ಸಚಿವರ ಕ್ಷೇತ್ರದಲ್ಲೇ ಮತ ಕಡಿಮೆ; ನನಗೂ, ಸಿಎಂಗೂ ರಾಹುಲ್​ ಗಾಂಧಿ ರಿಪೋರ್ಟ್ ಕೇಳಿದ್ರು-ಡಿಕೆ ಶಿವಕುಮಾರ್​

ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ವಿರುದ್ಧ 40% ಸರ್ಕಾರ ಎಂದು ಅಪಪ್ರಚಾರ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಜೂ.07) ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ನೂತನವಾಗಿ ಆಯ್ಕೆ ಆದ ಸಂಸದರ ಜೊತೆ ಮಾತುಕತೆ ನಡೆಸಿದ್ದಾರೆ. ಈ ಕುರಿತು ಡಿಕೆ ಶಿವಕುಮಾರ್​ ಮಾತನಾಡಿ, ‘ಸಚಿವರ ಕ್ಷೇತ್ರದಲ್ಲೇ ಮತ ಕಡಿಮೆಯಾಗಿದೆ ಈ ಹಿನ್ನಲೆ ನನಗೂ, ಸಿಎಂ ಅವರಿಗೂ ರಾಹುಲ್​ ಗಾಂಧಿ ಅವರು ವರದಿ ಕೇಳಿದ್ದಾರೆ ಎಂದಿದ್ದಾರೆ.

ಸಚಿವರ ಕ್ಷೇತ್ರದಲ್ಲೇ ಮತ ಕಡಿಮೆ; ನನಗೂ, ಸಿಎಂಗೂ ರಾಹುಲ್​ ಗಾಂಧಿ ರಿಪೋರ್ಟ್ ಕೇಳಿದ್ರು-ಡಿಕೆ ಶಿವಕುಮಾರ್​
ಡಿಕೆ ಶಿವಕುಮಾರ್​
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Jun 07, 2024 | 3:13 PM

ಬೆಂಗಳೂರು, ಜೂ.07: ಕಾಂಗ್ರೆಸ್​ ನಾಯಕ, ಸಂಸದ ರಾಹುಲ್​ ಗಾಂಧಿ(Rahul Gandhi )ಅವರು ಇಂದು(ಜೂ.07) ಬೆಂಗಳೂರಿಗೆ ಆಗಮಿಸಿ ನೂತನವಾಗಿ ಆಯ್ಕೆಯಾಗಿರುವ ಸಂಸದರನ್ನು ಭೇಟಿ ಮಾಡಿದರು. ಈ ಕುರಿತು ಮಾತನಾಡಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar)​, ‘ಸಂಸದರು ಯಾವ ರೀತಿ ಕೆಲಸ ಮಾಡಬೇಕು ಎನ್ನುವುದನ್ನ‌ ಹೇಳಿದ್ದಾರೆ. ಬೆಂಗಳೂರು, ದೆಹಲಿ ಬಿಟ್ಟು ನಿಮ್ಮ ಕ್ಷೇತ್ರದಲ್ಲಿ ಕೆಲಸ‌ ಮಾಡಿ, ನಿಮ್ಮ ಜನರ ನಡುವೆಯೇ ನೀವು ಇರಬೇಕು. ಸೋತವರೂ ಕೂಡ ಜನರ ಮಧ್ಯೆಯೇ ಇದ್ದು, ನಿಮ್ಮ ಧ್ವನಿ ನಿಮ್ಮ ರಾಜ್ಯದ ಪರವಾಗಿ‌ ಇರಬೇಕು ಎಂದಿರುವುದಾಗಿ ಹೇಳಿದರು.

‘ಜೊತೆಗೆ ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿ, ಕಳಸಾ ಬಂಡೂರಿ, ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಪ್ರಸ್ತಾಪಿಸಿ ಮತ್ತು ಮಲತಾಯಿ ಧೋರಣೆ ಆಗಿರುವ ಬಗ್ಗೆ ಅನ್ಯಾಯದ ಕುರಿತು ಹೋರಾಡುವ ಮೂಲಕ ನಿಮ್ಮ ರಾಜ್ಯದ ಪರ ನಿಲ್ಲಿ ಎಂದು ಸೂಚನೆ ಕೊಟ್ಟಿದ್ದಾರೆ ಎಂದರು. ಈ ವೇಳೆ ಕೆಲ‌ ಮಂತ್ರಿಗಳನ್ನು ರಾಹುಲ್​ ಗಾಂಧಿ ಅವರು ಭೇಟಿ ಮಾಡಿದ್ದಾರೆ. ಅವರು ಗೆದ್ದ ಕ್ಷೇತ್ರದಲ್ಲಿ ಏನಾಯ್ತು, ಯಾಕೆ‌ ವೋಟಿಂಗ್ ಕಡಿಮೆಯಾಗಿದೆ ಎಂಬ ಎಲ್ಲಾ ಮಾಹಿತಿ ಪಡೆದಿದ್ದಾರೆ. ಎಲ್ಲರಿಗೂ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:ಕೆಪಿಸಿಸಿ ಕಚೇರಿಯಲ್ಲಿ ರಾಹುಲ್​ ಗಾಂಧಿ ಮೀಟಿಂಗ್ ಬಗ್ಗೆ ನನಗೆ ಗೊತ್ತಿಲ್ಲ: ಪರಮೇಶ್ವರ್​

ನನಗೂ, ಸಿಎಂ ಅವರಿಗೂ ರಿಪೋರ್ಟ್ ‌ಕೇಳಿದ್ದಾರೆ

ಇನ್ನು ನಾಳೆ(ಜೂ.08) ಮೀಟಿಂಗ್ ಇದೆ, ಎಲ್ಲ ಮುಗಿಸಿಕೊಂಡು ನಾವು ರಿಪೇರಿ ಮಾಡುತ್ತೇವೆ. ಅದಕ್ಕೆ ನಾವೆಲ್ಲರೂ ಸಿದ್ದತೆ ಕೈಗೊಳ್ಳುತ್ತೇವೆ. ಕಲ್ಯಾಣ ಕರ್ನಾಟಕದಲ್ಲಿ ಐದಕ್ಕೆ ಐದು ಸೀಟು ಗೆದ್ದಿದ್ದೇವೆ. ಅಲ್ಲಿನ‌ ಜನರ ಖುಣ ತೀರಿಸಬೇಕಾಗಿದೆ ಎಂದರು. ಇದರ ಜೊತೆಗೆ ಸಚಿವರ ಕ್ಷೇತ್ರದಲ್ಲೇ ಮತ ಕಡಿಮೆಯಾಗಿರುವ ವಿಚಾರವಾಗಿ ರಾಹುಲ್ ಕೇಳಿದ್ದಾರೆ. ಅದಕ್ಕೂ ಚರ್ಚೆಯಾಗಬೇಕು, ನಾವು ಮಾತನಾಡುತ್ತೇವೆ. ನನಗೂ, ಸಿಎಂ ಅವರಿಗೂ ರಿಪೋರ್ಟ್ ‌ಕೇಳಿದ್ದಾರೆ. ನಾವು ಎಲ್ಲಾ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.

 ಕೋರ್ಟ್​ಗೆ ಬಂದಿದ್ದ ರಾಹುಲ್‌ ಗಾಂಧಿ

ಇನ್ನು ರಾಹುಲ್​ ಗಾಂಧಿ ಬೆಂಗಳೂರಿಗೆ ಬಂದಿದ್ದ ಕುರಿತು, ‘ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ವಿರುದ್ದ ಅಪ್ರಚಾರ ಮಾಡಿದ್ದ ಹಿನ್ನಲೆ ಬಿಜೆಪಿ ಕೇಸ್​ ದಾಖಲು ಮಾಡಿತ್ತು. ಈ ಹಿನ್ನಲೆ ಇಂದು ಕೋರ್ಟ್​ಗೆ ಬೆಂಗಳೂರಿಗೆ ಬಂದಿದ್ದರು. ‘ಬಿಜೆಪಿಯವರು ಯತ್ನಾಳ್ ಹೇಳಿಕೆ, ರೇಟ್ ಕಾರ್ಡ್ ಪ್ರಸ್ತಾಪಿಸಿ ನಾವು ಜಾಹೀರಾತು ಕೊಟ್ಟಿದ್ದೇವು. ಆದರೆ ಇದರಲ್ಲಿ ರಾಗುಲ್ ಗಾಂಧಿ ಅವರನ್ನ ಎಳೆದು‌ತಂದಿದ್ದಾರೆ. ‘ನಾನು ಅಧ್ಯಕ್ಷ ಆಗಿರುವ ಸಮಯದಲ್ಲಿ ಜಾಹೀರಾತು ನೀಡಿದ್ವಿ, ರಾಜಕೀಯ ಮಾಡೋದಕ್ಕೆ ಈ ರೀತಿ, ತೊಂದರೆ ನೀಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:ಈ ಬಾರಿಯ ಚುನಾವಣೆಯಲ್ಲೂ ಕಾಂಗ್ರೆಸ್​ ಸೋತರೆ ರಾಹುಲ್​ ಗಾಂಧಿ ಏನು ಮಾಡಬೇಕು? ಪ್ರಶಾಂತ್​ ಕಿಶೋರ್​ ಸಲಹೆ ಏನು?

ನಾಗೇಂದ್ರ ರಾಜೀನಾಮೆ‌ ವಿಚಾರ, ‘ಸೂಸೈಡ್ ಮಾಡಿಕೊಂಡಿರುವುದರಿಂದ ಇದು ಹೊರಗೆ ಬಂದಿದೆ. ಎಲ್ಲಿ ಬೇಕಾದರೂ ತನಿಖೆ ಆಗಲಿ. ಪಕ್ಷಕ್ಕೆ ತೊಂದರೆ, ಮುಜುಗರ ಆಗಬಾರದು ಎನ್ನುವ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಯಾರ ಒತ್ತಾಯಕ್ಕೂ ರಾಜೀನಾಮೆ ಕೊಟ್ಟಿಲ್ಲ. ಇದೇ ವೇಳೆ ಪರಿಷತ್ ಚುನಾವಣೆಯಲ್ಲಿ ಆರು ಸ್ಥಾನ ಗೆಲ್ಲುತ್ತೇವೆ ಎಂದಿದ್ವಿ, ಈಗ ಮೂರು ಗೆದ್ದಿದ್ದೇವೆ. ನಾಳೆ‌ ಬೆಳಗ್ಗೆ ನಾನು, ಸಿಎಂ ಇಬ್ಬರೂ ದೆಹಲಿಗೆ ಹೋಗುತ್ತಿದ್ದೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:10 pm, Fri, 7 June 24

ತಾಜಾ ಸುದ್ದಿ