Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃತಕ ಗರ್ಭಧಾರಣೆಯಿಂದ ಅವಳಿ ಮಕ್ಕಳ ಜನನ.. ಡಿಎನ್ಎ ಪರೀಕ್ಷೆಯಿಂದ ಹೊರಬಿತ್ತು ಶಾಕಿಂಗ್ ನ್ಯೂಸ್!

ಹೈದರಾಬಾದ್​ ಮೂಲದ ಸಂತ್ರಸ್ತ ದಂಪತಿ ಸಂತಾನ ಬಯಸಿ, ಸಂತಾನೋತ್ಪತ್ತಿ ತಂತ್ರದ ಮೂಲಕ ಗರ್ಭ ಧರಿಸಲು ಆಸ್ಪತ್ರೆಯೊಂದನ್ನು ಸಂಪರ್ಕಿಸಿದ್ದರು. ಪರಿಣಾಮವಾಗಿ, ಅವರು 2009 ರಲ್ಲಿ ಅವಳಿ ಮಕ್ಕಳನ್ನು ಹೊಂದಿದ್ದರು. ಅಲ್ಲಿಯವರೆಗೆ ಎಲ್ಲವೂ ಸರಿಯಾಗಿಯೆ ಇತ್ತು. ಮುಂದೆ ಕಹಿ ಸತ್ಯವೊಂದು ಹೊರಬಿದ್ದಿದೆ. ಆ ಎರಡು ಶಿಶುಗಳ ಡಿಎನ್ಎ ಪರೀಕ್ಷೆಯನ್ನು ನಡೆಸಿದಾಗ, ಆ ಮಕ್ಕಳ ತಂದೆ ಬೇರೆಯೊಬ್ಬ ಎಂದು ಕಂಡುಬಂದಿದೆ. ಇಲ್ಲಿ ಆಸ್ಪತ್ರೆಯವರಿಗೆ ತಮ್ಮ ತಪ್ಪಿನ ಅರಿವಾಗಿದೆ. ಈ ಹಿನ್ನೆಲೆಯಲ್ಲಿ ದಂಪತಿಯಿಬ್ಬರೂ ನ್ಯಾಯಾಲಯದ ಮೊರೆ ಹೋಗಿದ್ದರು.

Follow us
ಸಾಧು ಶ್ರೀನಾಥ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 08, 2024 | 10:16 AM

ದೆಹಲಿಯಲ್ಲಿ (Delhi hospital) ಕೃತಕ ಗರ್ಭಧಾರಣೆಗೆಂದು ಆಸ್ಪತ್ರೆಗೆ ತೆರಳಿದ್ದ ದಂಪತಿಗೆ ಕಹಿ ಅನುಭವವಾಗಿದೆ. ತನ್ನ ಗಂಡನ ವೀರ್ಯದ (sperm) ಬದಲಿಗೆ ಇನ್ನೊಬ್ಬ ಪುರುಷನ ವೀರ್ಯವನ್ನು ಮಹಿಳೆಗೆ ಆಸ್ಪತ್ರೆಯಲ್ಲಿ ನೀಡಲಾಗಿತ್ತು. ಅದರಿಂದ ಅವಳು ತೀವ್ರವಾಗಿ ನೊಂದಿದ್ದಳು. ತನಗಾದ ಅನ್ಯಾಯದ ವಿರುದ್ಧ ಕಾನೂನು ಮೊರೆ ಹೋದ ದಂಪತಿಯನ್ನು ಕಾನೂನು ಕೈಹಿಡಿದಿದೆ. ಇದರಿಂದ ಸಂತ್ರಸ್ತಗೆ ಆಸ್ಪತ್ರೆಯು ಒಂದೂವರೆ ಕೋಟಿ ರೂಪಾಯಿ ಪರಿಹಾರ (fine) ನೀಡಬೇಕೆಂದು ಕೋರ್ಟ್​ ತೀರ್ಪು (National Consumer Disputes Redressal Commission -NCDRC) ನೀಡಿದೆ. ಈ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ದಿ ಹಿಂದೂ ವರದಿ ಮಾಡಿದೆ.

ಹೈದರಾಬಾದ್​ ಮೂಲದ ಸಂತ್ರಸ್ತ ದಂಪತಿ ಸಂತಾನ ಬಯಸಿ, ಸಂತಾನೋತ್ಪತ್ತಿ ತಂತ್ರದ ಮೂಲಕ ಗರ್ಭ ಧರಿಸಲು ಆಸ್ಪತ್ರೆಯೊಂದನ್ನು ಸಂಪರ್ಕಿಸಿದ್ದರು. ಪರಿಣಾಮವಾಗಿ, ಅವರು 2009 ರಲ್ಲಿ ಅವಳಿ ಮಕ್ಕಳನ್ನು ಹೊಂದಿದ್ದರು. ಅಲ್ಲಿಯವರೆಗೆ ಎಲ್ಲವೂ ಸರಿಯಾಗಿಯೆ ಇತ್ತು. ಮುಂದೆ ಕಹಿ ಸತ್ಯವೊಂದು ಹೊರಬಿದ್ದಿದೆ. ಆ ಎರಡು ಶಿಶುಗಳ ಡಿಎನ್ಎ ಪರೀಕ್ಷೆಯನ್ನು ನಡೆಸಿದಾಗ, ಆ ಮಕ್ಕಳ ತಂದೆ ಬೇರೆಯೊಬ್ಬ ಎಂದು ಕಂಡುಬಂದಿದೆ. ಇಲ್ಲಿ ಆಸ್ಪತ್ರೆಯವರಿಗೆ ತಮ್ಮ ತಪ್ಪಿನ ಅರಿವಾಗಿದೆ. ಈ ಹಿನ್ನೆಲೆಯಲ್ಲಿ ದಂಪತಿಯಿಬ್ಬರೂ ನ್ಯಾಯಾಲಯದ ಮೊರೆ ಹೋಗಿದ್ದರು.

Also Read:  ಈ ಲಕ್ಷಣಗಳು ಕ್ಯಾನ್ಸರ್​​​ನ ಆರಂಭಿಕ ಚಿಹ್ನೆಗಳಾಗಿರಬಹುದು, ಎಂದಿಗೂ ನಿರ್ಲಕ್ಷ್ಯಬೇಡ

ಆಸ್ಪತ್ರೆಯವರು 2 ಕೋಟಿ ಪರಿಹಾರ ನೀಡಬೇಕು ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ಈ ಬಗ್ಗೆ ಹಲವು ವರ್ಷಗಳಿಂದ ಸುದೀರ್ಘ ವಿಚಾರಣೆ ನಡೆದಿತ್ತು. ಇದೀಗ ನ್ಯಾಯಾಲಯವು ಪ್ರಕರಣದಲ್ಲಿ ದಂಪತಿಯ ಪರವಾಗಿ ತೀರ್ಪು ನೀಡಿದೆ. ತಪ್ಪಿತಸ್ಥ ಆಸ್ಪತ್ರೆ ಆಡಳಿತ ಮಂಡಳಿಯು ದಂಪತಿಗೆ 1.5 ಕೋಟಿ ರೂ. ಪರಿಹಾರ ಪಾವತಿಸುವಂತೆ ಎನ್‌ಸಿಡಿಆರ್‌ಸಿ ಆದೇಶಿಸಿದೆ. ಏತನ್ಮಧ್ಯೆ, ಕೃತಕ ಗರ್ಭಧಾರಣೆಗೆ ಸಂಬಂಧಿಸಿದ ಕಾರ್ಯವಿಧಾನಗಳನ್ನು ಹೊಸದಾಗಿ ರೂಪಿಸಬೇಕು ಮತ್ತು ಜನಿಸಿದ ಮಗುವಿನ ಡಿಎನ್‌ಎ ( DNA profiling) ವಿವರಗಳನ್ನು ಸಹ ನೀಡಬೇಕು ಎಂದೂ ಆಯೋಗವು ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಎರಡೂ ಪಕ್ಷಗಳ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿ, ಅಶೋಕ ಅಧ್ಯಕ್ಷತೆ

ಲೋಕಾಯುಕ್ತ ವರದಿ ಮತ್ತು ಶಿಫಾರಸ್ಸನ್ನು ನಾನು ಇನ್ನೂ ಓದಿಲ್ಲ: ಶಿವಕುಮಾರ್

ಬೆಳಗಾವಿ, ಖಾನಾಪುರ, ನಿಪ್ಪಾಣಿಯಲ್ಲಿ ಕನ್ನಡ ಮಾತಾಡುವವರೇ ವಿರಳ: ಹೊರಟ್ಟಿ

ಜಿಟಿ ದೇವೇಗೌಡರ ಬಗ್ಗೆ ಅಪಾರವಾದ ಗೌರವವಿದೆ: ನಿಖಿಲ್ ಕುಮಾರಸ್ವಾಮಿ

ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಮಾಡಿದ ಸಾಧನೆ ಏನು? ಜಮೀರ್

ಬೆಂಗಳೂರು: ವೀಲಿಂಗ್ ಮಾಡಿದ್ದರ ವಿರುದ್ಧ ರೌಡಿಶೀಟ್​​ ಓಪನ್​

ಕಂಡಕ್ಟರ್ ನಮ್ಮ ಮಗಳ ವಿರುದ್ಧ ಅವಾಚ್ಯ ಪದ ಬಳಸಿದ್ದು ನಿಜ: ಪಾಲಕರು

ನಡೆದಿರುವ ಅಚಾತುರ್ಯದ ಬಗ್ಗೆ ಶಿವಲಿಂಗೇಗೌಡರಿನ್ನೂ ಪ್ರತಿಕ್ರಿಯೆ ನೀಡಿಲ್ಲ

ದೊಡ್ಡಬಳ್ಳಾಪುರ: ಭೀಕರ ರಸ್ತೆ ಅಪಘಾತ, ನಾಲ್ಕು ಪಲ್ಟಿಯಾದ ಕಾರು

ಗ್ಯಾರಂಟಿ ಯೋಜನೆಗಳು ಹೊರೆಯಾಗಿವೆ, ಅದರಲ್ಲಿ ಎರಡು ಮಾತಿಲ್ಲ: ಪರಮೇಶ್ವರ್