Sign In

By signing in or creating an account, you agree with Associated Broadcasting Company's Terms & Conditions and Privacy Policy.

Cancer Symptoms: ಈ ಲಕ್ಷಣಗಳು ಕ್ಯಾನ್ಸರ್​​​ನ ಆರಂಭಿಕ ಚಿಹ್ನೆಗಳಾಗಿರಬಹುದು, ಎಂದಿಗೂ ನಿರ್ಲಕ್ಷ್ಯಬೇಡ

ಪುರುಷರು ಮತ್ತು ಮಹಿಳೆಯರಲ್ಲಿ ಕ್ಯಾನ್ಸರ್ನ ಸಾಮಾನ್ಯವಾಗಿ ನಿರ್ಲಕ್ಷಿಸಲ್ಪಟ್ಟ ರೋಗಲಕ್ಷಣಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

Cancer Symptoms: ಈ ಲಕ್ಷಣಗಳು ಕ್ಯಾನ್ಸರ್​​​ನ ಆರಂಭಿಕ ಚಿಹ್ನೆಗಳಾಗಿರಬಹುದು, ಎಂದಿಗೂ ನಿರ್ಲಕ್ಷ್ಯಬೇಡ
ಕ್ಯಾನ್ಸರ್​​​ನ ಆರಂಭಿಕ ಚಿಹ್ನೆ
Follow us
ಅಕ್ಷತಾ ವರ್ಕಾಡಿ
|

Updated on: Jun 27, 2023 | 4:19 PM

ವಿಶ್ವಾದ್ಯಂತ ಸಾವಿಗೆ ಪ್ರಮುಖ ಕಾರಣಗಳಲ್ಲಿ ಕ್ಯಾನ್ಸರ್ ಒಂದಾಗಿದೆ. 2020 ರಲ್ಲಿ, ಸುಮಾರು 10 ಮಿಲಿಯನ್ ಜನರು ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ. ಸ್ತನ, ಶ್ವಾಸಕೋಶ, ಕೊಲೊನ್ ಮತ್ತು ಗುದನಾಳ ಮತ್ತು ಪ್ರಾಸ್ಟೇಟ್‌ನ ಕ್ಯಾನ್ಸರ್‌ಗಳು ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್‌ಗಳಾಗಿವೆ. ಕ್ಯಾನ್ಸರ್ ಚಿಕಿತ್ಸೆಯ ಮುಖ್ಯ ಅಡಚಣೆಗಳಲ್ಲಿ ಒಂದು ರೋಗನಿರ್ಣಯದ ವಿಳಂಬವಾಗಿದೆ, ಇದು ಗೆಡ್ಡೆಯ ಬೆಳವಣಿಗೆಯನ್ನು ತಡವಾಗಿ ಗುರುತಿಸುವುದರಿಂದ ಸಂಭವಿಸುತ್ತದೆ. ಪುರುಷರು ಮತ್ತು ಮಹಿಳೆಯರಲ್ಲಿ ಕ್ಯಾನ್ಸರ್ನ ಸಾಮಾನ್ಯವಾಗಿ ನಿರ್ಲಕ್ಷಿಸಲ್ಪಟ್ಟ ರೋಗಲಕ್ಷಣಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

ಆಯಾಸ:

ಆಯಾಸವು ಕ್ಯಾನ್ಸರ್​​​ನ ಒಂದು ಪ್ರಮುಖ ಲಕ್ಷಣವಾಗಿದೆ. ಕ್ಯಾನ್ಸರ್ ಸಮಯದಲ್ಲಿ, ಒಬ್ಬ ವ್ಯಕ್ತಿಯು ಅತ್ಯಂತ ದುರ್ಬಲ, ನಿರಾಸಕ್ತಿ ಮತ್ತು ಶಕ್ತಿಯ ಕೊರತೆಯನ್ನು ಅನುಭವಿಸುತ್ತಾನೆ. ಈ ಆಯಾಸವು ಕ್ರಮೇಣ ಹೆಚ್ಚಾಗುತ್ತದೆ. ಇದು ಹಾಸಿಗೆಯಿಂದ ಎದ್ದೇಳಲು ಕಷ್ಟವಾಗುವಂತಹ ಸ್ಥಿತಿಗೆ ಬಂದು ತಲುಪಿಸಬಹುದು.

ತೂಕ ನಷ್ಟ:

ತೂಕ ನಷ್ಟವು ಕ್ಯಾನ್ಸರ್​​ನ ಮೊದಲ ಚಿಹ್ನೆಗಳಲ್ಲಿ ಒಂದಾಗಿದೆ ಮತ್ತು ಅನೇಕ ಜನರು ತಖ ನಷ್ಟವನ್ನು ನಿರ್ಲಕ್ಷ್ಯಿಸುತ್ತಾ ಹೋಗುತ್ತಾರೆ. ಆದರೆ ನೀವು ಯಾವುದೇ ಕಾರಣವಿಲ್ಲದೇ ಇದ್ದಕ್ಕಿದ್ದಂತೆ ತೂಕ ನಷ್ಟವನ್ನು ಅನುಭವಿಸುತ್ತಿದ್ದರೆ ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದು ಸೂಕ್ತ.

ಚರ್ಮದ ಸಮಸ್ಯೆ:

ಲ್ಯುಕೇಮಿಯಾ ಇರುವವರಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಚರ್ಮದ ಅಡಿಯಲ್ಲಿ ಸಣ್ಣ ರಕ್ತನಾಳಗಳಲ್ಲಿ ಒಡೆಯುವಿಕೆಯಿಂದಾಗಿ ಈ ದದ್ದು ಸಂಭವಿಸುತ್ತದೆ. ರಕ್ತ ಕಣಗಳ ಸಂಯೋಜನೆಯಲ್ಲಿ ಅಸಮತೋಲನದಿಂದಾಗಿ, ಚರ್ಮದಲ್ಲಿ ಹಲವಾರು ಬದಲಾವಣೆಗಳು ಕಂಡು ಬರುತ್ತದೆ.

ಇದನ್ನೂ ಓದಿ: ಮಧುಮೇಹ ತಡೆಗಟ್ಟುವಿಕೆ ಮತ್ತು ನಿರ್ವಹಣೆಯಲ್ಲಿ ಈರುಳ್ಳಿಯ ಪ್ರಯೋಜನಗಳು

ಕಣ್ಣು ನೋವು:

ಕಣ್ಣುಗಳಲ್ಲಿ ನೋವು ಕಣ್ಣುಗಳಲ್ಲಿ ಕ್ಯಾನ್ಸರ್ ಬೆಳವಣಿಗೆಯ ಆರಂಭಿಕ ಚಿಹ್ನೆಗಳಲ್ಲಿ ಒಂದಾಗಿದೆ. ಈ ನೋವನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ. ಒಂದಕ್ಕಿಂರ ಹೆಚ್ಚುನ ದಿನಗಳ ಕಾಲ ಕಣ್ಣಲ್ಲಿ ನೋವು ಕಾಣಿಸಿಕೊಂಡರೆ ನಿಮ್ಮ ಹತ್ತಿರದ ನೇತ್ರತಜ್ಞರನ್ನು ಭೇಟಿ ಮಾಡಿ.

ಆಗಾಗ್ಗೆ ತಲೆನೋವು:

ತಲೆನೋವು, ಮರುಕಳಿಸುವ ಮತ್ತು ಕ್ರಮೇಣ ಹೆಚ್ಚಾಗುವ ಕ್ಯಾನ್ಸರ್ ರೋಗನಿರ್ಣಯದ ರೋಗಿಗಳಲ್ಲಿ ಕಂಡುಬರುತ್ತದೆ. ಬಿಟ್ಟು ಬಿಡದೇ ತಲೆನೋವು ಕಾಣಿಸಿಕೊಂಡರೇ ವೈದ್ಯರನ್ನು ಭೇಟಿ ಮಾಡುವುದು ಅಗತ್ಯವಾಗಿದೆ. ಇದು ಮೆದುಳಿನ ಗೆಡ್ಡೆಯ ಆರಂಭಿಕ ಲಕ್ಷಣವಾಗಿರಬಹುದು.

ಸ್ತನದಲ್ಲಿ ಬದಲಾವಣೆ:

ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಸ್ತನ ಕ್ಯಾನ್ಸರ್ ಬೆಳವಣಿಗೆಯನ್ನು ತಪ್ಪಿಸಲು, ಸ್ವಯಂ ಪರೀಕ್ಷೆ ಅಗತ್ಯ. ಸ್ತನ ಕ್ಯಾನ್ಸರ್ ಹೊಂದಿರುವ ಮಹಿಳೆಯರಲ್ಲಿ ಕಂಡುಬರುವ ಪ್ರಮುಖ ಬದಲಾವಣೆಯೆಂದರೆ ಮೊಲೆತೊಟ್ಟು ಅಥವಾ ಸ್ತನದಲ್ಲಿನ ಬದಲಾವಣೆ. ಮೊಲೆತೊಟ್ಟುಗಳು ತಲೆಕೆಳಗಾದ ಅಥವಾ ಪಕ್ಕಕ್ಕೆ ತಿರುಗುತ್ತಿರುವ ಆಕಾರದಲ್ಲಿ ಬದಲಾಗುತ್ತವೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಬೆಂಗಳೂರು ಆಗಮಿಸಿದ ಮಂಜುನಾಥ್ ದೇಹ
ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಬೆಂಗಳೂರು ಆಗಮಿಸಿದ ಮಂಜುನಾಥ್ ದೇಹ
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ