Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬಾರಿಯ ಚುನಾವಣೆಯಲ್ಲೂ ಕಾಂಗ್ರೆಸ್​ ಸೋತರೆ ರಾಹುಲ್​ ಗಾಂಧಿ ಏನು ಮಾಡಬೇಕು? ಪ್ರಶಾಂತ್​ ಕಿಶೋರ್​ ಸಲಹೆ ಏನು?

ಲೋಕಸಭೆ ಚುನಾವಣೆ(Lok Sabha Election)ಗೂ ಮುನ್ನ ರಾಜಕೀಯ ತಂತ್ರಜ್ಞ ಪ್ರಶಾಂತ್​ ಕಿಶೋರ್(Prashant Kishor) ದೇಶದಲ್ಲಿ ಬಿಜೆಪಿ ಅಲೆ ಹಾಗೂ ಪ್ರತಿಪಕ್ಷಗಳ ಸದ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ. ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ದೇಶದ ಯಾವ ರಾಜ್ಯಗಳಲ್ಲಿ ಬಿಜೆಪಿ ಪ್ರಬಲ ಹಿಡಿತ ಹೊಂದಿದೆ ಎಂಬುದನ್ನು ಪ್ರಸ್ತಾಪಿಸಿದರು.

ಈ ಬಾರಿಯ ಚುನಾವಣೆಯಲ್ಲೂ ಕಾಂಗ್ರೆಸ್​ ಸೋತರೆ ರಾಹುಲ್​ ಗಾಂಧಿ ಏನು ಮಾಡಬೇಕು? ಪ್ರಶಾಂತ್​ ಕಿಶೋರ್​ ಸಲಹೆ ಏನು?
ಪ್ರಶಾಂತ್ ಕಿಶೋರ್Image Credit source: India TV
Follow us
ನಯನಾ ರಾಜೀವ್
|

Updated on:Apr 08, 2024 | 10:17 AM

ಲೋಕಸಭೆ ಚುನಾವಣೆ(Lok Sabha Election)ಗೂ ಮುನ್ನ ರಾಜಕೀಯ ತಂತ್ರಜ್ಞ ಪ್ರಶಾಂತ್​ ಕಿಶೋರ್(Prashant Kishor) ದೇಶದಲ್ಲಿ ಬಿಜೆಪಿ ಅಲೆ ಹಾಗೂ ಪ್ರತಿಪಕ್ಷಗಳ ಸದ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ. ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ದೇಶದ ಯಾವ ರಾಜ್ಯಗಳಲ್ಲಿ ಬಿಜೆಪಿ ಪ್ರಬಲ ಹಿಡಿತ ಹೊಂದಿದೆ ಎಂಬುದನ್ನು ಪ್ರಸ್ತಾಪಿಸಿದರು. ಒಂದೊಮ್ಮೆ ಈ ಬಾರಿಯ ಚುನಾವಣೆಯಲ್ಲೂ ಕಾಂಗ್ರೆಸ್​ ಸೋತರೆ ರಾಹುಲ್ ಗಾಂಧಿ ಏನು ಮಾಡಬೇಕು ಎಂಬುದರ ಕುರಿತು ಸಲಹೆ ನೀಡಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತೆಲಂಗಾಣದಲ್ಲಿ ಮೊದಲ ಅಥವಾ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಒಡಿಶಾದಲ್ಲಿ ಪಕ್ಷವು ನಂಬರ್-1 ಆಗಿ ಹೊರಹೊಮ್ಮುವುದು ಖಚಿತ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಂಬರ್ ಒನ್ ಪಕ್ಷವಾಗಲಿದೆ, ತನಾಡಿನಂತಹ ರಾಜ್ಯಗಳಲ್ಲಿ ಬಿಜೆಪಿಯ ಮತ ಶೇಕಡಾವಾರು ಎರಡಂಕಿ ತಲುಪಬಹುದು ಎಂದು ಹೇಳಿದ್ದಾರೆ.

ಆದರೆ, ಬಿಜೆಪಿ 370 ಸ್ಥಾನ ಗೆಲ್ಲುವ ಸಾಧ್ಯತೆ ಕಡಿಮೆ ಎಂದು ಒತ್ತಿ ಹೇಳಿದರು. ಈ ಗುರಿ ಇಟ್ಟುಕೊಂಡು ಬಿಜೆಪಿ ಚುನಾವಣಾ ಕಣಕ್ಕೆ ಇಳಿದಿದೆ. ರಾಹುಲ್​ ಗಾಂಧಿಯವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅವರು, ಉತ್ತರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಗೆಲ್ಲದಿದ್ದರೆ ವಯನಾಡಿನಲ್ಲಿ ಗೆದ್ದರೂ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಅಮೇಥಿಯಲ್ಲಿ ಸ್ಪರ್ಧಿಸದಿರುವುದು ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತದೆ. ಪ್ರಶಾಂತ್​ ಕಿಶೋರ್ ಹೇಳಿದ್ದೇ ನಿಜವಾದಲ್ಲಿ ಕೇಂದ್ರದಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ಸಂಖ್ಯೆಗಿಂತ ಬಿಜೆಪಿ ಮುಂದಿದೆ.

ರಾಹುಲ್ ಗಾಂಧಿಗೆ ಎಲ್ಲವೂ ತನಗೆ ಗೊತ್ತಿದೆ ಎನ್ನುವ ಭಾವನೆ ಇದೆ, ನಿಮ್ಮ ಸಹಾಯದ ಅಗತ್ಯವನ್ನು ನೀವು ಗುರುತಿಸದ ಹೊರತು ಯಾರೂ ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ. ತಾಯಿ ಕೂಡ ಹಾಗೆಯೇ ಮಾಡಿದ್ದರು. ಪತಿ ರಾಜೀವ್ ಗಾಂಧಿ ಹತ್ಯೆ ನಂತರ ರಾಜಕೀಯದಿಂದ ದೂರವಿದ್ದು, 1991ರಲ್ಲಿ ಅಧಿಕಾರವಹಿಸಿಕೊಳ್ಳುವಂತೆ ಪಿವಿ ನರಸಿಂಹರಾವ್​ಗೆ ಸೋನಿಯಾ ಹೇಳಿದ್ದರು.

ಉತ್ತಮ ನಾಯಕನ ಗುಣವೆಂದರೆ ಅವರು ತಮ್ಮ ಕೊರತೆಯನ್ನು ಕೂಡ ಅರಿತಿರುತ್ತಾರೆ. 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ರಾಹುಲ್ ಗಾಂಧಿ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಇಂದು ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:15 am, Mon, 8 April 24