Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಯಾವಾಗಲೂ ಬಿಳಿ ಬಣ್ಣದ ಟಿ ಶರ್ಟ್​ ಧರಿಸುವುದೇಕೆ?

ಸಂಸದ ರಾಹುಲ್​ ಗಾಂಧಿ ಯಾವಾಗಲೂ ವೈಟ್​ ಟಿ ಶರ್ಟ್​ ಯಾಕೆ ಧರಿಸುತ್ತಾರೆ ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ. ಅವರು ತಮ್ಮ 54ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಬೆನ್ನಲ್ಲೇ ತಾವು ಬಿಳಿ ಬಣ್ಣದ ಟಿ ಶರ್ಟ್​ ಯಾಕೆ ಧರಿಸುತ್ತೇನೆ ಎಂಬುದರ ಕುರಿತು ಎಕ್ಸ್​ನಲ್ಲಿ ಬರೆದಿದ್ದಾರೆ.

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಯಾವಾಗಲೂ ಬಿಳಿ ಬಣ್ಣದ ಟಿ ಶರ್ಟ್​ ಧರಿಸುವುದೇಕೆ?
ರಾಹುಲ್ ಗಾಂಧಿImage Credit source: India Today
Follow us
ನಯನಾ ರಾಜೀವ್
|

Updated on:Jun 20, 2024 | 10:01 AM

ಕಾಂಗ್ರೆಸ್​ ನಾಯಕ, ಸಂಸದ ರಾಹುಲ್​ ಗಾಂಧಿ(Rahul Gandhi) ನಿನ್ನೆಯಷ್ಟೇ ತಮ್ಮ 54ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ವೈಟ್​ ಟಿ ಶರ್ಟ್​ ಅಭಿಯಾನಕ್ಕೆ ಕೂಡ ಚಾಲನೆ ನೀಡಿದ್ದಾರೆ.  ರಾಹುಲ್ ಗಾಂಧಿ ಸದಾ ಬಿಳಿ ಬಣ್ಣದ ಟಿ ಶರ್ಟ್​ ಧರಿಸುವುದೇಕೆ ಎನ್ನುವ ಕುತೂಹಲ ಒಂದಿಷ್ಟು ಮಂದಿಯಲ್ಲಿ ಇರಬಹುದು. ಇದಕ್ಕೆ ಖುದ್ದಾಗಿ ರಾಹುಲ್​ ಗಾಂಧಿಯೇ ಉತ್ತರ ನೀಡಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್ ನಲ್ಲಿ ರಾಹುಲ್ ಗಾಂಧಿ ಹುಟ್ಟುಹಬ್ಬದ ಶುಭಾಶಯಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಹುಟ್ಟುಹಬ್ಬದ ಶುಭಾಶಯಗಳಿಗಾಗಿ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಾನು ಯಾವಾಗಲೂ ಬಿಳಿ ಟಿ-ಶರ್ಟ್ ಅನ್ನು ಏಕೆ ಧರಿಸುತ್ತೇನೆ ಎಂದು ನನ್ನನ್ನು ಆಗಾಗ ಜನರು ನನ್ನನ್ನು ಕೇಳುತ್ತಿರುತ್ತಾರೆ. ಈ ಟಿ ಶರ್ಟ್ ನನಗೆ ಪಾರದರ್ಶಕತೆ, ಸ್ಥಿರತೆ ಮತ್ತು ಸರಳತೆಯನ್ನು ಪ್ರತಿನಿಧಿಸುತ್ತದೆ ಎಂದು ಬರೆದಿದ್ದಾರೆ.

ಬುಧವಾರ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ನವದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು.

ಮತ್ತಷ್ಟು ಓದಿ: ಸಾಮಾನ್ಯ ಸಂಸದನಷ್ಟೇ, ರಾಹುಲ್​ ಗಾಂಧಿಯನ್ನೇಕೆ ಹೈಲೈಟ್​ ಮಾಡ್ತೀರಾ? : ದಿಗ್ವಿಜಯ ಸಿಂಗ್ ಸಹೋದರ

ಜೂನ್ 19, 1970 ರಂದು ಜನಿಸಿದ ರಾಹುಲ್ ಗಾಂಧಿ ಅವರು ಐದು ಬಾರಿ ಲೋಕಸಭಾ ಸಂಸದರಾಗಿದ್ದಾರೆ, ಅವರು 2004 ರಲ್ಲಿ ರಾಜಕೀಯ ಪ್ರವೇಶಿಸಿದರು ಮತ್ತು ಉತ್ತರ ಪ್ರದೇಶದ ಅಮೇಥಿಯಿಂದ ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದರು. ಸೆಪ್ಟೆಂಬರ್ 2022 ರಲ್ಲಿ, ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4,080 ಕಿಮೀ ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಿದರು.

ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಕೇರಳದ ವಯನಾಡ್ ಕ್ಷೇತ್ರ ಹಾಗೂ ರಾಯ್​ಬರೇಲಿಯಿಂದ ಸ್ಪರ್ಧಿಸಿ ಎರಡೂ ಕಡೆಗಳಲ್ಲಿ ಗೆಲುವು ಸಾಧಿಸಿದ್ದರು. ನಂತರ ಅವರು ವಯನಾಡ್ ಸ್ಥಾನವನ್ನು ತೊರೆಯಲು ನಿರ್ಧರಿಸಿದ್ದಾರೆ, ಈಗ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಅಲ್ಲಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:00 am, Thu, 20 June 24

ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಲಾರಿಗೆ ಡಿಕ್ಕಿ ಹೊಡೆದ ಮುಂಬೈ- ಅಮರಾವತಿ ಎಕ್ಸ್​ಪ್ರೆಸ್​ ರೈಲು
ಲಾರಿಗೆ ಡಿಕ್ಕಿ ಹೊಡೆದ ಮುಂಬೈ- ಅಮರಾವತಿ ಎಕ್ಸ್​ಪ್ರೆಸ್​ ರೈಲು
ಮಹಿಳೆಯೊಂದಿಗೆ ಕಿರಿಕ್​:ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್
ಮಹಿಳೆಯೊಂದಿಗೆ ಕಿರಿಕ್​:ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್
ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ನಿಂತುಹೋಗಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಕೋರಿದೆ: ರೇಣುಕಾಚಾರ್ಯ
ನಿಂತುಹೋಗಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಕೋರಿದೆ: ರೇಣುಕಾಚಾರ್ಯ
ವಿದ್ಯಾರ್ಥಿಗಳ ಕಳಪೆ ಪ್ರದರ್ಶನ, ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡ ಶಿಕ್ಷಕರು
ವಿದ್ಯಾರ್ಥಿಗಳ ಕಳಪೆ ಪ್ರದರ್ಶನ, ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡ ಶಿಕ್ಷಕರು
ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರರು:ಖಾದರ್
ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರರು:ಖಾದರ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್