ್ವಹಿಸಿದ ಸಹ-ಆರೋಪಿ ಚನ್‌ಪ್ರೀತ್ ಸಿಂಗ್ ಅವರು ಸ್ವೀಕರಿಸಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಫೆಡರಲ್ ಏಜೆನ್ಸಿಯು ದೂರವಾಣಿ ಕರೆಗಳು ಮತ್ತು ಕರೆ ಡೇಟಾ ದಾಖಲೆಗಳ (ಸಿಡಿಆರ್) ರೂಪದಲ್ಲಿ ಸಾಕ್ಷ್ಯವನ್ನು ಹೊಂದಿದೆ. ವಿವಿಧ ಅಂಗಡಿಯಾ ನೆಟ್​​ವರ್ಕ್​​​ಗಳ (ಅಂಗಡಿಯಾ ಅಂದರೆ ಅಮೂಲ್ಯ ವಸ್ತುಗಳ ವ್ಯವಹಾರಕ್ಕಾಗಿ ಬಳಸುವ ವಿಶ್ವಾಸರ್ಹ ನೆಟ್​​ವರ್ಕ್ ಇದಾಗಿದ್ದು, ಇದು ಬ್ಯಾಂಕ್​​​ನಂತೆಯೇ ಕಾರ್ಯನಿರ್ವಹಿಸುತ್ತದೆ)  ಮೂಲಕ ₹ 45 ಕೋಟಿ ನಗದು ಸ್ವೀಕರಿಸಿದ್ದು ಅರವಿಂದ್ ಕೇಜ್ರಿವಾಲ್ ಗೋವಾದಲ್ಲಿ ಹೋಟೆಲ್ ತಂಗಿದ್ದಕ್ಕಾಗಿ ಈ ನೆಟ್​​ವರ್ಕ್​​​ಗಳ ಖಾತೆಯಿಂದ ಪಾವತಿಸಲಾಗಿದೆ.

ಈ ನೆಟ್​​ವರ್ಕ್​​​ಗಳಿಂದ ವಶಪಡಿಸಿಕೊಂಡ ಟೋಕನ್ ಸಂಖ್ಯೆಗಳು ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ನೇರ ಸಂಪರ್ಕವನ್ನು ಹೊಂದಿವೆ ಎಂದು ಕಾನೂನು ಅಧಿಕಾರಿ ತಿಳಿಸಿದ್ದಾರೆ.

“ಇಡಿ ಸುಖಾಸುಮ್ಮನೆ ತನಿಖೆ ನಡೆಸುತ್ತಿದೆ ಎಂದಲ್ಲ. ಖಚಿತವಾದ ಪುರಾವೆಗಳಿವೆ, ”ರಾಜು ಹೇಳಿದ್ದಾರೆ.

ಗೋವಾ ಚುನಾವಣೆಯ ಪ್ರಚಾರದ ವೇಳೆ “ಸೌತ್ ಗ್ರೂಪ್” ನಿಂದ ಎಎಪಿಗೆ ನಗದು ಲಂಚವನ್ನು ವರ್ಗಾಯಿಸಿದ ಆರೋಪದ ಸಹ ಆರೋಪಿ ವಿನೋದ್ ಚೌಹಾಣ್ ಅವರೊಂದಿಗೆ ಸಿಎಂ “ಉತ್ತಮ ಸಂಬಂಧ” ಹೊಂದಿದ್ದಾರೆ ಎಂದು ಕಾನೂನು ಅಧಿಕಾರಿ ತಿಳಿಸಿದ್ದಾರೆ. “ಸಿಎಂ ಈ ನೆಟ್ವರ್ಕ್ ಮಾಲೀಕರೊಂದಿಗೆ ಏನು ಮಾಡುತ್ತಿದ್ದರು? ಅರವಿಂದ್ ಕೇಜ್ರಿವಾಲ್ ಅವರು ವಿನೋದ್ ಚೌಹಾನ್ ಅವರೊಂದಿಗೆ ಚಾಟ್ ಮಾಡುತ್ತಿದ್ದರು ಎಂದು ರಾಜು ಹೇಳಿದ್ದಾರೆ.

ಎಎಪಿಯ ವ್ಯವಹಾರಗಳಿಗೆ ಸಿಎಂ ನೇರ ಜವಾಬ್ದಾರರು ಮತ್ತು ಪಕ್ಷದ ಮೂಲಕ ಮಾಡಿದ ಅಕ್ರಮ ಹಣ ವರ್ಗಾವಣೆಗೆ ನೇರ ಹೊಣೆಗಾರರು ಎಂದು ಅವರು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಯಾವಾಗಲೂ ಬಿಳಿ ಬಣ್ಣದ ಟಿ ಶರ್ಟ್​ ಧರಿಸುವುದೇಕೆ?

ಬಂಧನದ ಸಮಯಕ್ಕೆ ಸಂಬಂಧಿಸಿದಂತೆ, ಇಡಿ ಆತುರದಲ್ಲಿ ಕಾರ್ಯನಿರ್ವಹಿಸಲಿಲ್ಲ. “ವಿವರವಾದ ದಾಖಲೆಗಳನ್ನು” ಪರಿಗಣಿಸಿ ಯಾವುದೇ ಬಲವಂತದ ಕ್ರಮದ ಪರಿಹಾರವನ್ನು ದೆಹಲಿ ಹೈಕೋರ್ಟ್ ನಿರಾಕರಿಸಿದ ನಂತರವೇ ಸಿಎಂ ಅವರನ್ನು ಬಂಧಿಸಿದೆ. ವಿಭಾಗೀಯ ಪೀಠವು ಸಾಕ್ಷ್ಯಗಳು ಸಮರ್ಪಕವಾಗಿದೆ ಎಂದು ಕಂಡುಹಿಡಿದಿದೆ. ಒಂಬತ್ತು ಸಮನ್ಸ್‌ಗಳಿಗೆ ಹಾಜರಾಗದಿದ್ದರೂ ಫೆಡರಲ್ ಏಜೆನ್ಸಿ ಸಿಎಂ ಅವರನ್ನು ಬಂಧಿಸಲಿಲ್ಲ ಎಂದು ರಾಜು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!